ETV Bharat / city

ವ್ಯಾಕ್ಸಿನ್ ವಿತರಣೆ ಬಗ್ಗೆ ಮಾಹಿತಿ ನೀಡಿದ ಪಾಲಿಕೆ: ಶಿವಾಜಿನಗರದಲ್ಲಿ ಅತಿ ಹೆಚ್ಚು ವ್ಯಾಕ್ಸಿನ್ ವಿತರಣೆ - ಕೊರೊನಾ ಲಸಿಕೆ

ಬೆಂಗಳೂರಿನಲ್ಲಿ ಒಟ್ಟು 77 ಲಕ್ಷದ 61 ಸಾವಿರದ 893 ಡೋಸ್ ವ್ಯಾಕ್ಸಿನ್‌ಗಳನ್ನು ಇದೀಗ ನೀಡಲಾಗಿದೆ. ಶೇ. 66.82ರಷ್ಟು ಅಂದ್ರೆ 60.54 ಲಕ್ಷ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಶೇ. 18.85 ರಷ್ಟು ಜನರು ಮಾತ್ರ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ.

vaccine
vaccine
author img

By

Published : Aug 10, 2021, 9:22 PM IST

ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನ್ ನೀಡಲು‌ ಆರಂಭಿಸಿದಾಗಿಂದಲೂ ವ್ಯಾಕ್ಸಿನ್‌ಗಾಗಿ ಹಾಹಾಕಾರ ಇದೆ.‌ ಅದರಲ್ಲೂ 18 ವರ್ಷಕ್ಕೂ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಆರಂಭಿಸಿದಾಗಿಂದಲೂ ವ್ಯಾಕ್ಸಿನ್‌ಗಾಗಿ ಬೇಡಿಕೆ‌ ಇನ್ನಷ್ಟು ಹೆಚ್ಚಾಗಿದೆ.

ಪಾಲಿಕೆ ಎಲ್ಲರಿಗೂ ವ್ಯಾಕ್ಸಿನ್ ಪೂರೈಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿತ್ತು. ಹೀಗಾಗಿ ನಗರದಲ್ಲಿ ವ್ಯಾಕ್ಸಿನ್ ವಿತರಣೆಯ ಸಂಪೂರ್ಣ ಮಾಹಿತಿಯನ್ನ ಬಿಬಿಎಂಪಿ ಬಿಡುಗಡೆ ಮಾಡಿದೆ. ಇದುವರೆಗೂ ನಗರದಲ್ಲಿ ಎಷ್ಟು ಜನರು ವ್ಯಾಕ್ಸಿನ್ ಪಡೆದಿದ್ದಾರೆ ಎಂಬುದರ ಅಂಕಿ‌ - ಅಂಶಗಳನ್ನ ನೀಡುವುದರ ಜೊತೆಗೆ ಯಾವ ಪ್ರದೇಶದಲ್ಲಿ ಅತಿಹೆಚ್ಚು ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದೆ‌‌.

vaccination info of bengaluru given by bbpm
ವ್ಯಾಕ್ಸಿನ್ ವಿತರಣೆಯ ಮಾಹಿತಿ

ಬೆಂಗಳೂರಿನಲ್ಲಿ ಒಟ್ಟು 77 ಲಕ್ಷದ 61 ಸಾವಿರದ 893 ಡೋಸ್ ವ್ಯಾಕ್ಸಿನ್‌ಗಳನ್ನು ಇದೀಗ ನೀಡಲಾಗಿದೆ. ಶೇ. 66.82ರಷ್ಟು ಅಂದರೆ 60.54 ಲಕ್ಷ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಶೇ. 18.85ರಷ್ಟು ಜನರು ಮಾತ್ರ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 18ರಿಂದ 44 ವಯಸ್ಸಿನೊಳಗಿನ 33 ಲಕ್ಷ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 44 ವಯಸ್ಸು ಮೇಲ್ಪಟ್ಟ 21.54 ಲಕ್ಷ ಜನರು ಮೊದಲ ಡೋಸ್ ಪಡೆದಿದ್ದಾರೆ.

27 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಕ್ಸಿನ್ ನೀಡಿಕೆಯಲ್ಲಿ ಶಿವಾಜಿನಗರ ಮೊದಲ ಸ್ಥಾನದಲ್ಲಿದೆ. ಶಿವಾಜಿನಗರದಲ್ಲಿ ಪ್ರತಿ 1 ಲಕ್ಷ ಜನ ಸಂಖ್ಯೆಗೆ 97,909 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಎರಡನೇ ಸ್ಥಾನದಲ್ಲಿರುವ ಮಲ್ಲೇಶ್ವರಂನಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 93,429 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ಮೂರನೇ ಸ್ಥಾನದಲ್ಲಿರುವ ಚಿಕ್ಕಪೇಟೆ ಕ್ಷೇತ್ರದಲ್ಲಿ ಪ್ರತಿ 1 ಲಕ್ಷ ಜನ ಸಂಖ್ಯೆಯ 91,363 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೊನೆ ಸ್ಥಾನದಲ್ಲಿರುವ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ ಕೇವಲ 22,369 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

26ನೇ ಸ್ಥಾನದಲ್ಲಿರುವ ದಾಸರಹಳ್ಳಿ ಕ್ಷೇತ್ರದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 32,612 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ. ಕೊನೆಯಿಂದ ಮೂರನೇ ಸ್ಥಾನದಲ್ಲಿರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಪ್ರತಿ 1 ಲಕ್ಷ ಜನ ಸಂಖ್ಯೆಗೆ ಕೇವಲ 45, 880 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.