ಬೆಂಗಳೂರು: ನಮ್ಮ ಸ್ನೇಹಿತರು ದೆಹಲಿಗೆ ಹೋಗಿದ್ದಾರೆ. ನಾನು ತಿರುಪತಿಗೆ ಹೋಗ್ಬೇಕಿತ್ತು. ಅದಕ್ಕಾಗಿ ದೆಹಲಿಗೆ ಹೋಗೋಕ್ಕೆ ಆಗ್ತಿಲ್ಲ. ಕಾಂಗ್ರೆಸ್ನವರಿಗೆ ನಾವು ಬೇಡ, ನಮ್ಗೂ ಅವರು ಬೇಡ ಎಂದು ಅನರ್ಹ ಶಾಸಕ ಮುನಿರತ್ನ ಹೇಳಿದ್ದಾರೆ.
ಬೆಂಗಳೂರಿನ ಮತ್ತಿಕೆರೆ ಜೆಪಿ ಪಾರ್ಕ್ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನಾವೆಲ್ಲಾ ಬಿಜೆಪಿ ಸೇರ್ತವೆ ಅಂತಾ ಎಲ್ಲಿಯೂ ಹೇಳಿಲ್ಲ. ನಮ್ಮ ಮೊದಲ ಆದ್ಯತೆ ಕೋರ್ಟ್ನಲ್ಲಿರೋ ನಮ್ಮ ವಿಷಯ. ಆ ಬಗ್ಗೆ ನಾವು ಯೋಚನೆ ಮಾಡ್ತಿದ್ದೇವೆ ಎಂದರು. ಇನ್ನು, ಸಚಿವ ಸ್ಥಾನಕ್ಕೂ ನಮ್ಗೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ಉಳಿಯುತ್ತಾ ಬೀಳುತ್ತಾ ನಮಗೆ ಗೊತ್ತಿಲ್ಲ ಎಂದರು.