ETV Bharat / city

ಬಸವಣ್ಣನ ವಚನ, ಆದರ್ಶ ಪಾಲಿಸಿ ಅವರಂತೆ ಜೀವನ ಮಾಡಬೇಕು: ಅಮಿತ್ ಶಾ - Central Home Minister Amith Shah

ತೆರಿಗೆ ವಂಚನೆ ಮಾಡದೇ ಇದ್ದರೆ ಅದುವೇ ದೇಶದ ಅಭಿವೃದ್ಧಿಗೆ ಸಹಕಾರಿ. 130 ಕೋಟಿ ಜನಸಂಖ್ಯೆಯ ನಾವು ಪ್ರತಿಯೊಬ್ಬರೂ ಸಂಕಲ್ಪ ಮಾಡಿದರೆ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Central home Minister Amith Shah
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : May 3, 2022, 2:51 PM IST

ಬೆಂಗಳೂರು: ಬಸವಣ್ಣನ ವಚನ ಆದರ್ಶ ಪಾಲನೆಯನ್ನು ನಾವೆಲ್ಲರೂ ಮಾಡಬೇಕು. ಅವರ ಚಿಂತನೆಗಳನ್ನು ಪಾಲಿಸಿದರೆ ನಾವು ಆದರ್ಶಪ್ರಾಯರಾಗಿ ಮುನ್ನಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ನೃಪತುಂಗಾ ವಿಶ್ವವಿದ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ನೃಪತುಂಗಾ ವಿಶ್ವವಿದ್ಯಾಲಯ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಇಂದು ಅಕ್ಷಯ ತೃತೀಯ, ಬಸವ ಜಯಂತಿ ಕೂಡ ಹೌದು. ಇಂದು ಶುರು ಮಾಡುವ ಪ್ರತಿಯೊಂದು ಕಾರ್ಯವೂ ಶುಭವಾಗಲಿದೆ ಎಂಬ ನಂಬಿಕೆಯಿದೆ. ಇಂಥ ಮಹಾನ್ ಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಪ್ರತಿಯೊಬ್ಬ ಯುವಕರು ಬಸವಣ್ಣನ ವಚನ ಓದಬೇಕು, ಅದರಂತೆ ಜೀವನ ನಡೆಸಬೇಕು ಎಂದರು.

ನನಗಿಂದು ಅತಿ ದೊಡ್ಡ ದಿನ. ಕರ್ನಾಟಕ ಹಾಗು ದೇಶಕ್ಕೆ ಅತಿ ದೊಡ್ಡ ದಿನ. ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಕಳೆದ ನೂರು ವರ್ಷಗಳಿಂದ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಕಾಲೇಜು ಇನ್ಮುಂದೆ ನೃಪತುಂಗ ವಿವಿಯಾಗಿ ರೂಪುಗೊಂಡಿರುವುದು ಸಂತಸದ ವಿಷಯ. ಅಮೋಘವರ್ಷ ನೃಪತುಂಗ ರಾಜನ ಹೆಸರು ನಾಮಕರಣ ಮಾಡಿರುವುದು ಉತ್ತಮ ವಿಷಯ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಯಿತು. ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನರೇಂದ್ರ ಮೋದಿ ಸರ್ಕಾರ ಅಮೃತ‌ಮಹೋತ್ಸವ ಆಚರಿಸಲು ನಿರ್ಧರಿಸಿದೆ. ದೇಶಕ್ಕಾಗಿ ಸೈನಿಕರು ವೀರಮರಣ ಹೊಂದುತ್ತಾರೆ. ಪ್ರತಿ ಕ್ಷೇತ್ರದಲ್ಲಿ, ವಿಶ್ವದಲ್ಲಿ ಭಾರತ ಅತ್ಯುತ್ತಮವಾಗಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತೆರಿಗೆ ವಂಚನೆ ಮಾಡದೇ ಇದ್ದರೆ ಅದುವೇ ದೇಶದ ಅಭಿವೃದ್ಧಿಗೆ ಸಹಕಾರಿ. 130 ಕೋಟಿ ಜನಸಂಖ್ಯೆಯ ನಾವು ಪ್ರತಿಯೊಬ್ಬರೂ ಸಂಕಲ್ಪ ಮಾಡಿದರೆ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ. ಎನ್​ಇಪಿ ಜಾರಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಎನ್​ಇಪಿ ಜಾರಿಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ, ಸಚಿವರಿಗೆ ಅಭಿನಂದನೆ‌ ಸಲ್ಲಿಸುತ್ತೇನೆ. ಮೋದಿ ಸರ್ಕಾರ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಈಶಾನ್ಯ ರಾಜ್ಯಗಳಲ್ಲೂ ವಿವಿಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರೊಫೆಷನಲ್ ವಿವಿಗಳು ಆರಂಭವಾಗಿವೆ. ಕಾಲೇಜು, ವಿವಿ, ಮೆಡಿಕಲ್‌ ಕಾಲೇಜುಗಳು ಹೆಚ್ಚಳವಾಗಿವೆ ಎಂದರು.

