ETV Bharat / city

ಕೇಂದ್ರದ ಸೂಚನೆಯಂತೆ ಸೆಪ್ಟೆಂಬರ್​ನಲ್ಲಿ ಅನ್​ಲಾಕ್ ಪಾಲನೆ: ಸಚಿವ ಸುಧಾಕರ್​ - ಕರ್ನಾಟಕ ಲಾಕ್​ಡೌನ್​

ಈ ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಸಭೆ ಕರೆದು, ಸೂಕ್ತ ಮಾರ್ಗಸೂಚಿ ಕೊಡುತ್ತಾರೆ. ನಮ್ಮ ಮೆಟ್ರೋ, ಮಲ್ಟಿಪ್ಲೆಕ್ಸ್, ಥಿಯೇಟರ್, ಶಾಲಾ- ಕಾಲೇಜುಗಳನ್ನು ತೆರೆಯುವ ಬಗ್ಗೆಯೂ ಕೇಂದ್ರವೇ ಮಾರ್ಗಸೂಚಿ ಕೊಡುತ್ತದೆ. ಮುಂದಿನ ತಿಂಗಳಲ್ಲಿಯೂ ಕೇಂದ್ರದ ಸೂಚನೆಯನ್ನೇ ಪಾಲಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ತಿಳಿಸಿದ್ದಾರೆ.

Sudhakar
ಡಾ. ಸುಧಾಕರ್
author img

By

Published : Aug 26, 2020, 5:04 PM IST

ಬೆಂಗಳೂರು: ಸೆಪ್ಟೆಂಬರ್​ನಲ್ಲಿ ಅನ್​ಲಾಕ್​ನ ಮುಂದುವರಿದ ಭಾಗವಾಗಿ ರಾಜ್ಯದಲ್ಲಿ ಮತ್ತಷ್ಟು ರಿಲೀಫ್ ವಿಚಾರವಾಗಿ ಮಾತನಾಡಿದ ಸಚಿವ ಡಾ. ಸುಧಾಕರ್, ಇದುವರೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಎಲ್ಲ ರಾಜ್ಯಗಳು ಅನುಸರಿಸಿಕೊಂಡು ಬಂದಿವೆ. ಈ ಸಲವೂ ಕೇಂದ್ರವೇ ಮಾರ್ಗಸೂಚಿ ಕೊಡುತ್ತದೆ. ಅದನ್ನೇ ರಾಜ್ಯದಲ್ಲಿ ಪಾಲಿಸಲಾಗುತ್ತದೆ ಎಂದಿದ್ದಾರೆ.

ಈ ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಸಭೆ ಕರೆದು, ಸೂಕ್ತ ಮಾರ್ಗಸೂಚಿ ಕೊಡುತ್ತಾರೆ. ನಮ್ಮ ಮೆಟ್ರೋ, ಮಲ್ಟಿಪ್ಲೆಕ್ಸ್, ಥಿಯೇಟರ್, ಶಾಲಾ- ಕಾಲೇಜುಗಳನ್ನು ತೆರೆಯುವ ಬಗ್ಗೆಯೂ ಕೇಂದ್ರದ ಸೂಚನೆ ಪಾಲಿಸಲಾಗುತ್ತದೆ. ನಮ್ಮ ಮೆಟ್ರೋ ಸಹ ಚಾಲನೆ ಆಗಬಹುದು ಎಂದು ನನಗನಿಸುತ್ತದೆ ಎಂದರು.

