ETV Bharat / city

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೇ ಶಾಸಕರಿಗೆ ವಿಪ್​​ ಜಾರಿ!

ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪರ ಸೂಚನೆ ಮೇರೆಗೆ ಪಕ್ಷದ ಎಲ್ಲಾ ಶಾಸಕರಿಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ವಿಸ್ವಾಸಮತದ ಪರ ಮತ ಚಲಾಯಿಸಬೇಕು ಎಂದು ಬಿಜೆಪಿ ಸಚೇತಕ ಸುನೀಲ್ ಕುಮಾರ್ ವಿಪ್ ಜಾರಿಗೊಳಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ
author img

By

Published : Jul 28, 2019, 11:40 PM IST

ಬೆಂಗಳೂರು: ನಾಳೆ ಸದನದಲ್ಲಿ ವಿಶ್ವಾಸಮತದ ಪರ ಮತ ಚಲಾಯಿಸುವಂತೆ ಬಿಜೆಪಿ ಶಾಸಕರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ವಿಪ್ ಜಾರಿ ಮಾಡಲಾಯಿತು.

ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್​​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಳ್ಳುತ್ತಿದ್ದಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪರ ಸೂಚನೆ ಮೇರೆಗೆ ಪಕ್ಷದ ಎಲ್ಲಾ ಶಾಸಕರಿಗೂ ಬಿಜೆಪಿ ಸಚೇತಕ ಸುನೀಲ್ ಕುಮಾರ್ ವಿಪ್ ಜಾರಿಗೊಳಿಸಿದರು.

ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಮಂಡಿಸಲಿದ್ದು,‌ ಅದರ ಮೇಲಿನ ಚರ್ಚೆ ಪೂರ್ಣಗೊಳ್ಳುವವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ವಿಸ್ವಾಸಮತದ ಪರ ಮತ ಚಲಾಯಿಸಬೇಕು ಎಂದು ವಿಪ್ ನೀಡಲಾಯಿತು.

ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕರ ಅಭಿಪ್ರಾಯ ಕೇಳಿದರು. ಈ ವೇಳೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಸ್ಯೆ ಆಗಿತ್ತು. ಅದನ್ನು ನೀವು ಸರಿ ಮಾಡಿಕೊಡಬೇಕು ಎಂದು ಸಭೆಯಲ್ಲಿ ಶಾಸಕರು ಕೇಳಿಕೊಂಡರು. ಇದಕ್ಕೆ‌ ಪ್ರತಿಕ್ರಿಯೆ ನೀಡಿದ ಸಿಎಂ, ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದರು.

