ETV Bharat / city

ಮಂಗನ ಕಾಯಿಲೆ ತಡೆಗಟ್ಟಲು ಸಂಜೀವಿನಿ ತಾಣವಾಯ್ತು ಬೆಂಗಳೂರು

ಮಲೆನಾಡಿನಲ್ಲಿ ಹರಡಿರುವ ಕೆಎಫ್​ಡಿ ಕಾಯಿಲೆಗೆ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಲಸಿಕೆ ತಯಾರಿಸಲಾಗಿದೆ.

ಮಂಗನ ಕಾಯಿಲೆ
author img

By

Published : Mar 12, 2019, 4:41 PM IST

ಬೆಂಗಳೂರು: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಹಲವರು ಸಾವನ್ನಪ್ಪಿರುವುದು ಆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಲಸಿಕೆಯನ್ನು ಪೂರೈಸುತ್ತಿದ್ದು, ಬೆಂಗಳೂರು ಮಂಗನ ಕಾಯಿಲೆ ಹೋಗಲಾಡಿಸಲು ಸಂಜೀವಿನಿ ತಾಣವಾಗಿದೆ.

ಹೌದು, ಮಲೆನಾಡಿನಲ್ಲಿ ಹರಡಿರುವ ಕೆಎಫ್​ಡಿ ಕಾಯಿಲೆಗೆ ಲಸಿಕೆ ತಯಾರಿಸುತ್ತಿರುವುದು ಬೆಂಗಳೂರಿನ ಹೆಬ್ಬಾಳದಲ್ಲಿ. ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಮಂಗನ ಕಾಯಿಲೆ ಬರದಂತೆ ಮುನ್ನೆಚ್ಚರಿಕೆಯಾಗಿ ಹಾಕಿಸುವ ಲಸಿಕೆ ಸಿದ್ಧವಾಗುತ್ತಿದೆ.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕರಾಗಿರುವ ಎಸ್.ಎಂ ಭೈರೇಗೌಡ ಮತ್ತು ಕೆಎಫ್​ಡಿಯ ಲಸಿಕೆ ತಯಾರಿಕೆಯಲ್ಲಿರುವ ವಿಜ್ಞಾನಿ ಡಾ. ಅಮಿತಾ ಗೋಮಸ್ ಅವರು ಸೇರಿದಂತೆ 8 ಜನರ ತಂಡ ಲಸಿಕೆ ತಯಾರಿಕೆ ನೇತೃತ್ವವನ್ನ ವಹಿಸಿದೆ.

ಮಂಗನ ಕಾಯಿಲೆ

06 ರಿಂದ 60 ವರ್ಷ ವಯಸ್ಸಿನವರಿಗೆ ಈ ಲಸಿಕೆ ನೀಡಲಾಗುತ್ತದೆ. 6 ರಿಂದ 14 ವರ್ಷದ ಮಕ್ಕಳಿಗೆ (0.5ml ) ಮತ್ತು 14 ರಿಂದ 60 ವರ್ಷದವರಿಗೆ (1ml ) ನಷ್ಟು ವ್ಯಾಕ್ಸಿನ್ ಕೊಡಲಾಗುತ್ತೆ. ಒಂದು ಬಾಟಲ್​ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದಾಗಿದೆ. ಮೊದಲ ಸಲದ ಇಮ್ಯುನಿಟಿ ಹೆಚ್ಚಾಗಲು 3 ಡೋಸ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕಾಗುತ್ತೆ. ಮೊದಲ ಲಸಿಕೆ ತೆಗೆದುಕೊಂಡ 30 ದಿನದ ನಂತರ ಮತ್ತೊಂದು ಲಸಿಕೆ, 6 ತಿಂಗಳ ನಂತರ ಮತ್ತೊಂದು ಲಸಿಕೆ ಕೊಡಲಾಗುತ್ತದೆ ಎಂದು ಸೈಂಟಿಸ್ಟ್‌ ಡಾ. ಅಮಿತಾ ಮಾಹಿತಿ ನೀಡಿದರು.

