ETV Bharat / city

ಉಕ್ರೇನ್ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಸಚಿವ ಗೋಯಲ್ - ಉಕ್ರೇನ್ ಮತ್ತು ರಷ್ಯಾ ನಡುವೆ ಯುಧ್ದ

ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಮುಂದುವರೆದಿದ್ದು, ಇದು ಭಾರತಕ್ಕೆ ಎಚ್ಚರಿಕೆಯ ಗಂಟೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

Piyush Goyal on Russia sanctions
ಉಕ್ರೇನ್ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಗೋಯಲ್
author img

By

Published : Mar 13, 2022, 8:00 PM IST

ಬೆಂಗಳೂರು : ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಇದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಇವರು ಬೆಂಗಳೂರಿನಲ್ಲಿ ನಡೆದ ಸ್ಟಾರ್ಟಪ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉಕ್ರೇನ್ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ನಮ್ಮ ಇಂಧನ ಮತ್ತು ಭದ್ರತಾ ಅಗತ್ಯಗಳಿಗಾಗಿ ನಾವು ಇತರರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕೊರೊನಾ ಬಿಕ್ಕಟ್ಟಿನ ನಡುವೆ ನವ ಯೋಜನೆಗಳೊಂದಿಗೆ ಉದ್ಯಮವನ್ನು ಪ್ರಾರಂಭಿಸಿದ ಉದ್ಯಮಿಗಳಿಗೆ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೊಸತನವನ್ನು ಕಂಡುಕೊಳ್ಳುವಂತೆ ಗೋಯಲ್ ಒತ್ತಾಯಿಸಿದ್ದಾರೆ.

ಪ್ರಸ್ತುತ ಯುದ್ಧ ಬಿಕ್ಕಟ್ಟಿನ ನಡುವೆಯೂ ನಾವು ಅನೇಕ ಅವಕಾಶಗಳನ್ನು ಕಾಣಬಹುದು. ಉಕ್ರೇನ್-ರಷ್ಯಾ ಬಿಕ್ಕಟ್ಟು ನಮಗೆಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಕಚ್ಚಾ ತೈಲ ಮತ್ತು ರಕ್ಷಣಾ ಸಾಧನಗಳ ಮೇಲೆ ಇತರೆ ದೇಶಗಳನ್ನು ಅವಲಂಬಿತರಾಗದಿರಲು ಕರೆ ನೀಡಿದ್ದಾರೆ. ಈ ಯುದ್ಧದ ಪರಿಣಾಮಗಳನ್ನು ವಿಶ್ವದ ಎಲ್ಲಾ ದೇಶಗಳು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಕಚ್ಚಾ ತೈಲದ ಬೆಲೆಯು 10 ವರ್ಷದಲ್ಲಿ ಮೊದಲ ಬಾರಿಗೆ ದಾಖಲೆಯ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ. ಹಲವು ದೇಶಗಳು ರಷ್ಯಾದ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧದಿಂದಾಗಿ ರಷ್ಯಾದೊಂದಿಗೆ ವ್ಯಾಪಾರ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಮೊದಲಾಗಿ ಭಾರತವು ಯುದ್ಧ ಸಲಕರಣೆಗಳಿಗೆ ರಷ್ಯಾವನ್ನು ಅವಲಂಬಿಸಿದೆ. ಇಂದಿನ ನಿರ್ಬಂಧಗಳು ಭಾರತದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದಾಗಿ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

ಓದಿ : ನವೀನ್ ಪಾರ್ಥಿವ ಶರೀರ ತರಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿ: ಅಧಿಕಾರಿಗಳಿಗೆ ಮೋದಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.