ETV Bharat / city

ಬೆಂಗಳೂರು: ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆ - Youth stabbed to death in Bangalore

ಅಪರಿಚಿತರು ಯುವಕನನ್ನು ಚೂರಿಯಿಂದ ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

youth-stabbed-to-death-in-bangalore
ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆ: ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲು
author img

By

Published : Apr 5, 2022, 12:54 PM IST

ಬೆಂಗಳೂರು: ತಡರಾತ್ರಿ ಯುವಕನನ್ನು ಅಪರಿಚಿತರು ಕೊಲೆಗೈದಿರುವ ಘಟನೆ ಜಗಜೀವನರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. ಮೃತ ಯುವಕನನ್ನು ಚಂದ್ರಶೇಖರ್(19) ಎಂದು ಗುರುತಿಸಲಾಗಿದೆ. ಐಟಿಐ ವ್ಯಾಸಂಗ ಮಾಡಿದ್ದ ಚಂದ್ರಶೇಖರ್, ರೈಲ್ವೇ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.

ಕಳೆದ ರಾತ್ರಿ ಸ್ನೇಹಿತ ಸೈಮನ್ ಎಂಬಾತನ ಹುಟ್ಟುಹಬ್ಬದ ಪ್ರಯುಕ್ತ ಚಂದ್ರಶೇಖರ್ ಹೊರಗಡೆ ತೆರಳಿದ್ದ ಎಂದು ತಿಳಿದುಬಂದಿದೆ. ರಾತ್ರಿ ಮಾರ್ಗಮಧ್ಯೆ ಬೈಕ್ ತಗುಲಿದ ವಿಚಾರಕ್ಕಾಗಿ ಅಪರಿಚಿತರೊಂದಿಗೆ ಗಲಾಟೆ ನಡೆದು‌ ಜಗಳ ತಾರಕಕ್ಕೇರಿದೆ. ಈ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವಕನ ಸ್ನೇಹಿತರು ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.