ಈ ಬಾರಿ ಅಕ್ಕ ಸಮ್ಮೇಳನ ನಿನ್ನೆಯಿಂದ, ಅಂದರೆ ಸೆಪ್ಟೆಂಬರ್ 4 ರಿಂದ ಆರಂಭವಾಗಿದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಸುಮಾರು ಮೂರು ದಿನಗಳ ಕಾಲ ಈ ಕಾರ್ಯಕ್ರಮ ಆನ್ಲೈನ್ನಲ್ಲಿ ಆಸಕ್ತರಿಗೆ ನೋಡಲು ಲಭ್ಯವಿದೆ. ವಿಶ್ವಾದ್ಯಂತ ವೀಕ್ಷಕರು ಇದನ್ನು ಯೂಟ್ಯೂಬ್ , ಫೇಸ್ಬುಕ್ ಮೂಲಕ ಈಗಾಗಲೇ ವೀಕ್ಷಿಸುತ್ತಿದ್ದಾರೆ.
![Virtual World Kannada conference in America](https://etvbharatimages.akamaized.net/etvbharat/prod-images/dr-amaranath-gowda1598698716138-70_2908email_1598698727_641.jpg)
ಈ ಸಮ್ಮೇಳನ ಸೆಪ್ಟೆಂಬರ್ 4 ರ ಮೊದಲ ವಿಭಾಗದ ಉದ್ಘಾಟನೆಯಲ್ಲಿ ಸಂಜಯ್ ಶಾಂತಾರಾಮ್ ಅವರ ನೃತ್ಯ ನಾಟಕ 'ಪಟ್ಟಾಭಿರಾಮ', 'ಗುರುಕಿರಣ್' ಸಂಗೀತ ರಸಸಂಜೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಿವೆ. ಸೆಪ್ಟೆಂಬರ್ 5,6 ರಂದು ನಡೆಯಲಿರುವ ಒಟ್ಟು 8 ವಿಭಾಗಗಳಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ, ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
![Virtual World Kannada conference in America](https://etvbharatimages.akamaized.net/etvbharat/prod-images/gurukiran-sing-for-bmitayi1599276718399-38_0509email_1599276729_520.jpg)
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ವರ್ಚುಯಲ್ ಸಾಹಿತ್ಯ ವೇದಿಕೆ 'ಸಾಹಿತ್ಯ ಸಿರಿಸಂಪಿಗೆ' ನಡೆಯಲಿದ್ದು, ಸರಿಗಮಪ ವಿಜೇತೆ ಸುಪ್ರಿಯಾ ಜೋಶಿ ಅವರ ಭಾವಗೀತೆ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಮಹಿಳಾ ವೇದಿಕೆ ಕೂಡಾ ಏರ್ಪಾಡಾಗಿದ್ದು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಮಾತುಕತೆ ನಡೆಯಲಿದೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಕೆಲವೊಂದು ಸ್ಪರ್ಧೆಗಳು ಕೂಡಾ ನಡೆಯಲಿವೆ.
![Virtual World Kannada conference in America](https://etvbharatimages.akamaized.net/etvbharat/prod-images/tumakuru-dayanand1598698716139-86_2908email_1598698727_1068.jpg)
ರಾಜೇಶ್ ಕೃಷ್ಣನ್, ಜಯಂತ್ ಕಾಯ್ಕಿಣಿ, ಅನುರಾಧಾ ಭಟ್, ಮನೋ ಮೂರ್ತಿ, ಪ್ರೊ. ಕೃಷ್ಣೇಗೌಡ ಮತ್ತಿತರ ಹಲವಾರು ಪ್ರತಿಭಾನ್ವಿತ ಹೆಸರಾಂತ ಕಲಾವಿದರ ಹಾಜರಿ ಇರಲಿದೆ. ಮುಖ್ಯವಾಗಿ ಹಲವಾರು ಕನ್ನಡ ಕೂಟಗಳ ಪ್ರತಿಭಾ ಪ್ರದರ್ಶನ ನಡೆಯಲಿದ್ದು ಹಲವಾರು ನಾಟಕಗಳು, ನೃತ್ಯಗಳು, ವಿಡಂಬನಾ ಕೃತಿಗಳು, ಸಂಗೀತ ಪ್ರದರ್ಶನ ಹೀಗೆ ಹಲವಾರು ಕನ್ನಡದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳು ನಿಮ್ಮ ಮುಂದೆ ಬರಲಿವೆ.
![Virtual World Kannada conference in America](https://etvbharatimages.akamaized.net/etvbharat/prod-images/dr-chandrasekhara-kambara1599276718346-12_0509email_1599276729_192.jpg)
ಈ ಬಾರಿ ವರ್ಚ್ಯುಯಲ್ ಸಮ್ಮೇಳನದಲ್ಲಿ ಕನ್ನಡದ ಹೆಸರಾಂತ ನಿರ್ದೇಶಕರಾದ ಶ್ರೀ ನಾಗಾಭರಣ ಅವರ ನಿರ್ದೇಶನದಲ್ಲಿ ಮನೆಮದ್ದು, ಫೇಸ್ಬುಕ್ ಪಜೀತಿ, ಸಂಭ್ರಮ ನಾಟಕಗಳು ಪ್ರದರ್ಶನವಾಗಲಿದೆ. ಇದರೊಂದಿಗೆ ನೃತ್ಯರೂಪಕಗಳು, ಸಂಗೀತ ಕಾರ್ಯಕ್ರಮಗಳು ಸೇರಿ ಅನೇಕ ಮನರಂಜನಾ ಕಾರ್ಯಕ್ರಮಗಳು ಈ ಬಾರಿ ಅಕ್ಕ ವರ್ಚ್ಯುಯಲ್ ಸಮ್ಮೇಳನದಲ್ಲಿ ಜರುಗಲಿದೆ.