ETV Bharat / city

ಜಾತಿ ಗಣತಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ: ಅಷ್ಟಕ್ಕೂ ವರದಿಗೆ ಸುತ್ತಿರುವ ವಿವಾದದ ಹುತ್ತ ಏನು? - ಬೆಂಗಳೂರು ಜಾತಿ ಗಣತಿ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿಗಣತಿ ಸಮೀಕ್ಷೆಗೆ ಚಾಲನೆ ನೀಡಿದ್ದರು. ಆದರೆ ಇದುವರೆಗೂ ಜಾತಿಗಣತಿ ವರದಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.‌ ಈ ಜಾತಿ ಗಣತಿಗಾಗಿ ಸರ್ಕಾರ ಬರೋಬ್ಬರಿ 185 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಇದುವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.‌

ಜಾತಿ ಗಣತಿ
ಜಾತಿ ಗಣತಿ
author img

By

Published : Aug 28, 2021, 3:29 AM IST

ಬೆಂಗಳೂರು: ಜಾತಿ ಗಣತಿ ವರದಿ ವಿಚಾರ ಇದೀಗ‌ ಮತ್ತೆ ಮುನ್ನಲೆಗೆ ಬಂದಿದೆ.‌ ಜಾತಿಗಣತಿಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ಇದೀಗ ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸುತ್ತಿದ್ದಾರೆ. ಅಷ್ಟಕ್ಕೂ ರಾಜಕೀಯವಾಗಿ ಸದ್ದು ಮಾಡುತ್ತಿರುವ ಈ ಜಾತಿಗಣತಿ ವರದಿ ಏನು? ಅದಕ್ಕೆ ಸುತ್ತಿಕೊಂಡಿರುವ ವಿವಾದ ಏನು? ಎಂಬ ವರದಿ‌ ಇಲ್ಲಿದೆ.

ಜಾತಿ ಗಣತಿ ವರದಿ ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸುದ್ದಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿಗಣತಿ ಸಮೀಕ್ಷೆಗೆ ಚಾಲನೆ ನೀಡಿದ್ದರು. ಆದರೆ ಇದುವರೆಗೂ ಜಾತಿಗಣತಿ ವರದಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.‌ ಈ ಜಾತಿ ಗಣತಿಗಾಗಿ ಸರ್ಕಾರ ಬರೋಬ್ಬರಿ 185 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಇದುವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.‌ ರಾಜಕೀಯ ಕಾರಣದಿಂದ ನೂರಾರು ಕೋಟಿ ಖರ್ಚು ಮಾಡಿ ತಯಾರಿಸಲಾದ ಜಾತಿಗಣತಿ ವರದಿ ಬಿಡುಗಡೆ ಕಾಣದೆ, ಸರ್ಕಾರಿ ಕಡತಗಳ ಮಧ್ಯೆ ಧೂಳು ಹಿಡಿಯುವಂತಾಗಿದೆ.‌ ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ, ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇತ್ತ ಸಮಾಜದ ಕೆಲ ವರ್ಗಗಳಿಂದ ಜಾತಿ ಗಣತಿ ವರದಿ ಸಾರ್ವಜನಿಕಗೊಳಿಸುವಂತೆ ಒತ್ತಾಯಗಳು ಕೇಳಿ ಬರುತ್ತಿದೆ.‌

ಏನಿದು ವಿವಾದಿತ ಜಾತಿ ಗಣತಿ?:

ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2014 ಜನವರಿಯಲ್ಲಿ ಜಾತಿ ಗಣತಿ ಸಮೀಕ್ಷೆಗೆ ಆದೇಶ ಹೊರಡಿಸಿದ್ದರು. ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಈ ಸಮೀಕ್ಷೆಯನ್ನು ಆರಂಭದಲ್ಲಿ ಜಾತಿ ಗಣತಿ ಎಂದೇ ಕರೆಯಲಾಗಿತ್ತು. ಆದರೆ ಬಳಿಕ ಅದನ್ನು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಎಂದು ಕರೆಯಲಾಯಿತು.

