ETV Bharat / city

ಕೇಂದ್ರ ಬಜೆಟ್ ಮೇಲೆ ಸಣ್ಣ, ಮಧ್ಯಮ ಕೈಗಾರಿಕೆಗಳ ನಿರೀಕ್ಷೆಗಳೇನು? - small and medium enterprises

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ಕ್ಕೆ ಕೇಂದ್ರ ಸರ್ಕಾರದ ಆಯವ್ಯಯ ಮಂಡಿಸಲಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸೇರಿದಂತೆ ಸ್ಟಾರ್ಟ್ ಅಪ್ ವಲಯ, ಐಟಿ-ಬಿಟಿ ವಲಯ ಇಟ್ಟುಕೊಂಡಿದೆ. ಆ ನಿರೀಕ್ಷೆಗಳೇನು? ಈ ಕೆಳಗಿನಂತಿವೆ.

ಎಫ್ ಕೆ ಸಿ ಸಿ ಐ ಅಧ್ಯಕ್ಷ ಪೇರಿಕಲ್ ಸುಂದರ್
ಎಫ್ ಕೆ ಸಿ ಸಿ ಐ ಅಧ್ಯಕ್ಷ ಪೇರಿಕಲ್ ಸುಂದರ್
author img

By

Published : Jan 28, 2021, 7:58 PM IST

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ಕ್ಕೆ ಕೇಂದ್ರ ಸರ್ಕಾರದ ಆಯವ್ಯಯ ಮಂಡಿಸಲಿದ್ದು, ಕೋವಿಡ್-19 ಯಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿಯಿದೆ.

ಬಜೆಟ್ ಕುರಿತು ಇರುವ ನಿರೀಕ್ಷೆಗಳನ್ನು ಪ್ರಾಸ್ತಾಪಿಸಿದ ಪೇರಿಕಲ್ ಸುಂದರ್

ಈ ಬಜೆಟ್ ಹಿಂದಿನ ಬಜೆಟ್ ರೀತಿ ಇರುವುದಿಲ್ಲ. ಕೋವಿಡ್-19 ರ ಪರಿಣಾಮದಿಂದ ಆರ್ಥಿಕ ಚೇತರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ನಾವು ಮನವಿ ಮಾಡಿದ್ದೇವೆ. ಇದನ್ನು ಪೂರ್ವ ಬಜೆಟ್ ಮೀಟಿಂಗ್​ನಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಪೇರಿಕಲ್ ಸುಂದರ್ ಹೇಳಿದರು.

ಕೇಂದ್ರ ಸರ್ಕಾರದ ಬಜೆಟ್ ಮೇಲಿರುವ ನಿರೀಕ್ಷೆಗಳೇನು?

1. ಎಂಎಸ್ಎಂಇ ಗೆ ಹೆಚ್ಚಿನ ಒತ್ತು: ಹೆಚ್ಚಿನ ರಫ್ತಿಗೆ ಒತ್ತು ನೀಡಬೇಕು. ಇದಕ್ಕೆ ಕಚ್ಚಾ ವಸ್ತುಗಳ ಬೆಲೆ ನಿಯಂತ್ರಣ ಮಾಡಬೇಕು.

2. ಸಾಲದ ಬಡ್ಡಿ ದರ ಇಳಿಸಬೇಕು: ಈಗಾಗಲೇ ಗೃಹ ಸಾಲಕ್ಕೆ 6% ಬಡ್ಡಿ ದರ ಬ್ಯಾಂಕ್​ನಲ್ಲಿ ಇದೆ. ಅದೇ ರೀತಿ ಎಂಎಸ್​ಎಂಇ ಗಳಿಗೂ ಅಷ್ಟೇ ಬಡ್ಡಿದರದಲ್ಲಿ ಸಾಲ ನೀಡಬೇಕು.