1957 ರಲ್ಲಿ ಶಿವಮೊಗ್ಗದಲ್ಲಿರು ಕ್ಯಾಸ್ನೂರ್ (Kyasanur)ನಲ್ಲಿ ಮೊದಲ ಬಾರಿಗೆ ಮಂಗ ಕಾಯಿಲೆ ಕಾಣಿಸಿಕೊಂಡಿತ್ತು.‌ ಇದಕ್ಕೆ ಪುಣೆಯಲ್ಲಿ ಲಸಿಕೆ ಕಂಡು ಹಿಡಿದಿದ್ದರು. ಇದಾದ ಬಳಿಕ ಈ ಹಿಂದೆ ಶಿವಮೊಗ್ಗದಲ್ಲಿ ಲಸಿಕೆ ತಯಾರಿಸಲಾಗುತ್ತಿತ್ತು. ನಂತರ 2001 ರಲ್ಲಿ ಐಎಹೆಚ್ & ವಿಬಿಗೆ ಲಸಿಕಾ ತಯಾರಿ ಕಾರ್ಯವನ್ನು ಆರಂಭಿಸಲಾಗಿತ್ತು.

ಲಸಿಕೆ ತಯಾರಿಗೂ ಬೇಕು ಸಾಕಷ್ಟು ಸಂಯಮ

ಕೆಎಫ್​ಡಿ(Kyasanur forest disease) ಗೆ ಲಸಿಕೆ ತಯಾರಿಸಲು ಸಾಕಷ್ಟು ಸಮಯ ಬೇಕು. 2 ತಿಂಗಳ ಕಾಲ ಪರೀಕ್ಷೆ ನಡೆಸಿ, ನಂತರ ವ್ಯಾಕ್ಸಿನೇಷನ್‌ ಕೊಡಲಾಗುತ್ತೆ. ಎರಡೂವರೆ ಲಕ್ಷ ಡೋಸ್​ಗೆ ಬೇಡಿಕೆ ಬಂದಿದ್ದು, ಈಗಾಗಲೇ ತಯಾರಿಸಲಾಗಿದೆ.ಮುಂದಿನ ವರ್ಷಕ್ಕೂ ಬೇಡಿಕೆ ಬಂದಿದೆ. ಇದಕ್ಕಾಗಿ ಸರ್ಕಾರವೂ ಸುಮಾರು 5 ಕೋಟಿ‌ ಧನಸಹಾಯ ಮಾಡಿದೆ ಅಂತಾರೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಎಸ್.ಎಂ ಭೈರೇಗೌಡ.

Intro:Body:

ಟಾಪ್​, ರಾಜ್ಯ 

ಕೆಎಫ್​ಡಿ(Kyasanur forest disease) ಗೆ ಲಸಿಕೆ ತಯಾರಿಸಲು ಸಾಕಷ್ಟು ಸಮಯ ಬೇಕು. 2 ತಿಂಗಳ ಕಾಲ ಪರೀಕ್ಷೆ ನಡೆಸಿ, ನಂತರ ವ್ಯಾಕ್ಸಿನೇಷನ್‌ ಕೊಡಲಾಗುತ್ತೆ. ಎರಡೂವರೆ ಲಕ್ಷ ಡೋಸ್​ಗೆ ಬೇಡಿಕೆ ಬಂದಿದ್ದು, ಈಗಾಗಲೇ ತಯಾರಿಸಲಾಗಿದೆ. 

ಮುಂದಿನ ವರ್ಷಕ್ಕೂ ಬೇಡಿಕೆ ಬಂದಿದೆ. ಇದಕ್ಕಾಗಿ ಸರ್ಕಾರವೂ ಸುಮಾರು 5 ಕೋಟಿ‌ ಧನಸಹಾಯ ಮಾಡಿದೆ ಅಂತಾರೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಎಸ್.ಎಂ ಭೈರೇಗೌಡ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.