ಆನೇಕಲ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ಇನ್ನು ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿ ಪ್ರದರ್ಶನಕ್ಕಿಡಲಾಯಿತು. ಅಲ್ಲದೇ ಬಿದಿರಿನ ಬುಟ್ಟಿಗಳನ್ನು ತಯಾರಿಸಿ, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನ ಇಡಲಾಯಿತು. ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಸಹ ಸಾರಲಾಯಿತು. ಈ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಕುರಿತು ಸಿಬ್ಬಂದಿ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನ ಶ್ರೀ, ಮಾವುತರ ಮಕ್ಕಳಿಂದ ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ. ಈ ವೇಳೆ ಗಣೇಶ ಚತುರ್ಥಿ ಆಚರಣೆಯಲ್ಲಿ ಯಾರು ಹೆಚ್ಚು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.