ETV Bharat / city

ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಸಂಗ್ರಹಿಸಲು ಗುಪ್ತಚರ ಇಲಾಖೆಗೆ ಸರ್ಕಾರದ ಸೂಚನೆ

ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಸಂಗ್ರಹಿಸಲು ಗುಪ್ತಚರ ಇಲಾಖೆ ಸೂಚಿಸಿದ ರಾಜ್ಯ ಸರ್ಕಾರ ನಡೆ ಪಠ್ಯಪುಸ್ತಕ ವಿವಾದ ಮಾಸುವ‌ ಮುನ್ನವೇ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

author img

By

Published : Jun 6, 2022, 11:02 PM IST

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶಾಲಾ ಪರಿಷ್ಕೃತ ಪಠ್ಯಪುಸ್ತಕ ಉಂಟಾದ ವಿವಾದ ಮಾಸುವ ಮುನ್ನವೇ ಪಠ್ಯಪುಸ್ತಕ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರದ ಕುರಿತು ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಗುಪ್ತಚರ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಬರಹಗಾರ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಬಲಪಂಥೀಯ ಧೋರಣೆ ಅಂಶಗಳಿರುವ ಪಠ್ಯದ ವಿರುದ್ಧ ಸಾಹಿತಿ ವಲಯ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ಕೇಳಿಬಂದಿತ್ತು. ವಿವಾದ ತಣ್ಣಗಾಗಿಸಲು ಸಿಎಂ ಬೊಮಾಯ್ಮಿ ಮಧ್ಯೆ ಪ್ರವೇಶಿಸಿ ಸಮಿತಿಯನ್ನು ವಿಸರ್ಜನೆಗೊಳಿಸಿ ಭುಗಿಲೆದ್ದಿರುವ ಬೌದ್ಧಿಕ ಸಮರಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೂ ಕೈಹಾಕಿದ್ದರು.

ಇದೀಗ ಗುಪ್ತಚರ ಇಲಾಖೆ ಮೂಲಕ ಪರಿಷ್ಕೃತ ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಹಿನ್ನೆಲೆ, ವೈಯಕ್ತಿಕ ವಿವರ, ಅವರ ಸಿದ್ಧಾಂತ ಸೇರಿದಂತೆ‌ ಪ್ರತಿಯೊಂದು ಅಂಶಗಳ ಬಗ್ಗೆಯೂ ಸಂಪೂರ್ಣವಾಗಿ ವಿವರ ಸಂಗ್ರಹಿಸಿ ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.‌‌ ಈ ಬೆಳವಣಿಗೆಯೂ ಮುಂದಿನ ದಿನಗಳಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಪಠ್ಯ ವಿರೋಧಿಸಿದ್ದ ಸಾಹಿತಿಗಳ ಪಟ್ಟಿ ಮಾಡಿದ ಸರ್ಕಾರ ?: ಕೇವಲ ಆರ್​ಎಸ್ಎಸ್ ಹಾಗೂ ಬಿಜೆಪಿ ಸಿದ್ಧಾಂತ ಅಳವಡಿಸುವುದಲ್ಲದೆ ಖ್ಯಾತ ಸಾಹಿತಿಗಳ ಪಠ್ಯ ಕೈಬಿಟ್ಟಿದ್ದ ಆರೋಪ ಹೊತ್ತಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಕೆಲ ಸಾಹಿತಿಗಳು ಅಕ್ರೋಶ ವ್ಯಕ್ತಪಡಿಸಿದ್ದರು‌. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಲೇಖನವನ್ನ ಪಠ್ಯದಿಂದ ಕೈ ಬಿಡುವಂತೆ ಹೇಳಿದ್ದರು‌. ಇದರಿಂದ ಸರ್ಕಾರಕ್ಕೂ ಮುಜುಗರವಾಗಿತ್ತು. ಪತ್ರ ಬರೆದಿದ್ದ ಸಾಹಿತಿ, ಲೇಖಕರ ಬಗ್ಗೆ ಪಟ್ಟಿ ಮಾಡಿರುವ ಸರ್ಕಾರ ಪ್ರತಿಯೊಂದು ಅಂಶಗಳ ಬಗ್ಗೆ ವಿವರ ಕಲೆ ಹಾಕುವಂತೆ ಸೂಚನೆ ನೀಡಿದೆ.

