ETV Bharat / city

ರಾಜ್ಯಸಭಾ ಚುನಾವಣೆಗೆ ಹೊರ ರಾಜ್ಯದವರ ಆಯ್ಕೆ ಬೇಡ: ವಾಟಾಳ್ ನಾಗರಾಜ್

ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಹೊರ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬೇಡ ಎಂದು ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಆಗ್ರಹಿಸಿದ್ದಾರೆ.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
author img

By

Published : May 21, 2022, 8:39 AM IST

ಬೆಂಗಳೂರು: ಇದುವರೆಗೂ ಕರ್ನಾಟಕದ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಹೊರ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಸಭೆಗೆ ಬೇರೆ ರಾಜ್ಯದವರನ್ನು ಕಳುಹಿಸುವುದೇ ನಮ್ಮ ರಾಜಕೀಯ ಪಕ್ಷಗಳಿಗೆ ಅಭ್ಯಾಸವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಂದ ಆಯ್ಕೆಯಾಗಲು ಬೆಂಗಳೂರಿನ ಕೆರೆಗಳನ್ನು ಸುತ್ತುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೊರಗಡೆಯವರನ್ನು ಕಳುಹಿಸಬಾರದು ಎಂದು ಬಿಜೆಪಿಗೆ ಆಗ್ರಹಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್

ಬಹಳ ಜನ ನಮ್ಮಲಿದ್ದಾರೆ. ಸಾಕಷ್ಟು ಜನ ಮೇಧಾವಿಗಳು, ಕವಿಗಳು, ಸಾಹಿತಿಗಳಿದ್ದಾರೆ. ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ್ ಕಂಬಾರ, ದೇವನೂರು ಮಹಾದೇವ, ಹಂಪಾ ನಾಗರಾಜಯ್ಯ, ಸಿಪಿಕೆ ಅವರನ್ನು ಕಳುಹಿಸಿ. ಇವರೆಲ್ಲರೂ ನಮ್ಮ ನಾಡಿನ ಅಗ್ರಗಣ್ಯರು, ಸಾಹಿತ್ಯ ಕ್ಷೇತ್ರದಲ್ಲಿ ದುಡಿದಂತಹ ಮಹನೀಯರು. ಅವರನ್ನು ಕಳುಹಿಸಿದರೆ ಈ ನಾಡಿಗೆ ಗೌರವ ಬರುತ್ತದೆ. ಹೊರಗಡೆಯವರನ್ನು ಕಳುಹಿಸಬೇಡಿ, ರಾಜಕಾರಣಿಗಳ ಕುಟುಂಬದವರನ್ನು ಕಳುಹಿಸಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವಂತವರನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಒತ್ತಾಯಿಸಿದರು.

ಕರ್ನಾಟಕ ಏಕೀಕರಣವಾದ ನಂತರ ಸುಮಾರು 2 ಕೋಟಿ ಪರಭಾಷಿಗರು ರಾಜ್ಯಕ್ಕೆ ಬಂದಿದ್ದಾರೆ. ಬೆಂಗಳೂರು ಪರಭಾಷಿಗರ ಕೈಯಲ್ಲಿ ಹೋಗುತ್ತಿದೆ. ನಮ್ಮ ರಾಜ್ಯದಲ್ಲಿರುವ ಉನ್ನತ ಅಧಿಕಾರಿಗಳು ಹೊರ ರಾಜ್ಯದವರು. ಈ ದೃಷ್ಟಿಯಿಂದ ನಾವೆಲ್ಲರೂ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರಿಗೆ ಕಳಕಳಿಯಿಂದ ಹೇಳುತ್ತಿದ್ದೇನೆ. ನಿಮ್ಮ ಬಗ್ಗೆ ಗೌರವವಿದೆ. ಮುಖ್ಯಮಂತ್ರಿಯಿಂದ ನಿಮ್ಮನ್ನು ಬದಲಾವಣೆ ಮಾಡಲು ಚಿಂತನೆ ನಡೆಯುತ್ತಿದೆ. ಅದು ಆಗಬಾರದು, ಯಾವುದೇ ಕಾರಣಕ್ಕೂ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಬಾರದು. ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಸಿಎಂ ಬದಲಾವಣೆ ಬೇಕಾಗಿಲ್ಲ. ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವಾಟಾಳ್​ ಹೇಳಿದರು.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂ ತೀರ್ಪು ಸ್ವಾಗತಾರ್ಹ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.