ಬೆಂಗಳೂರು: ಕೊರೊನಾ ಹಿನ್ನೆಲೆ ಲಾಕ್ ಡೌನ್ ಆದೇಶ ಜಾರಿಮಾಡಲಾಗಿತ್ತು. ಈ ವೇಳೆ ಅನಗತ್ಯವಾಗಿ ರಸ್ತೆಗೆ ಇಳಿದ ಸವಾರರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆದರೆ ಇದೀಗ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದ್ದು, ದಂಡ ಕಟ್ಟಿ ವಾಹನಗಳನ್ನು ತೆಗೆದುಕೊಂಡು ಹೋಗಿ ಎಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಠಾಣೆಯಲ್ಲಿ ರಾಶಿ ರಾಶಿ ಕೀಗಳು ಹಾಗೆಯೇ ಬಿದ್ದಿವೆ.
ಲಾಕ್ ಡೌನ್ ಸಡಿಲಿಕೆ ಆಗುವವರೆಗೆ ನಗರದಲ್ಲಿ ಸುಮಾರು 47,600 ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಸದ್ಯಕ್ಕೆ 15,350 ವಾಹನಗಳು ಮಾಲೀಕರ ಕೈ ಸೇರಿದ್ದು, ಇನ್ನುಳಿದ ವಾಹನಗಳು ಹಾಗೆಯೇ ಬಿದ್ದಿವೆ. ವಾಹನಗಳನ್ನು ಹಿಂಪಡೆಯುವಂತೆ ಸೂಚನೆ ನೀಡಿದ್ರೂ ಕೂಡ ಕೆಲ ವಾಹನ ಸವಾರರ ಬಳಿ ಸರಿಯಾದ ದಾಖಲೆಗಳು ಇಲ್ಲದೇ ಇರುವ ಕಾರಣ, ಹಾಗೆಯೇ ಸಿಟಿ ಬಿಟ್ಟು ತಮ್ಮ ಊರಿಗೆ ತೆರಳಿದ ಹಿನ್ನೆಲೆ ಮತ್ತು 2 ವಾಹನಗಳು ಇರುವ ಕಾರಣ ಠಾಣೆಯಿಂದ ವಾಹನಗಳನ್ನು ತೆಗೆದುಕೊಂಡು ಹೋಗದೆ ಹಾಗೆಯೇ ಬಿಟ್ಟಿದ್ದಾರೆ.