ETV Bharat / city

ಸಚಿವ ಸುರೇಶ್‌ಕುಮಾರ್ ಅವರೇ,, ನಿಮ್ಮ ಮಾತಿಗೆ ಬೆಲೆನೇ ಕೊಡ್ತಿಲ್ಲ ವಿಬ್‌ಗಯಾರ್ ಶಾಲೆ!!

ಸಚಿವ ಸುರೇಶ್‌ಕುಮಾರ್ ಆನ್​ಲೈನ್ ಕ್ಲಾಸ್ ರದ್ದುಪಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ‌ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿಲ್ಲ. ಇತ್ತ ಶಾಲೆಯ ಮುಖ್ಯಸ್ಥರು ಮಾತ್ರ, ನಮ್ಗೆ ಯಾವುದೇ ಆದೇಶ ಪ್ರತಿ ಬಂದಿಲ್ಲ. ನಾವು ಯಾಕೆ ಆನ್​ಲೈನ್ ಕ್ಲಾಸ್ ನಿಲ್ಲಿಸಬೇಕು ಅಂತಿದ್ದಾರೆ..

Vibgyor School Continuing Online Education
ವಿಬ್ ಗಯಾರ್ ಶಾಲೆಯಲ್ಲಿ ಮುಂದುವರಿದ ಆನ್​ಲೈನ್ ಶಿಕ್ಷಣ
author img

By

Published : Jun 15, 2020, 5:39 PM IST

ಬೆಂಗಳೂರು : ಶಿಕ್ಷಣ ಸಚಿವರ ಮಾತಿಗೂ ಕೇರ್ ಮಾಡದೆ ನಗರದ ವಿಬ್‌ಗಯಾರ್ ಶಾಲೆಯು ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ಮುಂದುವರಿಸಿದೆ.

ರಾಜ್ಯದ ಅನುದಾನಿತ-ಅನುದಾನ ರಹಿತ ಸೇರಿ ಯಾವುದೇ ಶಾಲೆಗಳು ಎಲ್​ಕೆ‌ಜಿ-ಯುಕೆಜಿ ಹಾಗೂ 5ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣ ನಡೆಸಬಾರದೆಂದು ಸರ್ಕಾರ ಆದೇಶ ಹೊರಡಿಸಲಾಗಿದೆ‌. ಆದರೂ ವಿಬ್‌ಗಯಾರ್ ಶಾಲೆಯಲ್ಲಿ ಪೋಷಕರಿಗೆ ಆನ್​ಲೈನ್ ತರಗತಿ ನಡೆಸಲಾಗುವುದು ಎಂದು ಮೊಬೈಲ್ ಸಂದೇಶ ರವಾನೆ ಮಾಡಿ, ಇಂದು ಬೆಳಗ್ಗೆ ಮಕ್ಕಳಿಗೆ ಆನ್​ಲೈನ್ ತರಗತಿ ನಡೆಸಿದೆ. ಇತ್ತ ಎಲ್ಲಾ ಗೊತ್ತಿದ್ದೂ ಶಿಕ್ಷಣ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ.

ವಿಬ್‌ಗಯಾರ್ ಶಾಲೆಯಲ್ಲಿ ಮುಂದುವರಿದ ಆನ್​ಲೈನ್ ಶಿಕ್ಷಣ

ಸಚಿವ ಸುರೇಶ್‌ಕುಮಾರ್ ಆನ್​ಲೈನ್ ಕ್ಲಾಸ್ ರದ್ದುಪಡಿಸಿರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ‌ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸದೆ ಸುಮ್ಮನೆ ಕುಳಿತಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಶಾಲೆಯ ಮುಖ್ಯಸ್ಥರು ಮಾತ್ರ, ನಮಗೆ ಯಾವುದೇ ಆದೇಶ ಪ್ರತಿ ಬಂದಿಲ್ಲ. ನಾವು ಯಾಕೆ ಆನ್​ಲೈನ್ ಕ್ಲಾಸ್ ನಿಲ್ಲಿಸಬೇಕು ಅಂತಿದ್ದಾರೆ. ಹೀಗಾಗಿ ಯಾವುದೇ ಆದೇಶ ಹೊರಡಿಸದೆ ಖಾಸಗಿ ಶಾಲೆಗಳ ಪರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎಂಬ ಆರೋಪವೂ ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.