ETV Bharat / city

ಮೀಸಲಾತಿ ಕೊಡದಿದ್ರೆ, ಹೇಗೆ ಪಡೆಯಬೇಕು ಎನ್ನುವುದು ಗೊತ್ತು: ವಚನಾನಂದ ಶ್ರೀ - ಪಂಚಮಸಾಲಿ ಸಮುದಾಐ ಮೀಸಲಾತಿ ಹೋರಾಟ

ನಮ್ಮ ಬೇಡಿಕೆ ಹಿಂದೆ 25 ವರ್ಷಗಳ ಶ್ರಮ ಇದೆ. ನಾನು ಸಾಮಾಜಿಕ ನ್ಯಾಯ ಕೇಳುತ್ತಿದ್ದೇನೆ. ಭೂಮಿಯನ್ನ ನಂಬಿಕೊಂಡು ಬದುಕುತ್ತಿರುವುದು ಪಂಚಮಸಾಲಿ ಸಮುದಾಯ. ಪಂಚಮಸಾಲಿಯವ್ರನ್ನ 2ಎ ಸೇರಿಸಬೇಕು ಅಂತ ನಾವು ಮನವಿ ಮಾಡಿದ್ದೇವೆ. ನಿಮಗೆ ಮತ ಹಾಕಲು, ಸರ್ಕಾರ ರಚನೆ ಮಾಡಲು ಪಂಚಮಸಾಲಿಗಳು ಬೇಕು, ಮೀಸಲಾತಿಗೆ ಬೇಡವಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.

we-know-how-to-get-2a-reservation
ವಚನಾನಂದ ಶ್ರೀ
author img

By

Published : Feb 21, 2021, 5:47 PM IST

ಬೆಂಗಳೂರು: ನಿಮಗೆ ಮತ ಹಾಕಲು, ಸರ್ಕಾರ ರಚನೆ ಮಾಡಲು ಪಂಚಮಸಾಲಿಗಳು ಬೇಕು, ಮೀಸಲಾತಿಗೆ ಬೇಡವಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಮೀಸಲಾತಿ ಕೊಡುವುದಿಲ್ಲ ಅಂದರೆ ಅದನ್ನು ಹೇಗೆ ಪಡೆಯಬೇಕು ಎಂಬುದು ನಮಗೆ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಬೇಡಿಕೆ ಹಿಂದೆ 25 ವರ್ಷಗಳ ಶ್ರಮ ಇದೆ. ಭೂಮಿಯನ್ನ ನಂಬಿಕೊಂಡು ಬದುಕುತ್ತಿರುವುದು ಪಂಚಮಸಾಲಿ ಸಮುದಾಯ. ಪಂಚಮಸಾಲಿಯವರನ್ನು 2ಎ ಗೆ ಸೇರಿಸಬೇಕು ಅಂತ ನಾವು ಮನವಿ ಮಾಡಿದ್ದೇವೆ. ನಿಮಗೆ ಮತ ಹಾಕಲು, ಸರ್ಕಾರ ರಚನೆ ಮಾಡಲು ಪಂಚಮಸಾಲಿಗಳು ಬೇಕು, ಮೀಸಲಾತಿಗೆ ಬೇಡವಾ ಎಂದು ಪ್ರಶ್ನಿಸಿದರು.

ಮೀಸಲಾತಿ ಕೊಡದಿದ್ರೆ, ಹೇಗೆ ಪಡೆಯಬೇಕು ಎನ್ನುವುದು ನಮ್ಗೆ ಗೊತ್ತು

ಕೆಲವರು ಪಾದಯಾತ್ರೆ ದಾವಣಗೆರೆಗೆ ಬರುತ್ತಿದ್ದಂತೆ ಠುಸ್ ಆಗುತ್ತದೆ ಅಂದುಕೊಂಡಿದ್ದರು. ಆದರೆ ಇಂದು ವಚನಾನಂದ ಶ್ರೀಗಳು ಈ ಪಾದಯಾತ್ರೆಯಲ್ಲಿ ಇದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆಯುವ ಮುಖ್ಯಮಂತ್ರಿ. ಅವರು ಮೀಸಲಾತಿ ಕೊಟ್ಟೆ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಕೊಡಲಿಲ್ಲ ಅಂದ್ರೂ ಅದನ್ನ ಹೇಗೆ ಪಡೆಯಬೇಕು ಎನ್ನುವುದು ನಮಗೆ ಗೊತ್ತು. ನಾವು ಸಾಫ್ಟವೇರ್ ಹೌದು, ಹಾರ್ಡವೇರ್ ಹೌದು ಎಂದರು.

