ಬೆಂಗಳೂರು: ಪಿಂಕ್ ಬಲೂನ್ಗಳಿಂದ ಅಲಂಕೃತವಾದ ಪೊಲೀಸ್ ಠಾಣೆ, ದಿನವೂ ಇನ್ಸ್ಪೆಕ್ಟರ್ ಕೂರುತ್ತಿದ್ದ ಜಾಗದಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿರಾಜಮಾನ. ಇದು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ಚಿತ್ರಣ.
ಮಹಿಳಾ ದಿನದ ಪ್ರಯುಕ್ತ ನಗರ ಆಯುಕ್ತರ ಸೂಚನೆಯಂತೆ ಇಂದು ಎಲ್ಲಾ ಠಾಣೆಗಳಲ್ಲೂ ಮಹಿಳಾ ಸಿಬ್ಬಂದಿಗೆ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿಯ ಜವಾಬ್ದಾರಿ ವಹಿಸಲಾಗಿತ್ತು. ಇದೇ ವೇಳೆ ಅಪರ ಠಾಣಾಧಿಕಾರಿಯಾಗಿ ಹೆಚ್.ಸಿ ಪ್ರಭಾವತಿ ಅವರು ಅಧಿಕಾರ ವಹಿಸಿಕೊಂಡು, ಮಕ್ಕಳ ಜೊತೆಗೂಡಿ ಕೇಕ್ ಕತ್ತರಿಸಿ ಮಹಿಳಾ ದಿನ ಆಚರಿಸಿದರು.
ಠಾಣೆಗೆ ಬಂದಿದ್ದ ಬ್ಯಾಡರಹಳ್ಳಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪಿ.ಎಸ್.ಐ ಮುರುಳಿ ಕಾನೂನಿನ ಪಾಠ ಮಾಡಿದರು. ಠಾಣೆಯಲ್ಲಿ ಯಾವೆಲ್ಲಾ ವಿಭಾಗಗಳಿರುತ್ತವೆ. ಠಾಣೆಗೆ ಬಂದಾಗ ಸಾರ್ವಜನಿಕರು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಹಾಗೂ ಏನೆಲ್ಲಾ ಉಪಯೋಗ ಪಡೆದುಕೊಳ್ಳಬಹುದು ಎಂಬ ಅರಿವನ್ನು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು. ಈ ಸಮಯದಲ್ಲಿ ವಿದ್ಯಾರ್ಥಿನಿಯರು ಕೂಡ ಅಧಿಕಾರಿಗಳಿಗೆ ಕೆಲವೊಂದು ಪ್ರಶ್ನೆ ಕೇಳಿ ಉತ್ತರವನ್ನು ಪಡೆದರು.
ಇದನ್ನೂ ಓದಿ: ತೈಲ ಬೆಲೆ ಗಗನಕ್ಕೇರುವ ಆತಂಕ: ಜನ ಹಿತಾಸಕ್ತಿ ಗಮನದಲ್ಲಿರಿಸಿ ನಿರ್ಧಾರ- ಕೇಂದ್ರ ಸರ್ಕಾರ