2015ರಲ್ಲೇ ಆಯೋಗ ತನ್ನ ಸಮೀಕ್ಷೆ ಪೂರ್ಣಗೊಳಿಸಿದೆ. ಸುಮಾರು 185 ಕೋಟಿ ರೂ. ಖರ್ಚು ಮಾಡಿ ವರದಿಯನ್ನು ಸಿದ್ಧಪಡಿಸಲಾಗಿದೆ. ಶಿಕ್ಷಕರನ್ನು ಬಳಸಿ ರಾಜ್ಯದಲ್ಲಿ ಜಾತಿ ಗಣತಿ ಮಾಡಲಾಗಿದೆ. ವರದಿಯಲ್ಲಿ ಯಾವ ಜಾತಿಯ ಜನರ ಸಂಖ್ಯೆ ಎಷ್ಟು, ವಿವಿಧ ಪ್ರವರ್ಗಗಳಲ್ಲಿನ ಜಾತಿಗಳ ನಡುವೆ ಮೀಸಲಾತಿಯ ಹಂಚಿಕೆ, ಸಣ್ಣ ಜಾತಿಗಳಿಗೆ ಮೀಸಲಾತಿಯ ಪ್ರಯೋಜನ, ಸರ್ಕಾರಿ ಉದ್ಯೋಗಗಳಲ್ಲಿ ಯಾವ ಸಮುದಾಯದ ಪಾಲು ಎಷ್ಟು, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬಿತ್ಯಾದಿ ಅಂಶಗಳನ್ನು ಈ ವರದಿ ಒಳಗೊಂಡಿದೆ.

ಗಣತಿ ಸಂದರ್ಭದಲ್ಲಿ ಆಯೋಗ ಒಟ್ಟು 55 ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ಎಲ್ಲ ಜಾತಿ, ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ಸರಕಾರದಿಂದ ಪಡೆದ ಇತರೆ ಸೌಲಭ್ಯಗಳು, ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.

ವರದಿ ತಯಾರಿಕೆ ಹಂತದಲ್ಲೇ ಸೋರಿಕೆ?:

ಜಾತಿ ಗಣತಿ ವರದಿ ತಯಾರಿಕೆ ಹಂತದಲ್ಲೇ ಸೋರಿಕೆಯಾಗಿ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಜನಸಂಖ್ಯೆಯೇ ಅಧಿಕವಾಗಿರುವುದು ಸೋರಿಕೆಯಾದ ಅಂಕಿಅಂಶದಲ್ಲಿ ಬಯಲಾಗಿತ್ತು. ಆದರೆ ಬಳಿಕ ಸೋರಿಕೆಯಾದ ಅಂಕಿಅಂಶವನ್ನು ಆಗಿನ ಸಮಾಜ ಕಲ್ಯಾಣ ಸಚಿವ ಅಲ್ಲಗಳೆದಿದ್ದರು. ಆದರೆ, ವರದಿಯ ಸಾರಾಂಶವನ್ನು ಉದ್ದೇಶಪೂರ್ವಕವಾಗಿನೇ ಸೋರಿಕೆ ಮಾಡಲಾಗಿತ್ತು ಎಂದು ಹೇಳಲಾಗಿತ್ತು.

ಸೋರಿಕೆಯಾದ ಅಂಕಿಅಂಶದ ಪ್ರಕಾರ ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ ಎಂಬ ಅಂಕಿಅಂಶ ಹೊರ ಬಿದ್ದಿತ್ತು. ಇದು ರಾಜಕೀಯವಾಗಿ ಭಾರೀ ಕೊಲಾಹಲ ಎಬ್ಬಿಸಿತ್ತು. ಅದರಂತೆ ಎಸ್ ಸಿ 1.06 ಕೋಟಿ, ಎಸ್ ಟಿ 40 ಲಕ್ಷ, ಹಿಂದುಳಿದ ವರ್ಗ 1.10 ಕೋಟಿ, ಇತರೆ ಹಿಂದುಳಿದ ವರ್ಗ 60 ಲಕ್ಷ, ಅಲ್ಪಸಂಖ್ಯಾತರು 80 ಲಕ್ಷ ಎಂಬ ಅಂಕಿಅಂಶ ಸೋರಿಕೆಯಾಗಿತ್ತು.

ಅದೇ ಪ್ರಬಲ ಸಮುದಾಯಗಳಾದ ಲಿಂಗಾಯತ 60 ಲಕ್ಷ, ಒಕ್ಕಲಿಗ 50 ಲಕ್ಷ, ಬ್ರಾಹ್ಮಣ 17 ಲಕ್ಷ, ಇತರೆ 60 ಲಕ್ಷ ಎಂಬ ಅಂಕಿಅಂಶ ಹೊರಬಿದ್ದಿತ್ತು. ಅಂದರೆ ಪ್ರಬಲ ಸಮುದಾಯಗಳ ಒಟ್ಟು ಜನಸಂಖ್ಯೆ 1.87 ಕೋಟಿ ಎಂದು ತೋರಿಸಲಾಗಿತ್ತು.‌ ಆದರೆ, 2011 ಜನಗಣತಿ ಪ್ರಕಾರ ಈ ಪ್ರಬಲ ಸಮುದಾಯಗಳ ಜನಸಂಖ್ಯೆ 3.67 ಕೋಟಿಯಾಗಿತ್ತು. ಸೋರಿಕೆಯಾದ ಈ ಅಂಕಿಅಂಶಕ್ಕೆ ಪ್ರಬಲ ಸುಮುದಾಯಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬಿಂಬಿತ ಸಂಖ್ಯೆಯನ್ನೇ ಸತ್ಯವಾದರೆ ಪ್ರಬಲ ಜಾತಿಗಳ ರಾಜಕೀಯ ಹಿತಾಸಕ್ತಿಗೆ ಮಾರಕ ಆಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.

