ETV Bharat / city

ಬೆಂಗಳೂರು ಅಪಾರ್ಟ್ಮೆಂಟ್​ನಲ್ಲಿನ​ ಅಗ್ನಿ ದುರಂತಕ್ಕೆ ಅಸಲಿ ಕಾರಣವೇನು ?

ದೇವರಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್​​​ನಲ್ಲಿ ನಡೆದ ಅಗ್ನಿ ದುರಂತ ಸಂಬಂಧ ಫ್ಯ್ಲಾಟ್​​ ಮಾಲೀಕ ಭೀಮಸೇನ್ ರಾವ್​ ನೀಡಿದ ದೂರಿನನ್ವಯ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗ್ನಿ ಅನಾಹುತಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Bangalore apartment fire tragedy
ಬೆಂಗಳೂರು ಅಪಾರ್ಟ್ಮೆಂಟ್​ನಲ್ಲಿನ​ ಅಗ್ನಿ ದರಂತ
author img

By

Published : Sep 22, 2021, 10:23 AM IST

Updated : Sep 22, 2021, 10:51 AM IST

ಬೆಂಗಳೂರು:ದೇವರಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್​ ನಲ್ಲಿ ನಡೆದ ಅಗ್ನಿ ದುರಂತ ಸಂಬಂಧ ಗಾಯಾಳು ಹಾಗೂ ಫ್ಯ್ಲಾಟ್​​ ಮಾಲೀಕ ಭೀಮಸೇನ್ ರಾವ್ ಎಂಬುವರು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆ ಮಾಲೀಕ ನೀಡಿದ ದೂರಿನನ್ವಯ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗ್ನಿ ಅನಾಹುತಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಜೊತೆಗೆ ಮಗಳು ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವಘಡಕ್ಕೆ ಕಾರಣ ಹುಡುಕಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ, ಅಗ್ನಿ ಅಪಘಾತ ಹಾಗೂ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಮನೆ ಬಾಗಿಲು ಕಡೆಯಿಂದ ಬೆಂಕಿ ಹೊತ್ತಿತೇ?

ಅನಿಲ ಅಡುಗೆ ಸೋರಿಕೆಯಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ‌ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿಲ್ಲ. ಗ್ಯಾಸ್​ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ‌. ಮನೆ ಬಾಗಿಲು ಕಡೆಯಿಂದ ಬೆಂಕಿ ಹೊತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯಲ್ಲಿ ಅಗ್ನಿ ಕಾಣಿಸುತ್ತಿದ್ದಂತೆ ಆತಂಕಗೊಂಡು ಪತಿ ಭೀಮ್ ಸೇನ್ ರಿಗೆ ಪತ್ನಿ ಭಾಗ್ಯರೇಖಾ ಕರೆ ಮಾಡಿದ್ದರು. ಸಾಕಷ್ಟು ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆಯಿಂದ ಒಳಹೋಗಲೂ ಭೀಮ್ ಸೇನ್ ಅವರಿಗೆ ಸಾಧ್ಯವಾಗಿರಲಿಲ್ಲ. ಅಗ್ನಿಯ ಜ್ವಾಲೆ ಬಾಗಿಲು ಕಡೆಯಿದ್ದ ಕಾರಣ ಪತ್ನಿ ಭಾಗ್ಯರೇಖಾ ಅವರಿಗೆ ಹೊರಕ್ಕೆ ಬರಲು ಸಾಧ್ಯವಾಗಿಲ್ಲ.

