ಬೆಂಗಳೂರು: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ತೀವ್ರ ಅಸ್ವಸ್ಥರಾಗಿ ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೂರವಾಣಿ ಮೂಲಕ ಪೇಜಾವರ ಶ್ರೀಗಳ ಆರೋಗ್ಯವನ್ನು ಸಿಎಂ ಯಡಿಯೂರಪ್ಪ ವಿಚಾರಿಸಿದ್ದಾರೆ.
ಮಣಿಪಾಲ್ ವೈದ್ಯಾಧಿಕಾರಿಗಳ ಜೊತೆಗೆ ಸಿಎಂ ಮಾತುಕತೆ ನಡೆಸಿದ್ದು, ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ನಾಳೆ ಮಂಗಳೂರು ಭೇಟಿ ವೇಳೆ ಆಸ್ಪತ್ರೆಗೆ ಭೇಟಿ ಕೊಡುವುದಾಗಿ ತಿಳಿಸಿದ್ದಾರೆ. ಪೇಜಾವರ ಶ್ರೀ ಶ್ವಾಸಕೋಶದಲ್ಲಿ ಕಫ ತುಂಬಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.