ನಮ್ಮ ಸಮುದಾಯದ ಶಾಸಕರೊಂದಿಗೆ ಸಚಿವ ಸಿ.ಸಿ. ಪಾಟೀಲ ಸಿಎಂ ಜೊತೆ ಉಪಹಾರ ಸಭೆ ನಡೆಸಿದ್ದರು. ಪಂಚಮಸಾಲಿ ಸಮುದಾಯದ ಬೇಡಿಕೆ, ಪಾದಯಾತ್ರೆ ಕುರಿತು ಚರ್ಚೆ ನಡೆಸಿದ್ದರು. ಆಗ ಸಿಎಂ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಒಳಗೊಂಡಂತೆ ಒಂದು ನಿಯೋಗ ತೆಗೆದುಕೊಂಡು ದೆಹಲಿಗೆ ಹೋಗಿ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಎಂದಿದ್ದರು. ಇದನ್ನೇ ಸಚಿವರು ನಮ್ಮ ಗಮನಕ್ಕೂ ತಂದಿದ್ದರು.

ಆದ್ರೆ 2ಎ ಮೀಸಲಾತಿ ರಾಜ್ಯದ ಸಿಎಂ ಪರಮಾಧಿಕಾರ. ಎಸ್ಸಿ ಎಸ್ಟಿ ಅಂದರೆ ಕೇಂದ್ರದ್ದು ಎಂದು ತಿಳಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸೂಚಿಸಿದ್ದೆವು. ಅದರಂತೆ ಸಿ.ಸಿ. ಪಾಟೀಲ ಹಾಗೂ ಶಾಸಕರು ಸಿಎಂ ಗಮನಕ್ಕೆ ತಂದರು. ಆದರೂ ಸಿಎಂ ಕೇಂದ್ರದ ಕಡೆ ಬೆರಳು ಮಾಡಿದ್ದಾರೆ. ಇದರಿಂದ ಅಸಮಧಾನಗೊಂಡು ನಮ್ಮ 11 ಶಾಸಕರು ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ನಾವು ನಿಮ್ಮನ್ನು ರಾಜೀನಾಮೆ ಕೊಡಲು‌ ಕಳಿಸಿದ್ದಿಲ್ಲ, 2ಎ ಗೆ ಸೇರಿಸಲು ಕಳಿಸಿದ್ದು ಎಂದು ರಾಜೀನಾಮೆ ಕೊಡದಂತೆ ತಡೆದೆವು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವುದು ಈ ಸರ್ಕಾರಕ್ಕೆ ಕಬ್ಬಿಣದ ಕಡಲೆಯಲ್ಲ, ಇಚ್ಚಾಶಕ್ತಿ ತೋರಬೇಕು ಅಷ್ಟೇ. ನಮ್ಮ ಸಚಿವರಾದ ಮುರುಗೇಶ್ ನಿರಾಣಿ ಅವರು ಸಿಹಿ ಸುದ್ದಿ ಕೊಡಲಿದ್ದಾರೆ ಎಂದು ಅವರಿಗೆ ಬೆಳಗಾವಿಯ ಕುಂದಾ ತಂದಿದ್ದೇನೆ. ನಮ್ಮ ನಿರೀಕ್ಷೆಯಂತೆ ಅವರು ಸಿಹಿ ಸುದ್ದಿ ನೀಡಿ ಕುಂದಾ ಸ್ವೀಕರಿಸಲಿದ್ದಾರೆ ಎನ್ನುವ ನಿರೀಕ್ಷೆ ಇದೆ ಎಂದರು.

