ETV Bharat / city

ಕೋವಿಡ್ ರೋಗಿಗಳ ಗೌಪ್ಯತೆ ಕಾಪಾಡಿಕೊಳ್ಳದವರ ವಿರುದ್ಧ ಶಿಸ್ತು ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ - ಕೋವಿಡ್ ರೋಗಿಗಳ ವಿವರ ಗೌಪ್ಯತೆ

ಕೋವಿಡ್ ರೋಗಿಗಳ ವಿವರ ಗೌಪ್ಯತೆ ಕಾಪಾಡಿಕೊಳ್ಳದಿದ್ದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ನಮಗೆ ಈ ಕುರಿತಂತೆ ಯಾವುದೇ ಲಿಖಿತ ದೂರು ಬಂದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಆಗುವ ಆರೋಪ ಲಿಖಿತ ರೂಪದಲ್ಲಿ ಲಭಿಸಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಸಚಿವ ಡಾ. ಕೆ.ಸುಧಾಕರ್ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

Minister of Health Dr. K. Sudhakar
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
author img

By

Published : Dec 7, 2020, 7:30 PM IST

ಬೆಂಗಳೂರು: ಕೋವಿಡ್ ರೋಗಿಗಳ ವಿವರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವ ವಿಚಾರದಲ್ಲಿ ವಿಶೇಷ ಗಮನ ಹರಿಸಲು ಸೂಚಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ವಾರಂಟೈನ್, ಕಂಟೈನ್ಮೆಂಟ್ ಝೋನ್​ ನಿರ್ಮಿಸುವುದು ಆರು ತಿಂಗಳ ಹಿಂದೆಯೇ ನಿಂತಿದೆ. ಯಾವುದೇ ರೀತಿ ಗೌಪ್ಯ ಕಾಪಾಡಿಕೊಳ್ಳದಿದ್ದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ನಮಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಖಾಸಗಿ ಲ್ಯಾಬ್​ಗಳ ಜತೆ ಒಪ್ಪಂದ ಮಾಡಿಕೊಂಡು ವರದಿ ತರಿಸಿಕೊಳ್ಳುತ್ತೇವೆ. ಅವರು ಗೌಪ್ಯವಾಗಿ ಉಳಿಸಿಕೊಳ್ಳುತ್ತಾರೆ. ನಾರಾಯಣ ಸ್ವಾಮಿ ಅವರು ದೂರು ಕೊಟ್ಟರೆ ಪರಿಶೀಲಿಸುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಆಗುವ ಆರೋಪ ಲಿಖಿತ ರೂಪದಲ್ಲಿ ಲಭಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಸಾಕಷ್ಟು ದೂರಿದೆ. ಆದರೆ, ನಾವು ಯಾವುದೇ ಸರ್ಕಾರಿ ಇಲ್ಲವೇ, ಖಾಸಗಿ ಆಸ್ಪತ್ರೆ ವೈದ್ಯರನ್ನು ಗೌರವಿಸಬೇಕಾಗಿದೆ ಎಂದರು.

ಸರ್ಕಾರದಿಂದ ನೋಂದಣಿ ಮಾಡಿಸಿಕೊಂಡು ಹೋದರೆ ಯಾವುದೇ ಹೆಚ್ಚುವರಿ ದರ ಪಡೆಯಲು ಖಾಸಗಿ, ಸರ್ಕಾರಿ ಆಸ್ಪತ್ರೆಗೆ ಅವಕಾಶವಿಲ್ಲ. ನೇರವಾಗಿ ದಾಖಲಾದವರಿಗೆ ಒಂದು ನಿಯಮಾವಳಿ ಇರುತ್ತದೆ. ತುಂಬಾ ಹಣ ಸುಲಿಗೆಗೆ ಅವಕಾಶವಿಲ್ಲ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ 200 ಹೆರಿಗೆ ಆಗಿದ್ದು, ಕೊರೊನಾ ಮುಕ್ತ ಮಗು ಜನಿಸಿವೆ ಎಂದು ವೈದ್ಯರ ಕಾರ್ಯವನ್ನು ಶ್ಲಾಘಿಸಬೇಕು ಎಂದು ಸಚಿವರು ಹೇಳಿದರು.

