ETV Bharat / city

ಅನಗತ್ಯ ಓಡಾಟ: ಆರತಿ ಮಾಡಿ ಹೂ ಕೊಟ್ಟಿದಾಯ್ತು, ಈಗ ಪಿಪಿಇ ಕಿಟ್ ಸನ್ಮಾನ

author img

By

Published : May 26, 2021, 7:30 PM IST

ಗಾಂಧಿಗಿರಿಯನ್ನು‌‌ ಮುಂದುವರೆಸಿರುವ ಬ್ಯಾಡರಹಳ್ಳಿ ಇನ್‌ಸ್ಪೆಕ್ಟರ್ ರಾಜೀವ್ ನೇತೃತ್ವದ ತಂಡವು ಇಂದು ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನ ಸವಾರರನ್ನು ತಡೆದು ಪಿಪಿಇ‌ ಕಿಟ್​​ ನೀಡಿ, ಹಾರ ಹಾಕಿ, ರೋಸ್ ಕೊಟ್ಟು, ಚಾಕ್ಲೇಟ್ ನೀಡಿ ವಿನೂತನವಾಗಿ ಜಾಗೃತಿ ಮೂಡಿಸಿದರು.

ಪಿಪಿಇ ಕಿಟ್
ಪಿಪಿಇ ಕಿಟ್

ಬೆಂಗಳೂರು: ನಗರದಲ್ಲಿ ವಿನಾಯಿತಿ ಅವಧಿ‌ ಮೀರಿದ ಬಳಿಕ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಬೈಕ್ ಸವಾರರನ್ನು ತಡೆದು ಹೂವಿನ ಹಾರ ಹಾಕಿ ಬ್ಯಾಡರಹಳ್ಳಿ ಪೊಲೀಸರು ವಿನೂತನವಾಗಿ ಜಾಗೃತಿ‌ ಮೂಡಿಸಿದ್ದಾರೆ.

ಸುಖಾಸುಮ್ಮನೆ ರಸ್ತೆಗಿಳಿಯುವ ವಾಹನ ಸವಾರರಿಗೆ ತಿಳುವಳಿಕೆ‌ ಮೂಡಿಸಲು ಮುಂದಾಗಿರುವ ಮಾದನಾಯಕನಹಳ್ಳಿ‌ ಪೊಲೀಸರು, ಆರತಿ ಎತ್ತಿ ಜಾಗೃತಿ‌ ಮೂಡಿಸಿದ್ದರೇ ಪೀಣ್ಯ‌ ಪೊಲೀಸರು ಗುಲಾಬಿ ಹೂ ನೀಡಿ ತಿಳುವಳಿಕೆ‌ ಮೂಡಿಸಿದ್ದರು. ಗಾಂಧಿಗಿರಿಯನ್ನು‌‌ ಮುಂದುವರೆಸಿರುವ ಬ್ಯಾಡರಹಳ್ಳಿ ಇನ್‌ಸ್ಪೆಕ್ಟರ್ ರಾಜೀವ್ ನೇತೃತ್ವದ ತಂಡವು ಇಂದು ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನ ಸವಾರರನ್ನು ತಡೆದು ಪಿಪಿಇ‌ ಕಿಟ್​​ ನೀಡಿ, ಹಾರ ಹಾಕಿ, ರೋಸ್ ಕೊಟ್ಟು, ಚಾಕ್ಲೇಟ್ ನೀಡಿ ವಿನೂತನವಾಗಿ ಜಾಗೃತಿ ಮೂಡಿಸಿದರು.

ಆರತಿ ಮಾಡಿ ಹೂ ಕೊಟ್ಟಿದಾಯ್ತು, ಈಗ ಪಿಪಿಇ ಕಿಟ್ ಸನ್ಮಾನ

ಕೈ ಮುಗಿದು ಕೊರೊನಾ ಇದೆ, ದಯಮಾಡಿ ಬರಬೇಡಿ ಮನೆಯಲ್ಲಿ‌ ಮಕ್ಕಳಿರುತ್ತಾರೆ.‌ ಅವರೆಲ್ಲರಿಗೂ ಹಬ್ಬಿಸಬೇಡಿ.‌ ಇದು ನಿಮ್ಮ‌ ಒಳಿತಿಗಾಗಿ ಹೇಳುತ್ತಿದ್ದೇವೆ.‌ ಅನಗತ್ಯವಾಗಿ ಹೊರಬರಬೇಡಿ ಎಂದು ಪೊಲೀಸರು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.