ETV Bharat / city

ಆಂಗ್ಲರ ಇಂಗ್ಲಿಷ್ ಬೇಕು, ಹಿಂದಿ ಬೇಡ ಅಂದ್ರೆ ಹೇಗೆ?.. ಅಮಿತ್ ಶಾ ಹೇಳಿರೋದ್ರಲ್ಲಿ ತಪ್ಪೇನಿಲ್ಲ.. ಸಚಿವ ಪ್ರಲ್ಹಾದ್ ಜೋಷಿ

ಮೊಗಲರಷ್ಟೇ ಹಾಳು ಮಾಡಿದ ಆಂಗ್ಲರ ಇಂಗ್ಲಿಷ್ ಬೇಕು, ಹಿಂದಿ‌ ಬೇಡ ಅಂದ್ರೆ ಹೇಗೆ? ಇಂಗ್ಲಿಷ್ ಬದಲು ಹಿಂದಿ ಬಳಸಿ‌‌ ಅಂತಾ ಅಮಿತ್ ಶಾ ಹೇಳಿದಾರೆ. ಅಮಿತ್ ಶಾ ತಪ್ಪೇನೂ‌ ಹೇಳಿಲ್ಲ, ನಿಮ್ಮ ರಾಜ್ಯದಲ್ಲಿ ನಿಮ್ಮ ಭಾಷೆ ಇರಲಿ. ರಾಷ್ಟ್ರೀಯವಾಗಿ ಇಂಗ್ಲಿಷ್ ಬದಲು ಹಿಂದಿ‌ ಬಳಸಿ ಅಂದಿದ್ದಾರೆ ಎಂದರು..

prahlad-joshi
ಪ್ರಹ್ಲಾದ್ ಜೋಷಿ
author img

By

Published : Apr 9, 2022, 10:48 PM IST

ಬೆಂಗಳೂರು : ಭಾರತೀಯ ವಿಕಾಸ ಕೇಂದ್ರ ಆಯೋಜಿಸಿದ್ದ ಒಂದು ರಾಷ್ಟ್ರ- ಒಂದು ಚುನಾವಣೆ ಕುರಿತಾದ ಸಂಕಲನದ ಕೃತಿಯನ್ನು ನಗರದ ಗಾಂಧಿ ಭವನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಲೋಕಾರ್ಪಣೆ ಮಾಡಿದ್ರು. ಇದೇ ವೇಳೆ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಮತಾನಾಡಿದ ಅವರು, ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವ ಈಗ ಬಹಳವಾಗಿ ಪಕ್ವಗೊಂಡಿದೆ. 1999 ಮತ್ತು 2004 ರಲ್ಲಿ‌‌ ಸಂಸತ್ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆದಿವೆ. ಒಡಿಶಾದಲ್ಲೂ ಚುನಾವಣೆಗಳು ಒಟ್ಟಿಗೆ ನಡೆದವು. ಜನರಿಗೆ ಹತ್ತು ಬ್ಯಾಲೆಟ್ ಪೇಪರ್ ಕೊಟ್ರೂ ವಿವೇಚಿಸಿ ಮತ ಹಾಕ್ತಾರೆ.

ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆ ನಡೆಯಿತು. ಮುಂದಿನ‌‌ ಅಕ್ಟೋಬರ್​ನಲ್ಲಿ ಗುಜರಾತ್, ಹಿಮಾಚಲಪ್ರದೇಶದ ಚುನಾವಣೆ ಇದ್ದು, 2023ರ ಮಾರ್ಚ್​ನಲ್ಲಿ ಕರ್ನಾಟಕ ಚುನಾವಣೆ ಇದೆ. ಇದಾದ ಬಳಿಕ ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿ ನಾಲ್ಕು‌ ರಾಜ್ಯಗಳಿಗೆ ಚುನಾವಣೆ ಇದೆ. ಬಳಿಕ ಸಂಸತ್ ಚುನಾವಣೆ ಬರುತ್ತೆ ಎಂದರು.

