ಬೆಂಗಳೂರು : ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಸಿಗೆ ಹಿಡಿದು ರಾಜಧಾನಿಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಕೊರೊನಾ ನಿಯಂತ್ರಣದ ವೈಫಲ್ಯ ಖಂಡಿಸಿದರು.
ಕೊರೊನಾ ಪೀಡಿತರಿಗೆ ಹಾಸಿಗೆ ಕೊಡಿ, ಆಮ್ಲಜನಕ ಕೊಡಿ, ಐಸಿಯು ವೆಂಟಿಲೇಟರ್ ಕೊಡಬೇಕೆಂದು ಆಗ್ರಹಿಸಿದರು. ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸಿದರು.