ETV Bharat / city

ಸಾರ್ವಜನಿಕ ಚರ್ಚೆಗೆ ನಾನು ಸಿದ್ದ: ಇಬ್ರಾಹಿಂಗೆ ಉಗ್ರಪ್ಪ ಸವಾಲು

author img

By

Published : Feb 16, 2022, 2:39 PM IST

ನಾನು ವಾಲ್ಮೀಕಿ ವಂಶದಲ್ಲಿ ಹುಟ್ಟಿದವನು. ನಾನು ಎಂದೂ ಸಂಸ್ಕಾರ ಹೀನನಾಗಿ ಮಾತನಾಡಿಲ್ಲ. ಇಬ್ರಾಹಿಂ ಹಳೆಯ ಸ್ನೇಹಿತರು‌. ನನ್ನನ್ನು ಕಕ್ಷಿದಾರನೆಂದು ಒಪ್ಪಿಕೊಂಡಿದ್ದಾರೆ. ಆದ್ರೆ, ನನ್ನ ಹೆಸರನ್ನು ವಿನಾಕಾರಣ ಎಳೆದುಕೊಂಡು ಬಂದಿದ್ದಾರೆಂದು ಅಸಮಾಧಾನ ಹೊರ ಹಾಕಿದರು..

v s ugrappa reacts on c m ibrahim statement
ಮಾಜಿ ಸಂಸದ ವಿ ಎಸ್​ ಉಗ್ರಪ್ಪ

ಬೆಂಗಳೂರು : ಹೆಣ್ಣು ಕುಲಕ್ಕೆ ಎಂಎಲ್​ಸಿ ಸಿಎಂ ಇಬ್ರಾಹಿಂ ಅಪಮಾನ ಮಾಡಿದ್ದಾರೆಂದು ಮಾಜಿ ಸಂಸದ ವಿ ಎಸ್​ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ನಾನು ನಲ್ವತ್ತು ವರ್ಷದಿಂದ ವಕೀಲ ವೃತ್ತಿ ಮಾಡುತ್ತಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡಲಿ. ಅದನ್ನು ಎದುರಿಸುತ್ತೇನೆ ಎಂದರು.

ಅವರಿಗೆ ಸಿಬಿಐ ಕ್ಲೀನ್ ಚಿಟ್ ಯಾವುದರಲ್ಲಿ ಕೊಟ್ಟಿದೆ? ರೋಲೆಕ್ಸ್ ಪ್ರಕರಣವೇನಾಯ್ತು? ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಸಿಲ್ಲವಾ? ಆ ಜಾಗದಲ್ಲಿ ಕಟ್ಟಿರುವ ಮಳಿಗೆಗಳಿಂದ ಬರುವ ಬಾಡಿಗೆ ಪಡೆಯುತ್ತಿಲ್ಲವಾ? ಎಂದು ಪ್ರಶ್ನಿಸಿದರು.

ಇವರು ಪರಿಷತ್​ನಲ್ಲಿ ಸದಸ್ಯರಾಗಿದ್ದಾರೆ. ಯಾವ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ ಅನ್ನೋದನ್ನು ಹೇಳಲಿ ನೋಡೋಣ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಎಂಎಲ್‌ಸಿ ಸಿಎಂ ಇಬ್ರಾಹಿಂ ವಿರುದ್ಧ ಮಾಜಿ ಸಂಸದ ವಿ ಎಸ್​ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿರುವುದು..

ನಾನು ಅಕ್ರಮ ಗಣಿಗಾರಿಕೆ ಸಂಬಂಧ ವರದಿಯನ್ನು ಕೊಟ್ಟಿದ್ದೇನೆ. ಅಂಗನವಾಡಿಯ ಅಕ್ರಮದ ವರದಿಯನ್ನೂ ಕೊಟ್ಟಿದ್ದೇನೆ. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅವರು ಹಾಕುವ ಮಾನನಷ್ಟ ಮೊಕದ್ದಮೆಯನ್ನ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇನೆ ಎಂದರು.

ನನ್ನನ್ನು ಶ್ವಾನಕ್ಕೆ ಹೋಲಿಕೆ ಮಾಡಿದ್ದಾರೆ. ನಾಯಿಗೆ ಇರುವ ನಿಷ್ಠೆ ಇಬ್ರಾಹಿಂಗೆ ಇದೆಯಾ?. ಇವರ ಭ್ರಷ್ಟಾಚಾರವನ್ನು ಬೆತ್ತಲುಗೊಳಿಸುತ್ತೇನೆ. ಎಲ್ಲಿ ಬೇಕಾದರೂ ಆಹ್ವಾನ ನೀಡಲಿ. ಬಹಿರಂಗ ಚರ್ಚೆಗೆ ಸಿದ್ಧನಾಗಿದ್ದೇನೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಉಗ್ರಪ್ಪಗೆ ಲಾಯರ್ ನೋಟಿಸ್ ಕೊಟ್ಟಿದ್ದೇನೆ.. ₹1 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ.. ಸಿ ಎಂ ಇಬ್ರಾಹಿಂ

ನಾನು ವಾಲ್ಮೀಕಿ ವಂಶದಲ್ಲಿ ಹುಟ್ಟಿದವನು. ನಾನು ಎಂದೂ ಸಂಸ್ಕಾರ ಹೀನನಾಗಿ ಮಾತನಾಡಿಲ್ಲ. ಇಬ್ರಾಹಿಂ ಹಳೆಯ ಸ್ನೇಹಿತರು‌. ನನ್ನನ್ನು ಕಕ್ಷಿದಾರನೆಂದು ಒಪ್ಪಿಕೊಂಡಿದ್ದಾರೆ. ಆದ್ರೆ, ನನ್ನ ಹೆಸರನ್ನು ವಿನಾಕಾರಣ ಎಳೆದುಕೊಂಡು ಬಂದಿದ್ದಾರೆಂದು ಅಸಮಾಧಾನ ಹೊರ ಹಾಕಿದರು.

ನನ್ನ ರಾಜಕೀಯ ಜೀವನದ ಬಗ್ಗೆ ಹೇಳುವಾಗ ಇಡೀ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ. ವಿಧವೆಯಾದರೆ ಮತ್ತೆ ಮದುವೆಯಾಗಬಾರದು ಎಂಬ ಕಾನೂನು ಇದೆಯಾ?. ವಿಧವೆಯರಿಗೆ ಹೊಸ ಜೀವನ ಕೊಡುವ ಆಶಯ ಇರಬೇಕು. ಅದು ಬಿಟ್ಟು ಹೆಣ್ಣು ಕುಲಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಕೂಡಲೇ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.