ಹಲವು ಅನುಮಾನಗಳು ವ್ಯಕ್ತ:

ಅಗ್ನಿ ಅನಾಹುತಕ್ಕೆ ಕಾರಣಗಳನ್ನು ಪತ್ತೆ ಹಚ್ಚುತ್ತಿರುವ ಪೊಲೀಸರಿಗೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿವೆ. ಮನೆಯಲ್ಲಿ ಯುಪಿಎಸ್ ಇನ್​ವರ್ಟರ್ ಇದ್ದು, ಇದರ ಬ್ಯಾಟರಿಗಳು ಏನಾದರೂ ಸ್ಫೋಟಕ್ಕೆ ಕಾರಣವೇ? ಟಿವಿ, ಫ್ರಿಡ್ಜ್ ಎಲ್ಲವೂ ಆನ್ ಅಗಿದ್ದವು, ಅದರಿಂದಾಗಿ ಏನಾದರೂ ಸ್ಫೋಟ ಸಂಭವಿಸಿದೆಯಾ? ಹೀಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ.

ಪರಿಶೀಲನೆ:

ಅಗ್ನಿ ದುರಂತ ಬಗ್ಗೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ವಿಧಿವಿಜ್ಞಾನ ತಜ್ಞರು ಹಾಗೂ ಎಲೆಕ್ಟ್ರಿಕಲ್ ಇಂಜಿನಿಯರ್ ತಂಡದಿಂದ ಪರಿಶೀಲನೆ ನಡೆಯಲಿದೆ. ಮತ್ತೊಂದೆಡೆ ಅಗ್ನಿಶಾಮಕ ಇಲಾಖೆ ಸಹ ಒಂದು ತನಿಖೆ ನಡೆಸಿ ವರದಿ ನೀಡಲಿದೆ.

ಅಗ್ನಿ ದುರಂತಕ್ಕೆ ಕಾರಣವಾಯ್ತಾ ರೂಲ್ಸ್ ಬ್ರೇಕ್?

ಅಪಾರ್ಟ್ಮೆಂಟ್​​​ನಲ್ಲಿ ಅಗ್ನಿ ಸುರಕ್ಷಿತ ಕ್ರಮ ಅಳವಡಿಸದೇ ಇರುವುದೇ ಎರಡು ಜೀವಗಳ ಬಲಿಗೆ ಕಾರಣವಾಯಿತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ‌. ಅಪಾರ್ಟ್ಮೆಂಟ್ ಸುತ್ತಮುತ್ತ ಅಗ್ನಿಶಾಮಕ ವಾಹನ ಹೋಗುವಷ್ಟು ಜಾಗ ಇರಬೇಕು. ಪ್ರತಿ ಫ್ಲೋರ್ ನಲ್ಲಿ ಬೆಂಕಿ ನಂದಿಸುವ ಅಗ್ನಿನಂದಕ ಇರಬೇಕು. ತುರ್ತು ಸಂದರ್ಭಗಳಲ್ಲಿ ಅಗ್ನಿ ನಂದಿಸುವ ವಾಟರ್ ಲೈನ್ ವ್ಯವಸ್ಥೆ ಹಾಗೂ ಫೈರ್ ಆಲರಾಂ ಇರಬೇಕು. ಆದರೆ, ಅಪಾರ್ಟ್ಮೆಂಟ್​​ನಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ.

ಇದನ್ನೂ ಓದಿ: ಕಟ್ಟಡದಲ್ಲಿ ಅಗ್ನಿ ಅನಾಹುತ ಪ್ರಕರಣ: ಸೋಮವಾರವಷ್ಟೇ ಅಮೆರಿಕದಿಂದ ಬಂದಿದ್ದರು!

ಅಪಾರ್ಟ್ಮೆಂಟ್ 73 ಫ್ಲ್ಯಾಟ್​​​ಗಳಿದ್ದು ಒಟ್ಟು 54 ಕುಟುಂಬಗಳು ವಾಸವಾಗಿವೆ. ದುರಂತದ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಈ ಪೈಕಿ ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಉಳಿದವರನ್ನು ಅಪಾರ್ಟ್ಮೆಂಟ್ ಮುಂಭಾಗದ ಜಾಹ್ನವಿ ಎನ್​​ ಕ್ಲೈವ್ ಅಪಾರ್ಟ್ಮೆಂಟ್​ಗೆ ಸ್ಥಳಾಂತರಿಸಲಾಗಿದೆ‌.

Last Updated : Sep 22, 2021, 10:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.