BJP  legislature party meeting
ವಿಪ್ ಪ್ರತಿ

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೋಸ್ಕರ ಕೆಲಸ ಮಾಡುತ್ತಿರುವಾಗ ನಾವು ರಾಜ್ಯಕ್ಕೆ ಕೆಲಸ ಮಾಡಬೇಕು‌. ನೀವುಗಳೆಲ್ಲರೂ ಜನರ ಮಧ್ಯೆಯೇ ಇರಬೇಕು. ಎರಡು ದಿನ ಅಧಿವೇಶನ ಇದೆ. ನಂತರ ಎಲ್ಲಾ ಶಾಸಕರೂ ಸದಸ್ಯತ್ವ ಅಭಿಯಾನಕ್ಕೆ ಇಳಿಯಬೇಕು. ಕೇಂದ್ರದ ನಾಯಕರು ಕೊಟ್ಟಿರುವ ಟಾಸ್ಕ್​​​​ಅನ್ನು ಕಡ್ಡಾಯವಾಗಿ ಪೂರೈಸಲೇಬೇಕು. ಹಾಗೆಯೇ ಅನರ್ಹಗೊಂಡ ಶಾಸಕರು ಕಾನೂನು ಹೋರಾಟ ಮುಂದುವರಿಸುತ್ತಾರೆ. ನಾವು ಅವರ ಬೆಂಬಲಕ್ಕೆ ನಿಲ್ಲೋಣ‌ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಾಳೆ ವಿಶ್ವಾಸಮತ ಸಾಬೀತು ವೇಳೆ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು 12 ಶಾಸಕರಿಗೆ ಜವಾಬ್ದಾರಿ ನೀಡಿದ ಬಿಎಸ್​​ವೈ, ವಿಧಾನಸಭೆ ಸ್ಪೀಕರ್ ರಾಜೀನಾಮೆ ನೀಡಬಹುದು. ಅಂತಹ ಸ್ಥಿತಿ‌ ಎದುರಾದರೆ ಪರ್ಯಾಯಕ್ಕೆ ಬಿಜೆಪಿ ಸಿದ್ಧವಾಗಬೇಕು. ಜೆಡಿಎಸ್​​ನವರೇ ಮಂಡಿಸಿರುವ ಬಜೆಟ್ ಆಗಿರುವ ಕಾರಣ ಧನ ವಿನಿಯೋಗ ವಿಧೇಯಕಕ್ಕೆ ವಿರೋಧ ಮಾಡಲಿಕ್ಕಿಲ್ಲ. ಎಲ್ಲರೂ ನಾಳೆ ಗಂಭೀರವಾಗಿರಿ. ಏನೂ ತೊಂದರೆ ಆಗಬಾರದು ಎಂದು ತಾಕೀತು ಮಾಡಿದ್ದಾರೆ.

ಒಂದೂವರೆ ತಿಂಗಳಿನಿಂದ ಅಧಿಕಾರಿಗಳೂ ಕೂಡಾ ಸ್ವಲ್ಪ ಗೊಂದಲದಲ್ಲಿದ್ದಾರೆ. ಇಷ್ಟು ದಿನ ಕ್ಷೇತ್ರದಿಂದ ದೂರ ಇದ್ದ ಕಾರಣ ಜನರೂ ಕೂಡಾ ಬೇಸರ ಆಗಿರುತ್ತಾರೆ. ಅಧಿವೇಶನ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗಿ ಸೀರಿಯಸ್ ಆಗಿ ಓಡಾಟ ಮಾಡಿ ಎಂದು ಇಂದಿನ ಸಭೆಯಲ್ಲಿ ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Intro:

ಬೆಂಗಳೂರು: ನಾಳೆ ಸದನದಲ್ಲಿ ವಿಶ್ವಾಸ ಮತದ ಪರ ಮತ ಚಲಾಯಿಸುವಂತೆ ಬಿಜೆಪಿ ಶಾಸಕರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ವಿಪ್ ಜಾರಿ ಮಾಡಲಾಯಿತು.

ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಳ್ಳುತ್ತಿದ್ದಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೂಚನೆ ಮೇರೆಗೆ ಪಕ್ಷದ ಎಲ್ಲಾ ಶಾಸಕರಿಗೂ ಬಿಜೆಪಿ ಸಚೇತಕ ಸುನೀಲ್ ಕುಮಾರ್ ವಿಪ್ ಜಾರಿಗೊಳಿಸಿದರು.

ನಾಳೆ ಬೆಳಗ್ಗೆ11 ಗಂಟೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಮಂಡಿಸಲಿದ್ದು‌ ಅದರ ಮೇಕಿನ ಚರ್ಚೆ ಪೂರ್ಣಗೊಳ್ಳುವವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗು ವಿಸ್ವಾಸಮತದ ಪರ ಮತ ಚಲಾಯಿಸಬೇಕು ಎಂದು ವಿಪ್ ನೀಡಲಾಯಿತು.

ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಾಸಕರ ಅಭಿಪ್ರಾಯ ಕೇಳಿದರು ಈ ವೇಳೆ
ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಸ್ಯೆ ಆಗಿತ್ತು, ಅದನ್ನು ನೀವು ಸರಿ ಮಾಡಿಕೊಡಬೇಕು ಎಂದು ಸಭೆಯಲ್ಲಿ ಶಾಸಕರು ಕೇಳಿಕೊಂಡರು.