ದೇಶದಲ್ಲಿ ಬೇರೆ ಬೇರೆ ಮತದಾರರ ಪಟ್ಟಿ‌ ಇದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತದಾರರ ಪಟ್ಟಿ ಬೇರೆ ಇರುತ್ತೆ. ವಿಧಾನಸಭೆ ಚುನಾವಣೆಗಳಲ್ಲಿ ಮತದಾರರ ಪಟ್ಟಿ‌ ಬೇರೆ ಇರುತ್ತೆ. ಇದಕ್ಕೆ ಜನಜಾಗೃತಿಯ ಅಗತ್ಯ ಇದೆ. ಮೋದಿ ಮೇನಿಯಾ ಶುರುವಾಗಿದೆ. ದೇಶದಲ್ಲಿ ಮೋದಿಯವ್ರು ಏನೇ ಹೇಳಿದ್ರೂ ವಿರೋಧ ಬರುತ್ತೆ. ಚರ್ಚೆಗೂ ಮುನ್ನ ವಿರೋಧಿಸ್ತಾರೆ. ಒಂದು ರಾಷ್ಟ್ರ ಒಂದು ಚುನಾವಣೆ ಸಾಧ್ಯನಾ ಅಂತಾರೆ. ಮೋದಿಯವ್ರು ಸ್ವತ: ಶಿಸ್ತಿಗೆ ಬದ್ಧರಾಗಿದ್ದಾರೆ.‌ ಸಂಸತ್ ಅಧಿವೇಶನ ಇದ್ದಾಗ ಅವರ ಡಿಸಿಪ್ಲೀನ್ ಇನ್ನೂ‌ ಕಠಿಣ ಇರುತ್ತೆ ಎಂದರು.

ಹಿಂದಿ ಭಾಷೆ ಬಳಕೆಗೆ ಸಮರ್ಥನೆ : ಹಿಂದಿ ಭಾಷೆ ಬಳಕೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಲ್ಹಾದ್ ಜೋಷಿ, ನಿನ್ನೆ ಅಮಿತ್ ಷಾ ಏನು ಹೇಳಿದ್ರು? ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿದೆ. ಹೊಸ ಶಿಕ್ಷಣ ನೀತಿ ಸ್ಥಳೀಯ ಭಾಷೆಗೆ ಆದ್ಯತೆ ಕೊಡುತ್ತೆ. 70 ವರ್ಷ ಆಡಳಿತ ಮಾಡಿದವ್ರು ತಾಂತ್ರಿಕ ಶಿಕ್ಷಣದಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಕೊಟ್ಟಿರ್ಲಿಲ್ಲ ಎಂದರು.

ಇದನ್ನು ನಾವು ಬಂದ ಮೇಲೆ ಮಾಡಿದ್ವಿ, ಇಂಗ್ಲಿಷ್​ಗೆ ನೂರಿನ್ನೂರು ವರ್ಷದ ಇತಿಹಾಸ ಅಷ್ಟೇ ಇದೆ. ದೇಶದ ಬಹುತೇಕ ಜನಕ್ಕೆ ಇಂಗ್ಲಿಷ್ ಬರಲ್ಲ. ಮೊಗಲರಷ್ಟೇ ಹಾಳು ಮಾಡಿದ ಆಂಗ್ಲರ ಇಂಗ್ಲಿಷ್ ಬೇಕು, ಹಿಂದಿ‌ ಬೇಡ ಅಂದ್ರೆ ಹೇಗೆ? ಇಂಗ್ಲಿಷ್ ಬದಲು ಹಿಂದಿ ಬಳಸಿ‌‌ ಅಂತಾ ಅಮಿತ್ ಶಾ ಹೇಳಿದಾರೆ. ಅಮಿತ್ ಶಾ ತಪ್ಪೇನೂ‌ ಹೇಳಿಲ್ಲ, ನಿಮ್ಮ ರಾಜ್ಯದಲ್ಲಿ ನಿಮ್ಮ ಭಾಷೆ ಇರಲಿ. ರಾಷ್ಟ್ರೀಯವಾಗಿ ಇಂಗ್ಲಿಷ್ ಬದಲು ಹಿಂದಿ‌ ಬಳಸಿ ಅಂದಿದ್ದಾರೆ ಎಂದರು.

ಓದಿ: ಮಗು ಮಡಿಲಲ್ಲಿ ಇಟ್ಕೊಂಡು ಡ್ಯೂಟಿ ನಿರ್ವಹಿಸುವ ಮಹಿಳಾ ಕಾನ್ಸ್​ಟೇಬಲ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.