ETV Bharat / city

ಬಜೆಟ್ ಸಂಪೂರ್ಣ ನಿರಾಶಾದಾಯಕ; ಎಸ್​.ಆರ್​. ಪಾಟೀಲ - ಕರ್ನಾಟಕ ಬಜೆಟ್ ಲೈವ್

ಸಿಎಂ ಮಂಡಿರುವ ಬಜೆಟ್​ನಲ್ಲಿ ವಿಶೇಷ ಏನು ಇಲ್ಲ. ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ. ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಇದು ನಿರಾಶಾದಾಯಕ ಬಜೆಟ್ ಎಂದು ವಿಧಾನ ಪರಿಷತ್​​ ಪ್ರತಿಪಕ್ಷ ನಾಯಕ ಎಸ್​. ಆರ್​. ಪಾಟೀಲ್​ ಹೇಳಿದರು.

yadiyurappa-budget-is-a-complete-disappointment
ಎಸ್​ ಆರ್​ ಪಾಟೀಲ್​
author img

By

Published : Mar 8, 2021, 3:41 PM IST

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ, ಯಾವುದೇ ಕ್ಷೇತ್ರಕ್ಕೂ ಆದ್ಯತೆ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಮಂಡಿಸಿರುವ ಬಜೆಟ್​ನಲ್ಲಿ ವಿಶೇಷ ಏನೂ ಇಲ್ಲ. ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ. ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಇದು ನಿರಾಶಾದಾಯಕ ಬಜೆಟ್ ಎಂದರು.

ರಾಜ್ಯ ಬಜೆಟ್​ ಕುರಿತು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಎಸ್​. ಆರ್​. ಪಾಟೀಲ್​​ ಪ್ರತಿಕ್ರಿಯೆ

31ನೇ ಜಿಲ್ಲೆಯಾದ ವಿಜಯನಗರಕ್ಕೆ ಒಂದು ರೂ. ಹಣ ಮೀಸಲಿಟ್ಟಿಲ್ಲ. ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿದೆ. ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತಿವಿ ಅಂತ ಹೇಳಿರೋದನ್ನ ಬಜೆಟ್​ನಲ್ಲಿ ಸಿಎಂ ಹೇಳಿದ್ದಾರೆ, ಆದ್ರೆ ಹಣವನ್ನೇ ನೀಡಿಲ್ಲ ಎಂದು ಹೇಳಿದರು.

ಜನಪರ ಸರ್ಕಾರವಲ್ಲ, ಸಿಡಿ ಸರ್ಕಾರ ಇದು

ಕೇವಲ ಇದು ಭಾಷಣದ ಬಜೆಟ್. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಪೂರಕವಾಗಿಲ್ಲ. ಜನ ವಿರೋಧಿ ಸರ್ಕಾರ ಇದಾಗಿದೆ. ಸರ್ಕಾರದ ವಿರುದ್ಧ ಮೇಲ್ಮನೆ, ಕೆಳಮನೆಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಯಡಿಯೂರಪ್ಪನವರ ಜನಪರ ಸರ್ಕಾರವಲ್ಲ ಇದು, ಯಡಿಯೂರಪ್ಪನವರ ಸಿಡಿ ಸರ್ಕಾರ ಇದು. ಬಜೆಟ್ ಮಾಡುವ ಅರ್ಹತೆ, ನೈತಿಕತೆ ಈ ಸರ್ಕಾರಕ್ಕೆ ಇಲ್ಲ. ಯಾವ ವರ್ಗಕ್ಕೂ ಈ ಬಜೆಟ್ ಸಹಕಾರಿಯಾಗಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಇದು ನಿರಾಶದಾಯಕ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.