ಇದಕ್ಕೆ‌ ಪ್ರತಿಕ್ರಿಯೆ ನೀಡಿದ ಸಿಎಂ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶಕ್ಕೋಸ್ಕರ ಕೆಲಸ ಮಾಡುತ್ತಿರುವಾಗ ನಾವು ರಾಜ್ಯಕ್ಕೆ ಕೆಲಸ ಮಾಡಬೇಕು‌ ನೀವುಗಳೆಲ್ಲರೂ ಜನರ ಮಧ್ಯೆಯೇ ಇರಬೇಕು ಎರಡು ದಿನ ಅಧಿವೇಶನ ಇದೆ, ನಂತರ ಎಲ್ಲಾ ಶಾಸಕರೂ ಸದಸ್ಯತ್ವ ಅಭಿಯಾನಕ್ಕೆ ಇಳಿಯಬೇಕು‌ ಕೇಂದ್ರದ ನಾಯಕರು ಕೊಟ್ಟಿರುವ ಟಾಸ್ಕ್ ಅನ್ನು ಕಡ್ಡಾಯವಾಗಿ ಪೂರೈಸಲೇಬೇಕು ಎಂದರು.

ಅನರ್ಹಗೊಂಡ ಶಾಸಕರು ಕಾನೂನು ಹೋರಾಟ ಮುಂದುವರಿಸುತ್ತಾರೆ ನಾವು ಅವರ ಬೆಂಬಲಕ್ಕೆ ನಿಲ್ಲೋಣ‌ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಾಳೆ ವಿಶ್ವಾಸಮತ ಸಾಬೀತು ವೇಳೆ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು 12 ಶಾಸಕರಿಗೆ ಜವಾಬ್ದಾರಿ ನೀಡಿದ ಬಿಎಸ್ವೈ ವಿಧಾನಸಭೆ ಸ್ಪೀಕರ್ ರಾಜೀನಾಮೆ ನೀಡಬಹುದು ಅಂತಹ ಸ್ಥಿತಿ‌ ಎದುರಾದರೆ ಪರ್ಯಾಯಕ್ಕೆ ಬಿಜೆಪಿ ಸಿದ್ದವಾಗಬೇಕು ಎಂದು ತಿಳಿಸಿದ್ದಾರೆ.

ಜೆಡಿಎಸ್ ನವರೇ ಮಂಡಿಸಿರುವ ಬಜೆಟ್ ಆಗಿರವ ಕಾರಣ ಧನ ವಿನಿಯೋಗ ವಿಧೇಯಕಕ್ಕೆ ವಿರೋಧ ಮಾಡಲಿಕ್ಕಿಲ್ಲ ಎಲ್ಲರೂ ನಾಳೆ ಗಂಭೀರವಾಗಿರಿ, ಯಾವುದೂ ಏನೂ ತೊಂದರೆ ಆಗಬಾರದು ಎಂದು ತಾಕೀತು ಮಾಡಿದ್ದಾರೆ.

ಒಂದೂವರೆ ತಿಂಗಳಿನಿಂದ ಅಧಿಕಾರಿಗಳೂ ಕೂಡಾ ಸ್ವಲ್ಪ ಗೊಂದಲದಲ್ಲಿದ್ದಾರೆ‌ ಇಷ್ಟು ದಿನ ಕ್ಷೇತ್ರದಿಂದ ದೂರ ಇದ್ದ ಕಾರಣ ಜನರೂ ಕೂಡಾ ಬೇಸರ ಆಗಿರುತ್ತಾರೆ
ಅಧಿವೇಶನ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗಿ ಸೀರಿಯಸ್ ಆಗಿ ಓಡಾಟ ಮಾಡಿ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.