ಸರ್ಕಾರ ಹೊಸ ಕಾನೂನು ತಂದಿದ್ದು, ವೈದ್ಯರ ಜತೆ ಚರ್ಚಿಸಿಯೇ ಬಿಲ್ ಪಾವತಿಸುವ ಕಾರ್ಯ ಆಗುತ್ತದೆ. ಬಿಪಿಎಲ್​ನವರಿಗೆ ಖಾಸಗಿ ಆಸ್ಪತ್ರೆಗೆ ಅಗತ್ಯ ಇದ್ದರೆ 1.15 ಕೋಟಿ ಆಯುಷ್ಮಾನ್ ಆರೋಗ್ಯ ಯೋಜನೆ ಅಡಿ ಸವಲತ್ತು ನೀಡಲಾಗಿದೆ. ಬಡತನ ರೇಖೆಗಿಂತ ಮೇಲಿರುವವರಿಗೆ ಶೇ. 30ರಷ್ಟು ವಿನಾಯಿತಿ ನೀಡುವ ಕೆಲಸ ಆಗಲಿದೆ. ದೇಶದಲ್ಲೇ ಎಪಿಎಲ್ ಕಾರ್ಡ್​ದಾರರಿಗೆ ಸವಲತ್ತು ನೀಡುತ್ತಿರುವ ರಾಜ್ಯ ನಮ್ಮದು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 121 ಆಸ್ಪತ್ರೆಗಳ ವಿರುದ್ಧ ದೂರು ಬಂದಿವೆ. ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಕೋವಿಡ್ ವಿಚಾರದಲ್ಲಿ ಶಂಕೆ ಬೇಡ. 1.2 ಲಕ್ಷ ಮಂದಿಗೆ ತಪಾಸಣೆ ಮಾಡುತ್ತಿದ್ದೇವೆ. ಶೇ.80ರಷ್ಟು ಆರ್​ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದೇವೆ. ಪಾಸಿಟಿವ್ ಪ್ರಮಾಣ ಶೇ.2.5 ರಿಂದ ಶೇ.1.5ಕ್ಕೆ ಇಳಿಕೆ ಆಗಿದೆ. ಸಾವಿನ ಪ್ರಮಾಣ ಕಡಿಮೆ ಆಗಿದೆ. ಆಮ್ಲಜನಕ ಸಂಪರ್ಕ ಇರುವ 30-35 ಸಾವಿರ ಹಾಸಿಗೆ ಸಿದ್ಧವಿದೆ. ಎರಡನೇ ಅಲೆ ಬಂದರೆ ಅದಕ್ಕೆ ಸಿದ್ಧವಾಗಬೇಕಿದೆ ಎಂದರು.

ಓದಿ: ಮುಸ್ಲಿಂರಿಗೆ ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನೆ

ಜೆಡಿಎಸ್ ಸದಸ್ಯ ಭೋಜೇಗೌಡರು ಮಾತನಾಡಿ, ನಾನೂ ಕೋವಿಡ್​ಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಲಕ್ಷಾಂತರ ರೂ. ಶುಲ್ಕ ಭರಿಸಿದ್ದೇನೆ. ಆದರೆ ಇದನ್ನು ಎಲ್ಲಿಯೂ ಕ್ಲೇಮ್ ಮಾಡಿಲ್ಲ. ಸಾಕಷ್ಟು ಜನ ಭರಿಸಿದ್ದಾರೆ. ಅದನ್ನು ಸರ್ಕಾರ ಗಮನಿಸಬೇಕು. ಖಾಸಗಿ ಆಸ್ಪತ್ರೆಗಳಿಂದ ದೊಡ್ಡ ಮಟ್ಟದ ಸುಲಿಗೆ ಆಗುತ್ತಿದೆ. ಬಿಲ್ ವಾಪಸ್ ಮಾಡಿಕೊಡುತ್ತೇನೆ ಎಂದು ಸಚಿವರು ಸದನದಲ್ಲಿ ಕಮಿಟ್ ಆಗಬಾರದು ಎಂದು ಸಲಹೆ ಇತ್ತರು.

ಇದಕ್ಕೂ ಮುನ್ನ ನಾರಾಯಣ ಸ್ವಾಮಿ ಮಾತನಾಡಿ, ಸಚಿವರಿಂದ ಪರಿಣಾಮಕಾರಿ ನಿರ್ವಹಣೆ ಆಗಲಿದೆ ಎಂದು ಭಾವಿಸಿದ್ದೆ, ಉತ್ತರ ಬೇಸರ ತರಿಸಿದೆ. ಅಧಿಕಾರಿಗಳು ನೀಡಿದ ಉತ್ತರ ನೀಡಿದ್ದಾರೆ. ಕಾಳಜಿ ಕಾಣುತ್ತಿಲ್ಲ. ಸರ್ಕಾರಿ ಇಲ್ಲವೇ ಖಾಸಗಿ ಏಜೆನ್ಸಿಗಳು ಕೋವಿಡ್ ಸೋಂಕಿತರ ನಿವಾಸವನ್ನು ಗುರುತಿಸುತ್ತಾರೆ. ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಾನೆ. ಸೋಂಕಿತರೇ ಕಾಳಜಿ ವಹಿಸಿ, ಸ್ಯಾನಿಟೈಸ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸಾಕಷ್ಟು ರೋಗಿಗಳು ಸಿಗುತ್ತಿರುವ ಚಿಕಿತ್ಸೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ ಹಿನ್ನೆಲೆ ಖಾಸಗಿಯವರು ಬಂದು ಸುಲಿಗೆ ಮಾಡುತ್ತಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.