ಮೋದಿ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮೋದಿ ಬಂದ ಬಳಿಕ ನಡೆದ ಪುಲ್ವಾಮಾ ದಾಳಿ‌ಗೆ ಸರ್ಜಿಕಲ್‌ ಸ್ಟ್ರೈಕ್ ಮೂಲಕ ಸರಿಯಾಗಿ ಪ್ರತ್ಯುತ್ತರ ನೀಡಲಾಯಿತು. ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಲಾಯಿತು. ಇದರಿಂದ ಏನು ಪಯೋಜನ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ ಮೋದಿ ಸರ್ಕಾರ ಏಟಿಗೆ ಎದುರೇಟು ನೀಡಿದೆ. ಇದು ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನೆಂದು ತೋರಿಸಿದೆ ಅಂತಾ ತಿಳಿಸಿದರು.

130 ಕೋಟಿ ಜನಸಂಖ್ಯೆಯ ದೇಶ ನಮ್ಮದು. ಜಗತ್ತಿನ ಅತಿ ಹೆಚ್ಚು ಯುವಜನತೆ ಇರೋದು ನಮ್ಮ ದೇಶದಲ್ಲಿಯೇ. ಇಲ್ಲಿಯೇ ಎಲ್ಲ ಕ್ಷೇತ್ರದಲ್ಲಿ ಉತ್ಪಾದನೆ ಮಾಡಲು ಅವಕಾಶ ಇದೆ. ನೂರು ವರ್ಷದಲ್ಲಿ ಜಗತ್ತಿನಲ್ಲಿ ನಂಬರ್ 1 ದೇಶವಾಗಿ ಭಾರತ ಮಾರ್ಪಾಡಾಗಲಿದೆ. ವಿಧಿವಿಜ್ಞಾನ ಪ್ರಯೋಗಾಲಯ ನಿರ್ಮಾಣ ಉತ್ತಮ ವಿಚಾರ. ಮುಖ್ಯಮಂತ್ರಿ, ಗೃಹಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಗಳೂರಿನಲ್ಲಿ ಪೊಲೀಸ್ ಇ ಬೀಟ್ ಶುರು ಮಾಡಿದ್ದಾರೆ. ಇದು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದರೆ, ಅಪರಾಧ ಪ್ರಕರಣ ಕಡಿಮೆಯಾಗಲಿದೆ ಎಂದರು.

ಅಮಿತ್ ಶಾ ಕೊಂಡಾಡಿದ ಸಚಿವ ಅಶ್ವತ್ಥ್ ನಾರಾಯಣ್: ಐರನ್ ಮ್ಯಾನ್ ಆಫ್ ಇಂಡಿಯಾ ಅಮಿತ್ ಶಾ ಎಂದ ಸಚಿವ ಅಶ್ವತ್ಥ್​ ನಾರಾಯಣ್, ಇಡೀ ವಿಶ್ವವೇ ಅಮಿತ್ ಶಾ ಕೆಲಸ ನೋಡಿದೆ. 370 ರದ್ದು ಮಾಡಿದ್ದು ಅಮಿತ್ ಶಾ. ಜಮ್ಮು ಕಾಶ್ಮೀರ ಇವತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಮೂಲಕ ವಿಶ್ವ, ಭಾರತ ನಮ್ಮ ಕಡೆ ನೋಡುವಂತೆ ಮಾಡಿದ್ದರು ಎಂದು ಕೊಂಡಾಡಿದರು.

ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ವಲಸೆ ಬಂದ ಭಾರತೀಯರಿಗೆ ಭಾರತೀಯ ನಾಗರಿಕ ಹಕ್ಕು ನೀಡಿದ್ರು. ಸಹಕಾರಿ ಸಚಿವರಿಗಾಗಿ ಅತ್ಯುತ್ತಮ ಕೆಲಸ ಮಾಡ್ತಿದ್ದಾರೆ. ಅಮಿತ್ ಭಾಯ್ ಅವ್ರ ನೇತೃತ್ವದಲ್ಲಿ ಬೋಲ್ಡ್, ಪವರ್ ಫುಲ್ ಇಂಡಿಯಾ ಆಗಿದೆ. ಕರ್ನಾಟಕದ ಜನತೆ ಪರವಾಗಿ ನಾನು ಅಮಿತ್ ಶಾ ಅವರನ್ನು ಸ್ವಾಗತ ಮಾಡುತ್ತೇನೆ. ನ್ಯೂ ಕರ್ನಾಟಕ ಕಟ್ಟುವ ನಿಟ್ಟಿನಲ್ಲಿ ಸಿಎಂ ಅವರು ಕೆಲಸ ಮಾಡ್ತಿದ್ದಾರೆ. ಸಿಎಂ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ನಾಡಿಗೆ ಎಂತಹ ಕೆಲಸ ಬೇಕು ಎಂಬುದನ್ನು ಮನಗಂಡು ಅದಕ್ಕೆ ತಕ್ಕಂತೆ ಕೆಲಸ ಮಾಡ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಆಗಮನ: ಸ್ವಾಗತಕ್ಕೂ ಮುನ್ನ ಬಿಎಸ್​​ವೈ ಭೇಟಿ ಮಾಡಿದ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.