ಬೆಂಗಳೂರು: ಸದನದಲ್ಲಿ ನಾವು ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ಶಾಸಕ ಉದಯ ಗರುಡಾಚಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಮಡಾ ರೆಸಾರ್ಟ್ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲ. ಇದರಿಂದ ಜನತೆ ಬೇಸತ್ತಿದ್ದಾರೆ. ನಾಳೆ ಬಿಜೆಪಿಗೆ ಬಹುಮತ ಸಿಗಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಮ್ಮ ಪಕ್ಷದ ಶಾಸಕರು ಅನ್ಯ ಪಕ್ಷಗಳಿಗೆ ಹೋಗುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ಶಾಸಕ ಮಹದೇವಪ್ಪ ಯಾದವಾಡ ಮಾತನಾಡಿ, ನಮ್ಮ ಮತದಾರ ಪ್ರಭುಗಳು ಸರ್ಕಾರ ರಚಿಸಿಯೇ ಊರಿಗೆ ಬನ್ನಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತ ಜನರಿಗೆ ಸಾಕಾಗಿದೆ. ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಸಹೋದರ ಹೆಚ್.ಡಿ ರೇವಣ್ಣ ಹಸ್ತಕ್ಷೇಪ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರೂ ಅಸಮಾಧಾನ ಹೊಂದಿದ್ದಾರೆ. ರಾಜ್ಯದ ಜನರು ಕೂಡಾ ಬಿಜೆಪಿ ಸರ್ಕಾರ ಬರಬೇಕೆನ್ನುವ ಆಶಯ ಹೊಂದಿದ್ದಾರೆ ಎಂದು ಹೇಳಿದ್ರು.