ವಿನಯ್ ಗುರೂಜಿ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸುಧಾಕರ್, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಒಳ್ಳೆಯ ಆಲೋಚನೆ. ಕಾಯ್ದೆ ಜಾರಿ ಬಗ್ಗೆ ನಮ್ಮ ಸರ್ಕಾರ, ನಮ್ಮ ಪಕ್ಷ ಪೂರಕವಾಗಿಯೇ ಇದೆ. ವಿನಯ್ ಗುರೂಜಿಯವರ ಅಭಿಪ್ರಾಯ ಒಳ್ಳೆಯದಿದೆ. ಸಿಎಂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಗೋಹತ್ಯೆ ಕಾಯ್ದೆ ಜಾರಿ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಸೆಪ್ಟೆಂಬರ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಂಕಿತರ ಸಂಖ್ಯೆ ಬಗ್ಗೆ ಹೆಚ್ಚು ಆತಂಕ ಬೇಡ. ಇದರ ದುಪ್ಪಟ್ಟು ಮಂದಿ ಗುಣಮುಖರಾಗಿದ್ದಾರೆ. ಇಡೀ ರಾಜ್ಯದಲ್ಲಿ ಎಂಬತ್ತು ಸಾವಿರ ಸೋಂಕಿತರು ಇದ್ದಾರೆ. 1 ಲಕ್ಷ 75 ಸಾವಿರಕ್ಕಿಂತ ಹೆಚ್ಚು ಜನ ಗುಣಮುಖರಾಗಿದ್ದಾರೆ. ಸದ್ಯ ಶೇ.70 ರಷ್ಟು ಜನ ಗುಣಮುಖರಾಗಿದ್ದಾರೆ. ಶೇ.30 ರಷ್ಟು ಸಕ್ರಿಯ ಕೇಸ್​ಗಳಿವೆ. ಸೋಕಿನ ಬಗ್ಗೆ ಆತಂಕದ ಅಗತ್ಯವಿಲ್ಲ. ಸರ್ಕಾರದ ಮಾರ್ಗಸೂಚಿಯನ್ನು ಜನ ಅನುಸರಿಸಿದರೆ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತದೆ. ಮೇ 31 ರ ವೇಳೆಯಲ್ಲಿ ಸಾವಿನ ಪ್ರಮಾಣ ಶೇ.3.5 ಇತ್ತು. ಈಗ ಸಾವಿನ ಪ್ರಮಾಣ ಶೇ.1.5 ಇದೆ. ಇದು ಈ ಸರ್ಕಾರದ ಸಾಧನೆ ಎಂದರು.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಆರ್. ಅಶೋಕ್ ಕೋವಿಡ್ ಉಸ್ತುವಾರಿ ಸಚಿವರಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಡಾ. ಸುಧಾಕರ್

ಸಚಿವ ಆರ್ ಅಶೋಕ್, ಕೆಎಸ್​ಡಿಎಲ್​ನಿಂದ 150 ಕೋಟಿ ರೂ. ಮೊತ್ತದ ಮಾಸ್ಕ್, ಪಿಪಿಇ ಕಿಟ್​ಗಳನ್ನು ಟೆಂಡರ್ ಮಾಡದೇ ಖರೀದಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ತೀರ್ಮಾನ ಮಾಡಿದಂತೆ ಪಾರದರ್ಶಕವಾಗಿ ಈ ಟೆಂಡರ್ ಆಗಬೇಕು ಎಂದಿದ್ದೇವೆ. ಎಲ್ಲಾ ಘಟನೆ, ಹೇಳಿಕೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ. ಎಲ್ಲಾ ಪಾರದರ್ಶಕತೆಯಿಂದ ಕೂಡಿದೆ. ಸರ್ಕಾರ ಎಲ್ಲಾ ದಾಖಲೆ ನೀಡಲು ಸಿದ್ಧ. ಆರೋಗ್ಯ ಇಲಾಖೆಯಿಂದ ನನಗೆ ಇರುವ ಮಾಹಿತಿಯ ಪ್ರಕಾರ ಎಲ್ಲವನ್ನೂ ಇ-ಟೆಂಡರ್ ಮಾಡಿಯೇ ಖರೀದಿಸಲಾಗಿದೆ. ಮುಂದಿನ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಮತ್ತೊಮ್ಮೆ ಚರ್ಚಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.