ಸಾಹಿತಿಗಳ ಹೆಸರು, ಫೋನ್ ನಂಬರ್, ವಿಳಾಸ ಜೊತೆಗೆ. ಅವರ ಹುಟ್ಟಿನಿಂದ ಹಿಡಿದು ಬೆಳೆದು ಬಂದ ಹಾದಿ, ಯಾವ ಜಾತಿ, ಯಾವ ಸಿದ್ಧಾಂತ, ಅವರ ಆಸ್ತಿ‌ ಮೊತ್ತ, ಇದುವರೆಗೂ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದೆಯಾ? ದಾಖಲಾಗಿದ್ದರೆ ಯಾವ ಪ್ರಕರಣ, ಈ ಹಿಂದೆ ವಿವಾದಾತ್ಮಕ ಭಾಷಣ ಮಾಡಿದ್ದರಾ? ಯಾವ್ಯಾವ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ? ಸೇರಿದಂತೆ ಇನ್ನಿತರ ಬಗ್ಗೆ ವಿವರ ಕಲೆ ಹಾಕುವಂತೆ ಸರ್ಕಾರ ಸೂಚನೆ ನೀಡಿದೆ. ಇದರಂತೆ ಸದ್ದಿಲ್ಲದೆ ಗುಪ್ತಚರ ಇಲಾಖೆಯು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ ಯಾವುದಾದರೂ ವಿಷಯದಲ್ಲಿ ತಪ್ಪು ಎಸಗಿರುವುದು ಕಂಡುಬಂದರೆ ಅಂತಹವರನ್ನು‌ ಶಿಕ್ಷಿಸಲಿದೆಯಾ ಎಂಬ ಗುಮಾನಿ ಕೆಲವರನ್ನು ಕಾಡುತ್ತಿದೆ‌.

ಯಾವ ಸಾಹಿತಿಗಳ ಹೆಚ್ಚು ನಿಗಾ ಗೊತ್ತಾ ?: ಪಠ್ಯದಲ್ಲಿ ಬಲಪಂಥೀಯ ಸಿದ್ಧಾಂತ ಅಳವಡಿಕೆ ಖಂಡಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ದೇವನೂರು ಮಹದೇವ, ಈರಪ್ಪ ಕಂಬಳಿ, ಜಿ.ರಾಮಕೃಷ್ಣ, ರೂಪಾ ಹಾಸನ, ಮುಡ್ನಾಕೂಡು ಚಿನ್ನಸ್ವಾಮಿ, ಬೋಳುವಾರು‌ ಮೊಹಮ್ಮದ್ ಕುಂಇ್, ಚಂದ್ರಶೇಖರ್ ತಾಳ್ಯ, ಡಾ.ಎಚ್.ಎಸ್.ಅನುಫಮಾ ಹಾಗೂ‌ ದು.ಸರಸ್ವತಿ ಸೇರಿದಂತೆ ಹಲವು ಮಂದಿ ಸಾಹಿತಿ, ಲೇಖಕರು ಸರ್ಕಾರಕ್ಕೆ ತಮ್ಮ‌ ಪಠ್ಯ ಕೈ ಬಿಡುವಂತೆ ಪತ್ರ ಬರೆದಿದ್ದರು.‌

ಇನ್ನೂ ಕೆಲವರು ಪರಷ್ಕೃತ ಪಠ್ಯದಲ್ಲಿ ತಮ್ಮ ಲೇಖನವಿಲ್ಲದಿದ್ದರೂ ತಮ್ಮ ಲೇಖನವನ್ನ ಪಠ್ಯಕ್ರಮದಲ್ಲಿ ಅಳವಡಿಸದಂತೆ ಮುಂಗಡವಾಗಿ ಪತ್ರ ಬರೆದಿದ್ದರಿಂದ ಬಹಿರಂಗವಾಗಿಯೇ ಸರ್ಕಾರಕ್ಕೆ‌ ಮುಜುಗರ ಉಂಟಾಗುವಂತೆ ಮಾಡಿತ್ತು. ಈ ನಿಟ್ಟಿನಲ್ಲಿ ಸಾಹಿತಿ ಹಾಗೂ ಬರಹಗಾರರ ಮೇಲೆ ಸರ್ಕಾರ ಹದ್ದಿ‌ನ ಕಣ್ಣಿಟ್ಟಿದೆ. ಒಟ್ಟಾರೆ ಪಠ್ಯಪುಸ್ತಕ ವಿವಾದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಬಿಸಿತುಪ್ಪವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಇನ್ನೊಂದು ತಿಂಗಳಲ್ಲಿ ಆರ್ ಆ್ಯಂಡ್ ಡಿ ನೀತಿ ಜಾರಿ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.