ETV Bharat / city

ಮಹಿಳೆ ಪೊಲೀಸ್ ಯುನಿಫಾರ್ಮ್ ಹಾಕಿದ್ರೆ ಒಂದು ಖದರ್ ಬರುತ್ತೆ: ಇಶಾ ಪಂತ್ - ಕರ್ನಾಟಕ ಪೊಲೀಸ್ ಇಲಾಖೆ

ಸಮಾಜಕ್ಕೆ ಅತ್ಯಂತ ಹತ್ತಿರವಾದ ಇಲಾಖೆ ಅಂದ್ರೆ, ಅದು ಪೊಲೀಸ್ ಇಲಾಖೆ. ಪೊಲೀಸರು ಸಮಾಜವನ್ನು ಕಾಯುವ ಕೆಲಸ ಮಾಡ್ತಾರೆ. ರೌಡಿಗಳನ್ನು ಮಟ್ಟ ಹಾಕುವುದು, ಗಸ್ತು ತಿರುಗುವುದು, ಬಂದೋಬಸ್ತ್​, ರಾತ್ರಿ ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಹೀಗೆ ಎಲ್ಲಾ ವಿಚಾರದಲ್ಲಿ ಮಹಿಳಾ ಸಿಬ್ಬಂದಿ ಮುಂದುವರಿದು ಕೆಲಸ ಮಾಡ್ತಾರೆ. ಮಹಿಳೆಯರ ಸಮಸ್ಯೆಗಳನ್ನು ಆಲಿಸಲೆಂದೇ ಮಹಿಳಾ ಪೊಲೀಸ್ ಠಾಣೆಗಳನ್ನು ಕೂಡ ತೆರೆಯಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದ್ದಾರೆ​.

ಇಶಾ ಪಂತ್
author img

By

Published : Aug 15, 2019, 3:20 PM IST

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಕೂಡ ಮಹಿಳಾ ಸಿಬ್ಬಂದಿ ಪುರುಷರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರು‌ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಪೊಲೀಸ್​ ಇಲಾಖೆಯ ಮಹಿಳೆಯರು ಬೇರೆ ಮಹಿಳೆಯರಿಗೆ ಸ್ಫೂರ್ತಿ ಆಗಿದ್ದಾರೆ.

ಇನ್ನು ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಈಟಿವಿ ಬಾರತ ಜೊತೆ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಂಖ್ಯೆ ಸಹ ಹೆಚ್ಚಿದೆ. ಹಾಗೆ ಇನ್ನು ಸಾಕಷ್ಟು ಸಿಬ್ಬಂದಿ ಬರುತ್ತಿದ್ದಾರೆ. ಎಲ್ಲರೂ ಪುರುಷರಿಗೆ ಸಮಾನರಾಗಿ ಕೆಲಸ ಮಾಡುತ್ತಾರೆ. ಸರ್ಕಾರ 33 % ಮಹಿಳೆಯರ ಆಯ್ಕೆಗೆ ಅವಕಾಶ ಕೊಟ್ಟಿದ್ದು, ಇನ್ನೂ ಅದು ರೀಚ್ ಆಗಿಲ್ಲ. ಮಹಿಳೆ ಪೊಲೀಸ್ ಯುನಿಫಾರ್ಮ್ ಹಾಕಿದ್ರೆ ಅದೊಂದು ಖದರ್ ಬರುತ್ತೆ. ಪೊಲೀಸ್ ಯುನಿಫಾರ್ಮ್ ಹಾಕಿದವರು ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ ಎಂದರು.

ಡಿಸಿಪಿ ಇಶಾ ಪಂತ್ ಮಾತು

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಕರ್ನಾಟಕದ ಪ್ರತಿ ಸಿಬ್ಬಂದಿಗೂ ಮಾರ್ಗದರ್ಶನ ನೀಡುತ್ತಾರೆ. ಸದ್ಯ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಐಪಿಎಸ್- 26, ಡಿವೈಎಸ್ಪಿ 23, ಇನ್ಸ್​ ಪೆಕ್ಟರ್​- 36, ಸಬ್ ಇನ್ಸ್​ಪೆಕ್ಟರ್​ಗಳು ಹಾಗೂ ಕಾನ್ಸ್​ಟೇಬಲಲ್​ಗಳನ್ನು ಸೇರಿ ಒಟ್ಟು 7055 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರು ಮಾಹಿತಿ ನೀಡಿದ್ದಾರೆ.

