ETV Bharat / city

ಹಣಕಾಸಿನ ವಿಚಾರಕ್ಕೆ ಗಲಾಟೆ: ಕಾಲೇಜು ಮೈದಾನಕ್ಕೆ ಕರೆಸಿಕೊಂಡು ಯುವಕನ ಕೊಲೆ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಬೆಂಗಳೂರಿನ ಆಚಾರ್ಯ ಕಾಲೇಜು ಮೈದಾನದಲ್ಲಿ ಹಣಕಾಸಿನ ವಿಚಾರಕ್ಕೆ ಯುವಕನೋರ್ವವನ್ನು ನಾಲ್ಕೈದು ಮಂದಿ ಚಾಕುವಿನಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ.

youth-murdered-in-college-ground-in-bengaluru
ಹಣಕಾಸಿನ ವಿಚಾರಕ್ಕೆ ಗಲಾಟೆ: ಕಾಲೇಜು ಮೈದಾನಕ್ಕೆ ಕರೆಸಿಕೊಂಡು ಯುವಕನ ಕೊಲೆ
author img

By

Published : Aug 22, 2021, 1:27 AM IST

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನಿಗೆ ನಾಲ್ಕೈದು ಮಂದಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಆಚಾರ್ಯ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದಿದೆ.

ಸೋಲದೇವನಹಳ್ಳಿಯ ರವಿಕುಮಾರ್ (28) ಮೃತ ಯುವಕನಾಗಿದ್ದಾನೆ. ರವಿಕುಮಾರ್ ಎಂಬಿಎ ಪದವೀಧರನಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು.

ಕೆಲವರು ಮಾತನಾಡುವ ಸಲುವಾಗಿ ರವಿಕುಮಾರ್​​ನನ್ನು ಶನಿವಾರ ಸಂಜೆ ಏಳು ಗಂಟೆ ಸುಮಾರಿಗೆ ಸೋಲದೇನವಹಳ್ಳಿಯ ಆಚಾರ್ಯ ಕಾಲೇಜು ಮೈದಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮತ್ತು ರವಿಕುಮಾರ್ ನಡುವೆ ಮಾತಿನ ಚಕಮಕಿ ನಡೆದು ರವಿಕುಮಾರ್​​ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಸ್ಥಳೀಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದೆ. ಈ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಹಣಕಾಸಿನ ವಿಚಾರಕ್ಕೆ ದುಷ್ಕರ್ಮಿಗಳು ಕರೆಸಿಕೊಂಡು ಹತ್ಯೆಗೈದಿದ್ದಾರೆ ಎಂಬ ಮಾಹಿತಿಯಿದೆ. ರವಿಕುಮಾರ್ ಮೊಬೈಲ್ ನೆಟ್‍ವರ್ಕ್, ಸಿಡಿಆರ್ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.