ಚಿತ್ರದುರ್ಗ: ಜಾನುವಾರು ಕಳ್ಳತನ ಮಾಡಲು ಬಂದಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಬೆತ್ತಲೆಗೊಳಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆರೆಮುಂದಲಹಟ್ಟಿ ಗ್ರಾಮದಲ್ಲಿ ನಡೆದಿದೆ.
ಈಶ್ವರ ಎಂಬ ವ್ಯಕ್ತಿ ಜಾನುವಾರುಗಳ ಕಳ್ಳತನಕ್ಕಾಗಿ ಗ್ರಾಮಕ್ಕೆ ಬಂದಿದ್ದ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೆ ಕಂಬಕ್ಕೆ ಕಟ್ಟಿ ಆರೋಪಿಯನ್ನು ಥಳಿಸಿದ್ದಾರೆ. ಅಲ್ಲದೆ ನಗ್ನಗೊಳಿಸಿ ಕೆರೆಮಂದಲಹಟ್ಟಿಯಿಂದ ಸೂರಪ್ಪನಹಟ್ಟಿ ಗ್ರಾಮದ ವರೆಗೂ ಕತ್ತೆ ಮೇಲೆ ಮೆರವಣಿಗೆ ಮಾಡಿದ್ದಾರೆ.
ಪ್ರಕರಣ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.