ETV Bharat / city

ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿ ಉದ್ಘಾಟಿಸಿದ ಮುಖ್ಯಮಂತ್ರಿ - chief minister b.s.yadiyurappa

ಐಎಎಸ್​ ಮತ್ತು ಐಪಿಎಸ್​ ಆಗಬೇಕು ಎಂಬ ಕನಸು ಹೊತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಸಲುವಾಗಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್​ ಅಕಾಡೆಮಿ ಕಟ್ಟಡವನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

yadiyurappa-inauguration-sardar-vallabhay-patel-academi
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
author img

By

Published : Jun 13, 2020, 1:10 PM IST

Updated : Jun 13, 2020, 1:17 PM IST

ಬೆಂಗಳೂರು: ಬಿಬಿಎಂಪಿಯಿಂದ ಯಡಿಯೂರು ಕೆರೆ ಮುಂಭಾಗ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಇಂದು ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿ ಅನುದಾನದಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

ನಂತರ ಮಾತನಾಡಿದ ಅವರು, ಅಭಿವೃದ್ಧಿಗೆ ಮಾದರಿಯಾಗಿರುವ ಯಡಿಯೂರು ವಾರ್ಡ್​​ನಲ್ಲಿ ಮತ್ತೊಂದು ಉಪಯುಕ್ತ ಯೋಜನೆ ಸಾಕಾರಗೊಂಡಿರುವುದು ಸಂತಸದ ವಿಷಯ ಎಂದರು.

ಅಕಾಡೆಮಿಯ ಉದ್ದೇಶ: ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್​​​​​​​ರ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್​​ಸಿ ಹಾಗೂ ಕೆಪಿಎಸ್​​ಸಿ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಬಿಎಸ್​ವೈ ಹೇಳಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ಅಕಾಡೆಮಿ ಉದ್ಘಾಟಿಸಿದ ಮುಖ್ಯಮಂತ್ರಿ

IAS, IPS, IFS, IRS ಮತ್ತು KAS ಆಗಲು ಬಯಸಿರುವ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ. ಅಕಾಡೆಮಿಯಲ್ಲಿ ಡಿಜಿಟಲ್ ಗ್ರಂಥಾಲಯ ಕೂಡ ಇದೆ. ಬಹುಶಃ ದೇಶದಲ್ಲಿ ಇಷ್ಟು ದೊಡ್ಡ ಡಿಜಿಟಲ್ ಗ್ರಂಥಾಲಯವಿಲ್ಲ ಎಂದು ಅವರು ತಿಳಿಸಿದರು.

Last Updated : Jun 13, 2020, 1:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.