ಬೆಂಗಳೂರು: ಆರ್.ಆರ್ ನಗರದಲ್ಲಿ ಒಳ್ಳೆ ನಿರ್ಮಾಪಕರು ಸ್ಪರ್ಧೆ ಮಾಡ್ತಾ ಇದಾರೆ. ಆಗಾಗಾ ಡೈರೆಕ್ಟರ್- ಆ್ಯಕ್ಟರ್ ಮಧ್ಯೆ ಸ್ಪರ್ಧೆ ನಡೀತಿದೆ. ಹಿಂದೆ ದುಶ್ಯಾಸನ ಪಾತ್ರ ಮಾಡಿದ್ರು ಈಗ ಶಕುನಿ ಪಾತ್ರ ಮಾಡ್ತಾ ಇದಾರೆ ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ ಸುರೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಲ್ಲವನ್ನು ತಾವೇ ಮಾಡಿ ಕಾಂಗ್ರೆಸ್ ಮಾಡಿದ್ದು ಅಂತಾರೆ. ಈ ಸಿನಿಮಾ ಮುನಿರತ್ನ ಚನ್ನಾಗಿ ಬಿಡುಗಡೆ ಮಾಡ್ತಾ ಇದ್ದಾರೆ. ಸ್ಕ್ರಿಪ್ಟ್ ಅವರದ್ದೇ ಎಲ್ಲಾ ಅವರದ್ದೇ. ಮುನಿರತ್ನ ಒಂದು ನಾಲಿಗೆ ಇಟ್ಕೊಂಡು ಮಾತನಾಡುವುದಿಲ್ಲ, ಎರಡೆರಡು ನಾಲಿಗೆ ಎಂದರು.
ಪ್ರಧಾನಿ ಬಗ್ಗೆ ಪ್ರಧಾನಿ ತಾಯಿ ಬಗ್ಗೆ ಸಿಎಂ ಯಡಿಯೂರಪ್ಪ ಬಗ್ಗೆ ಹೇಗೆ ಮಾತನಾಡಿದ್ದಾರೆ. ಅಶೋಕ್ ಬಗ್ಗೆ ಹೇಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ನಿಮ್ಮಲ್ಲೇ ದಾಖಲೆ ಇದೆ. ಪ್ರಧಾನಿಗಳು 40 ಸಾವಿರ ವೋಟರ್ ಐಡಿ ಪ್ರಿಂಟ್ ಮಾಡಿದ್ರು ಎಂದು ಹೇಳಿದರು. ಆ ಪ್ರಕರಣ ಹೈಕೋರ್ಟ್ನಲ್ಲಿದೆ ಎಂದರು. ಮುನಿರತ್ನ ಹಣ ಹಂಚುತ್ತಿರುವ ವಿಡಿಯೋ ನಮ್ಮ ಬಳಿ ಇದೆ. ಅದನ್ನು ನೀಡುತ್ತೇವೆ.
ಜನರಿಂದ ವೋಟರ್ ಐಡಿ ಪಡೆದು ಹಣ ನೀಡ್ತಿದ್ದಾರೆ. ಅಲ್ಪಸಂಖ್ಯಾತರಿಂದ ವೋಟರ್ ಐಡಿ ಪಡೆದು ಮತದಾನದಿಂದ ದೂರ ಇಡಲಾಗ್ತಿದೆ. ಕೆಲವರು ನಮ್ಮ ಕಾರ್ಯಕರ್ತರ ಮನೆಗೆ ನುಗ್ಗಿ 3 ನೇ ತಾರೀಖು ಆದ ಮೇಲೆ ನೋಡ್ಕೋತೀವಿ ಅಂತಿದ್ದಾರೆ. ಪೊಲೀಸ್ ಆಫೀಸರ್ಗಳೇ ಕೆಲಸ ಮಾಡ್ತಿದ್ದಾರೆ. ಅಲ್ಲಿ ರೆಡ್ಡಿ ಅಂತಿದ್ದಾರೆ. ಅವರೇ ಎಲೆಕ್ಷನ್ ಮಾಡ್ತಿದ್ದಾರೆ.
ನಾಯ್ಡು ಅಂತಿದ್ದಿದ್ದಾರೆ ಅವರೇ ಎಲ್ಲಾ ಮಾಡ್ತಿದ್ದಾರೆ. ಇವರೆಲ್ಲಾ ಪೊಲೀಸ್ ಆಫೀಸರ್ಗಳು. ಚುನಾವಣಾ ಆಯೋಗ ಸುಮ್ಮನಾಗಿದ್ದು, ಪೊಲೀಸರು ಮುನಿರತ್ನ ಪರ ಕೆಲಸ ಮಾಡ್ತಿದ್ದಾರೆ. ಮುನಿರತ್ನ ನಾನೇ ಹೋಮ್ ಮಿನಿಸ್ಟರ್ ಆಗಿ ಬರುತ್ತೇನೆ ಎನ್ನುತ್ತಾರೆ. ಹಾಗಾದ್ರೆ, ಹೋಮ್ ಮಿನಿಸ್ಟರ್ ಸ್ಥಾನ ಖಾಲಿ ಇದೆಯಾ ಎಂದು ಕೇಳಿದರು.