ETV Bharat / city

ನಾವು ದೆಹಲಿಗೆ ಕದ್ದುಮುಚ್ಚಿ ಹೋಗುವುದಿಲ್ಲ: ರೇಣುಕಾಚಾರ್ಯ

author img

By

Published : Jul 15, 2021, 5:12 PM IST

ಲೋಕಸಭಾ ಅಧಿವೇಶದ ಹಿನ್ನೆಲೆಯಲ್ಲಿ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ಐದಾರು ಜನ ಶಾಸಕರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೇವೆ. ಹೋಗುವಾಗ ಕದ್ದು-ಮುಚ್ಚಿ ಹೋಗುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

we-do-not-hide-when-we-are-going-to-delhi
ರೇಣುಕಾಚಾರ್ಯ

ಬೆಂಗಳೂರು: ಲೋಕಸಭಾ ಅಧಿವೇಶನದ ಹಿನ್ನೆಲೆ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ಹಲವು ಶಾಸಕರು ನಿರ್ಧಾರ ಮಾಡಿದ್ದೇವೆ. ಹೋಗುವಾಗ ಕದ್ದು ಮುಚ್ಚಿ ತೆರಳುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.

ದೆಹಲಿ ಭೇಟಿ ಕುರಿತು ರೇಣುಕಾಚಾರ್ಯ ಹೇಳಿಕೆ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಲೋಕಸಭಾ ಅಧಿವೇಶದ ಹಿನ್ನೆಲೆಯಲ್ಲಿ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ಐದಾರು ಜನ ಶಾಸಕರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.

ಸಿಎಂ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ:

ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಒಬ್ಬಿಬ್ಬರಿಂದ ಸಿಎಂ ಬದಲಾವಣೆ ಅಸಾಧ್ಯ. ರಾಷ್ಟ್ರೀಯ ನಾಯಕರ ಸೂಚನೆ ಮೇಲೆ, ಶಾಸಕರ ಬೆಂಬಲದೊಂದಿಗೆ ಬಿಎಸ್​ವೈ ಸಿಎಂ ಆಗಿದ್ದಾರೆ. ಅವರು ಆ ಸ್ಥಾನದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಅಂತ ಹೇಳೋಕೆ ನಾನ್ಯಾರು?. ಜನಾದೇಶ ಅವರ ಪರವಿದೆ. ಬೆಂಗಳೂರಲ್ಲಿ ಕುಳಿತು ರಾಜಕಾರಣ ಮಾಡಿದ್ರೆ ಆಗಲ್ಲ. ದೆಹಲಿಗೆ ಹೋಗಿ ರಾಜಕಾರಣ ಮಾಡೋಕೂ ಆಗಲ್ಲ ಎಂದು ಯತ್ನಾಳ್ ದೆಹಲಿ ಭೇಟಿಗೆ ರೇಣುಕಾಚಾರ್ಯ ತಿರುಗೇಟು ನೀಡಿದರು.

ಕೆಲವರು ಹಗಲು ಕನಸು ಕಾಣುತ್ತಿದ್ದಾರೆ:

ನಾಯಕತ್ವ ಬದಲಾವಣೆ ಕುರಿತು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಸಿಎಂ ಬದಲಾವಣೆ ಎಂದವರು ರಾಜ್ಯದ ಜನರು ಎದುರು ವಿಲನ್​ ಆಗುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಕೂಡಾ ಈ ಮಾತನ್ನು ಹೇಳಿದ್ದಾರೆ. ರಾಜ್ಯದಲ್ಲಿ ಬಿಎಸ್​ವೈ ನಾಯಕತ್ವದ ಸರ್ಕಾರ ಮುಂದುವರೆಯುತ್ತದೆ ಎಂದು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​​ ಅವರು ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜಕೀಯ ಮಾಡಲ್ಲ. ಚುನಾವಣೆ ಬಂದಾಗ ಮಾತ್ರ ನಾನು ರಾಜಕೀಯ ಮಾಡುತ್ತೇನೆ. ಇವಾಗ ಏನಿದ್ದರೂ ಕೋವಿಡ್ ಕೆಲಸ ಎಂದು ರೇಣುಕಾಚಾರ್ಯ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.