ಬೆಂಗಳೂರು: ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಒಳಗೊಂಡಂತೆ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಕೊರೊನಾ ಮತ್ತು ಲಾಕ್ಡೌನ್ನಿಂದಾಗಿ ಮುಖ್ಯ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದವು. ಸದ್ಯ ರಾಜ್ಯದಲ್ಲಿ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡಲಾಗಿದೆ. ಆದರೆ ಇದೀಗ ಶಾಲೆಗಳ ಆರಂಭ ಯಾವಾಗ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಈ ಕುರಿತು ಮ ನಿಮುಂದಿನ ವಾರ ಅಂತಿರ್ಧಾರ ಹೊರಬೀಳಲಿದೆ.
ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿಗಳ ಆರಂಭದ ದಿನಾಂಕವನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಚಿವ ಸುರೇಶ್ ಕುಮಾರ್ ನಿರ್ಧರಿಸಿದ್ದಾರೆ. ಇತ್ತ ತರಗತಿಗಳನ್ನು ಈಗಾಗಲೇ ಪ್ರಾರಂಭಿಸಬಾರದೆಂದು ಪೋಷಕರ ಒತ್ತಡವೂ ಸಹ ಸಚಿವರ ಮೇಲೆ ಇದೆಯಂತೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿ ಇದನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ದಿನೆ ದಿನೇ ಏರಿಕೆಯಾಗುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಶಾಲೆಗಳು ಪ್ರಾರಂಭವಾದರೆ ಯಾವ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳು ಕೂರಲು ಯಾವ ರೀತಿ ವ್ಯವಸ್ಥೆ ಮಾಡಬೇಕು, ಯಾವ ತರಗತಿಗಳಿಗೆ ಪಾಳಿ ವ್ಯವಸ್ಥೆ ಅವಶ್ಯಕ ಎಂಬುದರ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ.
ಪ್ರಾರ್ಥನೆಯಿಂದ ಹಿಡಿದು ಮಧ್ಯಾಹ್ನದ ಊಟದ ವಿರಾಮ, ಶಾಲಾ ಮೈದಾನದಲ್ಲಿ ಆಟದ ಸಮಯ, ಶೌಚಾಲಯ ವ್ಯವಸ್ಥೆ, ಅಲ್ಲಿನ ಸ್ವಚ್ಛತೆ ಹೇಗೆ ಕಾಪಾಡಬೇಕು ಎನ್ನುವುದರ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ವಾರ ಶಾಲೆಗಳ ಪ್ರಾರಂಭದ ದಿನಾಂಕವನ್ನು ನಿಗದಿ ಮಾಡಲು ರೂಪುರೇಷೆಗಳು ತಯಾರಾಗುತ್ತಿವೆ. ಕೊರೊನಾ ನಿಯಂತ್ರಣಕ್ಕೆ ಬರದಿದ್ದರೂ ಶಾಲೆಗಳನ್ನು ಆರಂಭ ಮಾಡುತ್ತಾರಾ? ಅಥವಾ ಜೂನ್ನಲ್ಲೇ ಶಾಲೆಗಳು ಆರಂಭವಾಗುತ್ತವೆಯಾ? ಎಸ್ಎಸ್ಎಲ್ಸಿ ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳು ಶುರುವಾಗುತ್ತಾ? - ಇದೆಕ್ಕೆಲ್ಲ ಉತ್ತರ ಮುಂದಿನ ವಾರ ಸಿಗಲಿದೆ.