ETV Bharat / city

ಒಮಿಕ್ರಾನ್ ನಂತರ ಇದೀಗ XE, ME ರೂಪಾಂತರಿ ಭೀತಿ ; ತುರ್ತು ಸಭೆ ನಡೆಸಿದ ತಾಂತ್ರಿಕ ಸಲಹಾ ಸಮಿತಿ.. - 8 ದೇಶಗಳಲ್ಲಿ ನಾಲ್ಕನೇ ಅಲೆ

ಜನ ಮಾಸ್ಕ್ ಹಾಕೋದನ್ನೇ ಮರೆತಿದ್ದಾರೆ. ಹೀಗಾಗಿ, ಮಾಸ್ಕ್ ಬಳಕೆ ಮಾಡೋದು ಮುಂದುವರೆಸಿ. ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ‌ಕಂಡು ಬಂದಿದೆ. ಸೋಂಕು ಹೆಚ್ಚಳ ಆಗಿ ನಂತರ ವ್ಯಾಕ್ಸಿನೇಷನ್​ಗೆ ಮುಗಿಬೀಳಬೇಡಿ. ಈಗಲೇ ನಿಮ್ಮ ಅವಧಿ ಬಂದಾಗ ಬೂಸ್ಟರ್ ಡೋಸ್ ಪಡೆಯಿರಿ ಅಂತಾ ಮನವಿ ಮಾಡಿದರು..

XE, ME mutant phobia now after Omicron
ಒಮಿಕ್ರಾನ್ ರೂಪಾಂತರಿ ಭೀತಿ ತುರ್ತು ಸಭೆ
author img

By

Published : Apr 11, 2022, 5:56 PM IST

Updated : Apr 11, 2022, 7:05 PM IST

ಬೆಂಗಳೂರು : ರೂಪಾಂತರಿ ಕೋವಿಡ್ ಸೋಂಕಿನ ತೀವ್ರತೆ ಕಡಿಮೆ ಆಯ್ತು ಎನ್ನುವಾಗಲೇ ಮತ್ತೊಂದು ಹೊಸ ರೂಪಾಂತರಿ XE ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ನೇತೃತ್ವದಲ್ಲಿ ಆರೋಗ್ಯ ಸಚಿವ ಸುಧಾಕರ್ ತುರ್ತು ಸಭೆ ನಡೆಸಿದರು.‌

ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, 8 ದೇಶಗಳಲ್ಲಿ ನಾಲ್ಕನೇ ಅಲೆ ಹೆಚ್ಚಾಗಿದೆ. XE ಹಾಗೂ ME ಎಂಬ ಹೊಸ ಪ್ರಬೇಧ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಹರಿಯಾಣ, ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ, ತುರ್ತು ಸಭೆ ಮಾಡಿ ಸಮಾಲೋಚನೆ ಮಾಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಆರೋಗ್ಯ ಸಚಿವ ಸುಧಾಕರ್ ತುರ್ತು ಸಭೆ

ಏರ್ಪೋರ್ಟ್​ಗೆ ಬಂದ ಬಳಿಕ ಅವರಿಗೆ ಟೆಸ್ಟ್ ಮಾಡಿ, ಮನೆಗೆ ಹೋದ ಬಳಿಕ ಟೆಲಿ ಮಾನಿಟರಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. IIT ಕಾನ್ಪುರ್ ರಿಪೋರ್ಟ್ ‌ಪ್ರಕಾರ ಜೂನ್-ಜುಲೈನಲ್ಲಿ ನಾಲ್ಕನೇ ಅಲೆ ಬರುತ್ತೆ ಎಂದು ಹೇಳಿದ್ದಾರೆ. ಜನ ಮಾಸ್ಕ್ ಹಾಕೋದನ್ನೇ ಮರೆತಿದ್ದಾರೆ. ಹೀಗಾಗಿ, ಮಾಸ್ಕ್ ಬಳಕೆ ಮಾಡೋದು ಮುಂದುವರೆಸಿ. ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ‌ಕಂಡು ಬಂದಿದೆ. ಸೋಂಕು ಹೆಚ್ಚಳ ಆಗಿ ನಂತರ ವ್ಯಾಕ್ಸಿನೇಷನ್​ಗೆ ಮುಗಿಬೀಳಬೇಡಿ. ಈಗಲೇ ನಿಮ್ಮ ಅವಧಿ ಬಂದಾಗ ಬೂಸ್ಟರ್ ಡೋಸ್ ಪಡೆಯಿರಿ ಅಂತಾ ಮನವಿ ಮಾಡಿದರು.

