ETV Bharat / city

ಸದನ‌ ಅಂದ್ರೆ ಸ್ಕೂಲ್​​ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ: ಡಿಕೆಶಿ - ಆದ್ರೆ ಬೇರೆ ರಾಜ್ಯಗಳಿಗೆ ಸಿಕ್ಕಿದ ಪ್ರೋತ್ಸಾಹ, ಅನುದಾನ ಸಿಕ್ಕಿಲ್ಲ

ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ ಎಂದು ರಾಜ್ಯಪಾಲರ ಜಂಟಿ ಭಾಷಣಕ್ಕೆ ಅಡೆತಡೆ ಮಾಡಿದರೆ ಅಮಾನತು ಮಾಡುವ ಎಚ್ಚರಿಕೆ ನೀಡಿರುವ ಸ್ಪೀಕರ್ ನಡೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

KN_BNG_01_SHIVAKUMAR_BYTE_SCRIPT_7201951
ಸದನ‌ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ: ಡಿಕೆಶಿ ಕಿಡಿ
author img

By

Published : Jan 31, 2020, 1:58 PM IST

ಬೆಂಗಳೂರು: ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ ಎಂದು ರಾಜ್ಯಪಾಲರ ಜಂಟಿ ಭಾಷಣಕ್ಕೆ ಅಡೆತಡೆ ಮಾಡಿದರೆ ಅಮಾನತು ಮಾಡುವ ಎಚ್ಚರಿಕೆ ನೀಡಿರುವ ಸ್ಪೀಕರ್ ನಡೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದನ‌ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ: ಡಿಕೆಶಿ
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಅವರದ್ದು ಸರ್ವಾಧಿಕಾರಿ ಧೋರಣೆಯಾಗಿದೆ. ಸದನ ಕಲಾಪ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಿ. ಆ ನಂತರ ಯಾವ ನಿರ್ಧಾರ ಬೇಕಾದರೂ ಮಾಡಲಿ. ಮಾಧ್ಯಮಗಳನ್ನೇ ಹೊರಗಿಡುವ ಕೆಲಸ ಮಾಡಿದ್ದಾರೆ. ಬೇಕಾದರೆ ಸದನಕ್ಕೆ ಪೊಲೀಸರನ್ನೇ ತುಂಬಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ತೀರ್ಮಾನಗಳ ಬಗ್ಗೆ ಧ್ವನಿ ಎತ್ತುವ ಅವಕಾಶವಿದೆ. ಜನರ ಧ್ವನಿಯನ್ನ ಪ್ರತಿನಿಧಿಗಳು ಹೇಳೋಕೆ ಅದು ಜಾಗ. ವಿಧಾನಸಭೆಯಲ್ಲೇ ಅದನ್ನು ಪ್ರಸ್ತಾಪ ಮಾಡಬೇಕು. ಇವರು ಹಿಂದೆ ಏನು ಮಾಡಿದ್ದಾರೆ, ರಾಜ್ಯಪಾಲರ ಭಾಷಣದ ವೇಳೆ ಏನು ಮಾಡಿದ್ರು, ಯಾವ ರೀತಿ ಅಡೆತಡೆ ಮಾಡಿದ್ರು ಎಲ್ಲವೂ ಗೊತ್ತಿದೆ ಎಂದು ಕಿಡಿಕಾರಿದರು. ರಾಷ್ಟ್ರಪತಿಗಳು ಬಂದಿದ್ದಾಗಲೂ ಇವರು ಏನು ಮಾಡಿದ್ರು ಗೊತ್ತಿದೆ. ಪ್ರಜಾಪ್ರಭುತ್ವದ ಹಕ್ಕು ಮೊಟಕು ಮಾಡೋಕೆ ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ರಾಜಕಾರಣವೇ ಮಾಡುತ್ತಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮ ವಜಾ ಮಾಡಿದ್ದಾರೆ. ಹೊಸದಾಗಿ ಏನು ಬೇಕಾದರೂ ಮಂಜೂರು ಮಾಡಿಕೊಳ್ಳಲಿ. ಮಂಜೂರಾತಿ ಆಗಿರೋದನ್ನ ವಜಾ ಮಾಡಿದ್ದಾರೆ. ನಮ್ಮ ಶಾಸಕರು ಇದನ್ನ ಪ್ರಸ್ತಾಪಿಸುವುದು ಬೇಡವೇ? ಯಡಿಯೂರಪ್ಪ ಯಾಕೆ ಗಾಬರಿ ಬಿದ್ದು ದ್ವೇಷದ ರಾಜಕಾರಣ ಮಾಡ್ತಿದ್ದಾರೆ?. ಸ್ಪೀಕರ್ ಕೂಡ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರಿಗೆಲ್ಲ ಒಳ್ಳೆದಾಗಲಿ: ಸಚಿವ ಸಂಪುಟ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಏನನ್ನ ಬಯಸಿದ್ರು ಅದು ಆಗಿದೆ. ನಾನು ಅಸೆಂಬ್ಲಿಯಲ್ಲಿ ಹೇಳಿದಂತೆ ನಡೆದಿದೆ. ಪಾಪ ನೋಡೋಣ, ಏನೇನು ಆಸೆ ಇಟ್ಕೊಂಡಿದ್ರು, ಏನಾಗುತ್ತೆ ಅಂತ. ಅವರಿಗೆಲ್ಲ ಒಳ್ಳೆದಾಗಲಿ ಎಂದು ವ್ಯಂಗ್ಯವಾಡಿದರು.
ರಸ್ತೆಗೆ ತರಬೇಡಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಬೀದಿಯಲ್ಲಿ ಮಾತನಾಡಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಂತಿಲ್ಲ. ಕಾಂಗ್ರೆಸ್​ನಲ್ಲಿ ನಾಯಕರಿಲ್ಲ ಅಂತ ಯಾರು ಹೇಳಿದ್ದು? ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ರಸ್ತೆಗೆ ತರಬೇಡಿ ಎಂದು ಮನವಿ ಮಾಡಿದರು.
ಇಡೀ ವಿಶ್ವದಲ್ಲೇ ಭಾರತಕ್ಕೆ ಕಳಂಕ ಬರುತ್ತಿದೆ: ಕೆಲವರು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡ್ತಿದ್ದಾರೆ, ಅವರು ಅಲ್ಲಿ ತಲೆತಗ್ಗಿಸುವಂತಾಗಿದೆ ಎಂದು ಇದೇ ವೇಳೆ ಕಿಡಿಕಾರಿದರು. ಇಂತಹ ಸಂದರ್ಭದಲ್ಲಿ ಬಜೆಟ್‌ನಲ್ಲಿ ಏನ್ ಸಿಗುತ್ತೋ ನೋಡೋಣ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಇದ್ರೆ ಅನುಕೂಲ ಅಂತಿದ್ರು. ಆದ್ರೆ ಬೇರೆ ರಾಜ್ಯಗಳಿಗೆ ಸಿಕ್ಕಿದ ಪ್ರೋತ್ಸಾಹ, ಅನುದಾನ ಸಿಕ್ಕಿಲ್ಲ. ನಾಳೆ ಏನು ಸಿಗುತ್ತೋ ನೋಡೋಣ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.