3. ಮೂಲಭೂತ ಸೌಕರ್ಯ: 2 ನೇ ದರ್ಜೆ ನಗರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಹಾಗೂ ವಿಮಾನ ನಿಲ್ದಾಣಗಳನ್ನು ಹಾಗೂ ರೈಲ್ವೆ ಸೌಕರ್ಯ ಪ್ರಾರಂಭ ಮಾಡುವ ಬೇಡಿಕೆಯಿದೆ.

4. ಆತಿಥ್ಯ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ: ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರ ಕೋವಿಡ್​ನಿಂದ ತತ್ತರಿಸಿದ್ದು, ಈ ವಲಯಕ್ಕೆ 2-3 ವರ್ಷ ತೆರಿಗೆ ವಿನಾಯಿತಿ ನೀಡಬೇಕು.

5. ಎಲ್ಲಾ ಸಂಸ್ಥೆಗಳಿಗೂ ಒಂದೇ ರೀತಿ ತೆರಿಗೆ: ನೋಂದಾಯಿತ ಕಂಪನಿಗೆ 24% ತೆರಿಗೆ ಈಗ ಇದೇ. ಅದೇ ರೀತಿ ಪಾರ್ಟ್ನರ್​ಶಿಪ್​​ ಕಂಪನಿಗಳಿಗೂ 30% ತೆರಿಗೆಯಿಂದ 24% ತನ್ನಿ ಎಂಬ ಬೇಡಿಕೆ.

6. ಎನ್​ಇಪಿ ಅನುಷ್ಠಾನ: ಹೊಸ ಪಠ್ಯ ಕ್ರಮ ಅನುಷ್ಠಾನ ಬೇಗ ಆಗಬೇಕಿದೆ. ಇದರಿಂದ ಹಿಸ ಕಾಲೇಜು ಶಾಲೆಗಳು ಪ್ರಾರಂಭ ಆಗುವ ಸಾಧ್ಯತೆ ಇದೆ.

7. ರಾಜ್ಯ ಬ್ಯಾಂಕ್​ಗಳಿಗೂ ಆತ್ಮನಿರ್ಭರ ಭಾರತದ ಸೌಲಭ್ಯ: ಪ್ರಸ್ತುತವಾಗಿ ಕೇವಲ ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಮಾತ್ರ ಆತ್ಮ ನಿರ್ಭರ ಭಾರತದ ಸೌಲಭ್ಯಗಳು ಲಭ್ಯವಾಗಿದೆ. ಆದರೆ ಇದೇ ರೀತಿ ಸೌಲಭ್ಯಗಳು ರಾಜ್ಯ ಬ್ಯಾಂಕ್ ಗಳಿಗೂ ನೀಡಿದರೆ ಹಲವಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇದರ ಲಾಭ ಪಡೆಯಲಿದೆ.

ಸಾಕಷ್ಟು ನಿರೀಕ್ಷೆಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸೇರಿದಂತೆ ಸ್ಟಾರ್ಟ್ ಅಪ್ ವಲಯ, ಐಟಿ - ಬಿಟಿ ವಲಯ ಇಟ್ಟುಕೊಂಡಿದೆ. ಅಷ್ಟೇ ಅಲ್ಲದೆ ಮಹಾಮಾರಿಗೆ ಮಧ್ಯಮ ವರ್ಗ ಸಾಕಷ್ಟು ತತ್ತರಿಸಿದೆ. ಉಳಿತಾಯದ ಮಾರ್ಗಗಳನ್ನು ಮಧ್ಯಮ ವರ್ಗದ ಜನ ಹುಡುಕುತ್ತಿದ್ದಾರೆ. ಇದಕ್ಕೆ ಸಹಕಾರ ನೀಡುವಂತೆ ಈ ಬಾರಿಯ ಬಜೆಟ್​ ಘೋಷಣೆ ಮಾಡಿದರೆ ಮಧ್ಯಮ ವರ್ಗದ ಜನರಲ್ಲಿ ಮಂದಹಾಸ ಮೂಡುವುದು ಖಚಿತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.