ಬೆಂಗಳೂರು: ಹೈ ಪ್ರೊಫೈಲ್ ಹಿನ್ನೆಲೆ ಹೊಂದಿರುವ ಡ್ರಗ್ಸ್ ಪೆಡ್ಲರ್ ವೀರೇನ್ ಖನ್ನಾ ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿಲ್ಲ. ಅಲ್ಲದೆ ಸಿಸಿಬಿ ಎದುರು ಇನ್ನೂ ಬಾಲ ಬಿಚ್ಚುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿಬಿ ಪ್ರತಿ ಪ್ರಶ್ನೆಗೂ ಖನ್ನಾ ಉತ್ತರಿಸಲು ನಿರಾಕರಣೆ ಮಾಡುತ್ತಿದ್ದು, ಇದುವರೆಗಿನ ತನಿಖೆಯಲ್ಲಿ ಏನನ್ನೂ ಬಾಯ್ಬಿಟ್ಟಿಲ್ಲ ಎಂದು ತಿಳಿದು ಬಂದಿದೆ. ಸದ್ಯ ತನಿಖೆಗೆ ಅಸಹಕಾರ ಅನ್ನೊ ಕಾರಣವನ್ನೇ ಅಸ್ತ್ರವನ್ನಾಗಿ ಬಳಸಲಿರುವ ಸಿಸಿಬಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದೆ.
ಪೊಲೀಸ್ ವಶದ ಅವಧಿ ಮುಗಿದಿರುವ ಕಾರಣ, ಸದ್ಯ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವೀರೇನ್ ಖನ್ನಾನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾದೀಶರ ಎದುರು ಹಾಜರು ಪಡಿಸಲಾಗುತ್ತಿದೆ.