ಯಾವ್ಯಾವ ದೇಶಗಳಲ್ಲಿ ಹೆಚ್ಚಳ? : ದಕ್ಷಿಣ ಕೋರಿಯಾ, ಹಾಂಕಾಂಗ್, ಚೀನಾ ಈ ಮೂರು ದೇಶಗಳಲ್ಲಿ ವೈರಸ್‌ ಹೆಚ್ಚಿದೆ. ಉಳಿದಂತೆ ಯುಕೆ, ಕೋರಿಯಾ, ಜರ್ಮನಿ ಸೇರಿದಂತೆ ಎಂಟು ದೇಶಗಳಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ. ಸದ್ಯ ರೋಗದ ತೀವ್ರತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಆಯಾ ದೇಶಗಳ ವರದಿ ಕೊಡುವಂತೆ ಕಮಿಟಿಗೆ ಹೇಳಲಾಗಿದೆ. ಆದರೆ, ತಜ್ಞರು ಸ್ಪಷ್ಟವಾಗಿ ಹೇಳಿದ್ದು, ತಡಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಎಚ್ಚರಿಸಿದ್ದಾರೆ ಎಂದು ಸಚಿವರು ವಿವರಿಸಿದರು.

ದರ ನಿಗದಿ : ಕೋವಿಡ್ ಸಮಯದಲ್ಲಿ ನಿಗದಿ ಮಾಡಲಾಗಿದ್ದ ಖಾಸಗಿ ಆಸ್ಪತ್ರೆ ದರ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಇದಕ್ಕಾಗಿ ಪ್ರತ್ಯೇಕ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.‌ ಕೆಲ ಖಾಸಗಿ ಆಸ್ಪತ್ರೆ ಗಳಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡ್ತಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಅತಿಯಾದ ಬಿಲ್ಲಿಂಗ್ ಮಾಡೋದು ಗಮನಕ್ಕೆ ಬಂದಿದೆ. ಕೊರೊನಾ ಟೈಂನಲ್ಲಿ ಮಾತ್ರವಲ್ಲ ಎಲ್ಲಾ ಟೈಂನಲ್ಲಿಯೂ ಇದು ಅಪ್ಲೇ ಆಗಬೇಕು ಅಂದರು. ಸಿಟಿ ಸ್ಕ್ಯಾನ್, ಎಂಆರ್​ಐಗೆ ದರ ನಿಗದಿ ಮಾಡಲಾಗಿದ್ದು, ಎರಡು ದಿನದಲ್ಲಿ ದರ ನಿಗದಿಯ ಆದೇಶ ಹೊರಡಿಸಲಾಗುತ್ತೆ. ಬಿಪಿಎಲ್​ಗೆ ಒಂದು ದರ ಎಪಿಎಲ್​ಗೆ ಒಂದು ದರ ನಿಗದಿ ಮಾಡಲಾಗಿದೆ. ರೋಗಿಗಳಿಂದ ಹಣ ಹೆಚ್ಚು ಸುಲಿಗೆ ಮಾಡಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತೆ ಅಂತಾ ಎಚ್ಚರಿಕೆ ನೀಡಿದರು.

ನಿರ್ಲಕ್ಷ್ಯ ಬೇಡ : ನಾಲ್ಕನೆಯ ಅಲೆ ಬಂದು ಆಸ್ಪತ್ರೆ ಯಲ್ಲಿ ದಾಖಲಾದ ಮೇಲೆ ಲಸಿಕೆ ಹಾಕಿಸಿಕೊಳ್ತೀರಾ‌.! ಯಾಕೆ ಈ ನಿರ್ಲಕ್ಷ್ಯ..? 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್​ ಅನ್ನು ಹಾಕಿಕೊಂಡಿಲ್ಲ. 2% ಜನ ಎರಡನೇ ಡೋಸ್ ಹಾಕಿಕೊಂಡಿಲ್ಲ‌. ನಾಲ್ಕನೆ ಅಲೆ ಬಂದಾಗ ಕೊರೊನಾ ಹೆಚ್ಚಾದ್ರೇ ಸರ್ಕಾರವನ್ನು ಹೊಣೆಗಾರಿಕೆ ಮಾಡ್ತೀರಾ. ಮಕ್ಕಳು ಕೂಡ ಕೊರೊನಾ ಲಸಿಕೆ ತೆಗೆದುಕೊಂಡಿಲ್ಲ‌‌. ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಎಂದರು.

ಇದನ್ನೂ ಓದಿ: ಇದು ಅತ್ಯಂತ ಮುಖ್ಯ.. ಉಕ್ರೇನ್​ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗಿ : ಪಿಎಂಗೆ ಪತ್ರ ಬರೆದ ಎಂಬಿ ಪಾಟೀಲ್‌

Last Updated : Apr 11, 2022, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.