Intro:ಪೊಲೀಸ್ ಇಲಾಖೆಯ ಮಹಿಳೆಯರು ಬೇರೆ ಮಹಿಳೆಯರಿಗೆ ಸ್ಪೂರ್ತಿ

ಕ್ಯಾಮರ ಬೈಟ್ ಬಂದಿದೆ ಇಷಾಪಂತ್

ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಇಂದು‌ ಪುರುಷರಿಗೆ ಸಮನಾಗಿ ದುಡಿಯುತ್ತಿದ್ದಾರೆ. ರೌಡಿಗಳ ಮಟ್ಟ ಹಾಕುವುದು, ಗಸ್ತುತಿರುಗುವುದು, ಪಿಂಕ್ ಹೊಯ್ಸಳ ,ಬಂದೋಬಸ್ತು , ರಾತ್ರಿ ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಹೀಗೆ ಎಲ್ಲಾ ವಿಚಾರದಲ್ಲಿ ಮಹಿಳಾ ಸಿಬ್ಬಂದಿಗಳು ಕೆಲಸ ಮಾಡ್ತಾರೆ.

ಸಮಾಜಕ್ಕೆ ಅತ್ಯಂತ ಹತ್ತಿರವಾದ ಇಲಾಖೆ ಅಂದ್ರೆ ಪೊಲೀಸ್ ಇಲಾಖೆ.. ಪೊಲಿಸರು ಸಮಾಜವನ್ನ ಕಾಯುವ ಕೆಲಸ ಮಾಡ್ತಾರೆ ಆದ್ರೆ ಇಂದು ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಕೂಡ ಮಹಿಳಾ ಸಿಬ್ಬಂದಿಗಳು ಪುರುಷರಂತೆ ಕೆಲಸ ನಿರ್ವಹಿಸ್ತಾರೆ. ಮಹಿಳೆಯರ ಸಮಸ್ಯೆಯನ್ನ ಆಲಿಸಲೆಂದೆ ಮಹಿಳಾ ಪೊಲಿಸ್ ಠಾಣೆಗಳನ್ನ ಕೂಡ ತೆರೆಯಲಾಗಿದೆ .ಈ ಠಾಣೆಯಲ್ಲಿ ಬೇರೆ ಠಾಣೆಗಳಲ್ಲಿ ಪುರುಷರು ಕಾರ್ಯನಿರ್ವಾಹಣೆ ಮಾಡುವ ರೀತಿಯೆ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸ್ತಿದ್ದಾರೆ..

ನಮ್ಮ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಕರ್ನಾಟಕ ದ ಪ್ರತಿ ಸಿಬ್ಬಂದಿಗಳನ್ನ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಐಪಿಎಸ್ 26, ಡಿವೈಎಸ್ಪಿ 23, ಇನ್ಸ್ಪೆಕ್ಟರ್36_ ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಸೇರಿದಂತೆ ಒಟ್ಟು 7055ಸಿಬ್ಬಂದಿಗಳು ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ.

ಇನ್ನು ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಮಾತಾಡಿ ಪೊಲೀಸ್ ಇಲಾಖೆಯಲ್ಲಿ ಇತ್ತಿಚ್ಚಿನ ದಿನದಲ್ಲಿ ಮಹಿಳೆಯರು ಹೆಚ್ಚು ಇದ್ದಾರೆ. ಹಾಗೆ ಇನ್ನು ಸಾಕಷ್ಟು ಸಿಬ್ಬಂದಿ ಬರ್ತಿದ್ದಾರೆ. ಎಲ್ಲಾರು ಪುರುಷರಂತೆ ಕೆಲಸ ಮಡ್ತಾರೆ. ಸರ್ಕಾರ 33% ಮಹಿಳೆಯರ ಆಯ್ಕೆಗೆ ಅವಕಾಶ ಕೊಟ್ಟಿದ್ದಾರೆ .ಇನ್ನು ಅದು ರೀಚ್ ಆಗಿಲ್ಲ‌.ಮಹಿಳೆ ಪೊಲೀಸ್ ಯುನಿಫಾರ್ಮ್ ಹಾಕಿದ್ರೆ ಅದೊಂದು ಖದರ್ ಬರುತ್ತೆ. ಪೊಲೀಸ್ ಯುನಿಫಾರ್ಮ್ ಹಾಕಿದವರು ಎಲ್ಲಾರಿಗು ರೋಲ್ ಮಾಡೆಲ್ ಆಗಿದ್ದಾರೆ ಎಂದು ತಿಳಿಸಿದರುBody:KN_BNG_06_WOMEN_POLICE_7204498Conclusion:KN_BNG_06_WOMEN_POLICE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.