ETV Bharat / city

ಅರಣ್ಯ ಇಲಾಖೆ ನೇಮಕಾತಿಯಲ್ಲಿ ಭ್ರಷ್ಟಾಚಾರ: ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ- ಉಮೇಶ್‌ ಕತ್ತಿ - Council Session Live

ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಸಂಬಂಧ ವಿಧಾನ ಪರಿಷತ್‌ನಲ್ಲಿಂದು ಚರ್ಚೆ ನಡೆಯಿತು.

We will transfer the officers accused of corruption in the appointment of the Forest Department
ಅರಣ್ಯ ಇಲಾಖೆ ನೇಮಕಾತಿಯ ಭ್ರಷ್ಟಾಚಾರ ಆರೋಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇವೆ - ಉಮೇಶ್‌ ಕತ್ತಿ
author img

By

Published : Sep 20, 2021, 5:23 PM IST

ಬೆಂಗಳೂರು: ಅರಣ್ಯ ವೀಕ್ಷಕರ ಹುದ್ದೆಯಿಂದ ಹಿಡಿದು ಅರಣ್ಯ ರಕ್ಷಕ, ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಯವರೆಗೂ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಕುರಿತು 15 ದಿನದಲ್ಲಿ ಆರೋಪಿತ ಅಧಿಕಾರಿಗಳ ವರ್ಗಾವಣೆ ಮಾಡುತ್ತೇನೆ. ಈ ಬಗ್ಗೆ ಎಸಿಬಿ ತನಿಖೆಗೂ ಆದೇಶಿಸುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್‌ನಲ್ಲಿಂದು ಭರವಸೆ ನೀಡಿದರು.

ಪರಿಷತ್‌ ಕಲಾಪ

ಪರಿಷತ್ ಸದಸ್ಯರಾದ ಪುಟ್ಟಣ್ಣ, ನಜೀರ್ ಅಹಮದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಮಕಾತಿ ಅಕ್ರಮದಲ್ಲಿ ಅರಣ್ಯ ಇಲಾಖೆಯ ಜಾಗೃತ ದಳದಿಂದ ಪ್ರಾಥಮಿಕ ತನಿಖೆ ಮಾಡಲು ಆದೇಶಿಸಲಾಗಿದೆ. ದೂರಿನಲ್ಲಿ ಹೆಸರಿಸಲಾದ ಅಧಿಕಾರಿ,‌ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.