ವರದಿ ಬಿಡುಗಡೆ ಮಾಡಲು ಹಿಂಜರಿಕೆ ಏಕೆ?:

ಸುಮಾರು 185 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಜಾತಿ ಗಣತಿ 2015ರಲ್ಲೇ ಪೂರ್ಣಗೊಂಡಿದ್ದರೂ, ಇನ್ನೂ ಬಿಡುಗಡೆ ಭಾಗ್ಯ ಪಡೆದಿಲ್ಲ.

ಜಾತಿ ಸಮುದಾಯಗಳ ಜನಸಂಖ್ಯೆ ಪ್ರಮಾಣಕ್ಕೂ ರಾಜಕೀಯ ಪ್ರಾತಿನಿದ್ಯಕ್ಕೂ ನಂಟಿದೆ. ಎಂದೋ ಮಾಡಿದ ಗಣತಿಯನ್ನೋ, ಸಮೀಕ್ಷೆಯನ್ನೋ ಆಧಾರವಾಗಿ ಇಟ್ಟುಕೊಂಡು ಜಾತಿಗಳ ಜನರ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತಿದೆ. ವರದಿಯಲ್ಲಿನ ಅಂಕಿಅಂಶ ಹೊರಬಿದ್ದರೆ, ಪ್ರಬಲ ಜಾತಿಗಳ ರಾಜಕೀಯ ಹಿತಾಸಕ್ತಿಗೆ ಮಾರಕ ಆಗಬಹುದು ಎಂಬ ಅಂಶ ವರದಿ ಧೂಳು ತಿನ್ನಲು ಕಾರಣ ಎನ್ನಲಾಗಿದೆ.

ಈ ವರದಿಯಲ್ಲಿ ಲಿಂಗಾಯತರು, ಒಕ್ಕಲಿಗರಿಗಿಂತ ಹಿಂದುಳಿದ, ಎಸ್ ಸಿ, ಎಸ್ ಟಿ ಸಂಖ್ಯೆ ಹೆಚ್ಚೆಂದು ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ‌ಬಂದಿದೆ. ಹಿಂದುಳಿದ ವರ್ಗಗಳ ಸಂಘಟನೆಗಳು ವರದಿ ಬಿಡುಗಡೆಗೆ ಒತ್ತಾಯಿಸುತ್ತಿವೆ. ಇತ್ತ ಪ್ರಬಲ ಸಮುದಾಯಗಳು ವರದಿ ಮಂಡಿಸದಂತೆ ಒತ್ತಡ ಹೇರುತ್ತಿದೆ. ವರದಿ ಸ್ವೀಕರಿಸಿದರೆ ಪ್ರಬಲ ಸಮುದಾಯಗಳ ವಿರೋಧ ಕಟ್ಟಿಕೊಳ್ಳುವ ಆತಂಕ ಸರ್ಕಾರದ್ದು.

ಸಮೀಕ್ಷೆ ನಡೆಸಿದ್ದ ಸಿದ್ದರಾಮಯ್ಯನವರಿಗೇ ತಮ್ಮ ಅಧಿಕಾರವಧಿಯಲ್ಲೇ ವರದಿ ಬಿಡುಗಡೆ ಮಾಡಬಹುದಿತ್ತು.‌ ಆದರೆ ಜಾತಿ‌ಸಮೀಕರಣ ಬುಡಮೇಲಾಗುವ ಆತಂಕ, ಪ್ರಬಲ‌ ಸಮುದಾಯದ ಆಕ್ರೋಶದ ಭೀತಿಗೆ ಒಳಗಾಗಿ ಬಿಡುಗಡೆ ಗೋಜಿಗೆ ಹೋಗಲಿಲ್ಲ.‌ ಇತ್ತ ಮೈತ್ರಿ ಸರ್ಕಾರ ಸಿಎಂ ಕುಮಾರಸ್ವಾಮಿ ಜಾತಿ ಗಣತಿ ವರದಿ ಮಂಡನೆ ಉಸಾಬರಿಗೇ ಹೋಗಲಿಲ್ಲ.‌ ಇದೀಗ ಬಿಜೆಪಿ ಸರ್ಕಾರಕ್ಕೂ ವರದಿ ಮಂಡನೆಯಿಂದಾಗುವ ನಷ್ಟದ ಅರಿವಿದ್ದು, ಜಾತಿಗಣತಿ ವರದಿ ಬಿಡುಗಡೆ ಮಾಡುವುದು ಬಹುತೇಕ ಅನುಮಾನ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.