ರಾಜಕೀಯ ಬಿಡುತ್ತೇನೆ, ಸಮಾಜ ಬಿಡಲ್ಲ

ಸಂದರ್ಭ ಬಂದಲ್ಲಿ ರಾಜಕೀಯ ಬಿಡಲಿದ್ದೇನೆಯೇ ಹೊರತು, ಸಮಾಜ ಬಿಡಲ್ಲ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಂಚಮಸಾಲಿಗಳು ಗುರಿ ಇಟ್ಟರೆ ಯಾವತ್ತೂ ತಪ್ಪಲ್ಲ, ರಾಜ್ಯದ ಮೂಲೆ ಮೂಲೆಯಿಂದ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎನ್ನುವ ಕಾರಣಕ್ಕೆ ಪಾದಯಾತ್ರೆಗೆ ಎಲ್ಲರೂ ಸಂಘಟಿತರಾಗಿ ಬಂದಿದ್ದೀರಿ, ನೀವೆಲ್ಲ ನಿಜವಾದ ಪಂಚಮಸಾಲಿಗಳು. ನಾವು ರಾಜಕೀಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿಲ್ಲ, ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಸಂದರ್ಭ ಬಂದಲ್ಲಿ ರಾಜಕೀಯ ಬಿಡಲಿದ್ದೇನೆಯೇ ಹೊರತು, ಸಮಾಜ ಬಿಡಲ್ಲ. ನಮ್ಮ ತಂದೆ ಸಚಿವರಾಗಿದ್ದವರು, ನನಗೂ ಅವಕಾಶವಿತ್ತು, ಆದರೆ ನನಗೆ ಸಮಾಜ ಮುಖ್ಯ ಎಂದರು.

ಉಪವಾಸ ಸತ್ಯಾಗ್ರಹ

ನಮ್ಮ ಸಮುದಾಯದ ಸಚಿವರು ಮತ್ತು ಶಾಸಕರ ಮೇಲೆ ನಾವು ಭರವಸೆ ಇಟ್ಟಿದ್ದೇವೆ, ನೀವೆಲ್ಲಾ ಸೇರಿ ಮೀಸಲಾತಿ ಕೊಡಿಸುತ್ತೀರಿ ಎನ್ನುವ ಭರವಸೆ ಇಟ್ಟಿದ್ದೇವೆ, ಈ ಹೋರಾಟದ ಮೂಲಕ ಸಮುದಾಯದ ಎರಡೂ ಪೀಠಗಳು ಒಂದಾಗಿವೆ. ವಿಧಾನಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡುವುದು ನಿಶ್ಚಿತ. ಇಂದು ಮೀಸಲಾತಿ ಘೋಷಣೆ ಮಾಡದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.

ಮೂರು ಬಾರಿ ಮನವಿ ಮಾಡಿದ ಸಿ.ಸಿ. ಪಾಟೀಲ

ಸರ್ಕಾರ ನಿಮ್ಮ ಬೇಡಿಕೆ ಪರಿಗಣಿಸಲಿದೆ, ಸ್ವಲ್ಪ ಸಮಯ ಬೇಕು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿಕೆಗೆ ಪಂಚಮಸಾಲಿ ಸಮುದಾಯದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು. ಭಾಷಣದ ವೇಳೆಯೂ ಮಾತಿಗೆ ಅಡ್ಡಿಪಡಿಸಿದರು. ಆಗ ನಿಮಗೆ ಮೀಸಲಾತಿ ಬೇಕೋ ಬೇಡವೋ ಎಂದು ಜನರ ಸಮಾಧಾನಕ್ಕೆ ಯತ್ನಿಸಿದರು. ಒಟ್ಟು ಮೂರು ಬಾರಿ ವೇದಿಕೆ ಮೇಲೆ ಮಾತನಾಡಿದ ಸಿಸಿ ಪಾಟೀಲ, ಸರ್ಕಾರಕ್ಕೆ ಏನು ಸಂದೇಶ ಕಳಿಸಬೇಕೋ ಅದನ್ನು ವೇದಿಕೆ ಮೂಲಕ‌ ಕಳಿಸಿದ್ದೀರಿ, ಆಶೀರ್ವಚನ ಮುಗಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಮನವಿ ಮಾಡಿದರು.

ಹೋರಾಟಕ್ಕೆ ಮಳೆ ಅಡ್ಡಿ

ಕಾರ್ಯಕ್ರಮದ ನಡುವೆ ಮಳೆರಾಯ ಕೆಲಕಾಲ ಅಡ್ಡಿ ಪಡಿಸಿದ. ಏಕಾ ಏಕಿ ಮಳೆ ಸುರಿಯುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡಿದರು. ಆಯೋಜಕರು ಮನವಿ ಮಾಡಿದರೂ ಜನ ಜಾಗ ಖಾಲಿ ಮಾಡಿದರು. ಕುಳಿತಿದ್ದವರು ಕುರ್ಚಿಗಳನ್ನೇ ತಲೆಯ ಮೇಲಿಟ್ಟು ಛತ್ರಿಯನ್ನಾಗಿ ಮಾಡಿಕೊಂಡರು. ಸ್ವಾಮೀಜಿಗಳು ಹಾಗೂ ಭಾಷಣಕಾರರು ಮಾತ್ರ ಮಳೆಯಲ್ಲೇ ಕುಳಿತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.