ಬೆಂಗಳೂರು: ಒಂದು ಜಿಲ್ಲಾ ಪಂಚಾಯತಿ, 4 ತಾಲೂಕು ಪಂಚಾಯತಿ ಹಾಗೂ 213 ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ಚಾಮರಾಜನಗರ ಜಿಲ್ಲಾ ಪಂಚಾಯತ್ ಹಾಗೂ ಯಳಂದೂರು, ಉಡುಪಿ (ಬ್ರಹ್ಮಾವರ), ಗದಗ, ಕುಷ್ಟಗಿ ತಾಲೂಕು ಪಂಚಾಯತ್ಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ನವಂಬರ್ 12ಕ್ಕೆ ಉಪ ಚುನಾವಣೆ ನಡೆಯಲಿದೆ.
14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ:
ಇದೇ ವೇಳೆ 14 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣಾ ದಿನಾಂಕವನ್ನು ಆಯೋಗ ಘೋಷಿಸಿದೆ. 2 ಮಹಾನಗರ ಪಾಲಿಕೆ, 6 ನಗರ ಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯತಿಗಳಿಗೆ ನವಂಬರ್ 12ರಂದು ಚುನಾವಣೆ ನಡೆಯಲಿದೆ. ಒಟ್ಟು 418 ವಾರ್ಡ್ಗಳಲ್ಲಿ ಚುನಾವಣೆ ನಡೆಯಲಿದೆ.