ETV Bharat / city

ದ್ವಿಚಕ್ರ ವಾಹನ ಕದ್ದು ಸಂಬಂಧಿಕರಿಗೆ ಉಡುಗೊರೆ ನೀಡುತ್ತಿದ್ದ ಆರೋಪಿ ಅರೆಸ್ಟ್!

7 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಸಂಬಂಧಿಕರಿಗೆ ಉಡುಗೊರೆ ನೀಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ರಾಜಾಜಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

author img

By

Published : Jan 23, 2022, 7:38 AM IST

Two wheeler thief
ದ್ವಿಚಕ್ರ ವಾಹನ ಕಳ್ಳತನ

ಬೆಂಗಳೂರು: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕದಿಯುವುದರಲ್ಲದೆ, ಅವುಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡುತ್ತಿದ್ದ ಖತರ್ನಾಕ್​ ಖದೀಮನನ್ನು ನಗರದ ರಾಜಾಜಿನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ರಾಜಾಜಿನಗರದ ಭರತ್ (32) ಬಂಧಿತ ಆರೋಪಿ. ಈತನಿಂದ ಏಳು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ರಾಜಾಜಿನಗರ, ಬಸವೇಶ್ವರ ನಗರ, ಕಲಾಸಿಪಾಳ್ಯ ಪೊಲೀಸ್ ಠಾಣೆ ಸೇರಿದಂತೆ ನಾನಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತ್ ಬಹಳ ಬುದ್ದಿ ಉಪಯೋಗಿಸಿ ಬೈಕ್ ಕಳವು ಮಾಡುತ್ತಿದ್ದ. ನಗರದ ವಿವಿಧೆಡೆ ಓಡಾಡಿ ಮೊದಲು ಮನೆ ಮುಂದಿರುವ ವಾಹನಗಳನ್ನು ಗುರುತಿಸುತ್ತಿದ್ದ. ವಾಹನಗಳ ನಂಬರ್ ಅನ್ನು ಬಿಟಿಪಿ ಆ್ಯಪ್ ಮೂಲಕ ಪರಿಶೀಲಿಸುತ್ತಿದ್ದ. ವಾಹನದ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ, ದಂಡ ಬಾಕಿ ಇದ್ದರೆ ಅಂತಹ ವಾಹನಗಳನ್ನು ಕದಿಯುತ್ತಿರಲಿಲ್ಲ. ಯಾವುದೇ ಪ್ರಕರಣಗಳಿಲ್ಲದ ವಾಹನಗಳನ್ನು ಕದಿಯುತ್ತಿದ್ದ. ಕದ್ದ ನಂತರ ಬೈಕ್ ಮಾರಿದರೆ ಕಳ್ಳತನ ಮಾಡಿರುವುದು ತಿಳಿಯಬಹುದೆಂದು ಸಂಬಂಧಿಕರಿಗೆ ಉಚಿತವಾಗಿ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಭರತ್ ಕಳ್ಳತನ ಮಾಡಿದ ಬೈಕ್​ಗಳು
ಆರೋಪಿ ಭರತ್ ಕಳ್ಳತನ ಮಾಡಿದ ಬೈಕ್​ಗಳು

ಆರೋಪಿ ಸಿಕ್ಕಿ ಬಿದ್ದದ್ದು ಹೇಗೆ?: ರಾಜಾಜಿನಗರದ ನಿವಾಸಿ ನರೇಶ್ ಜನವರಿ 16 ರಂದು ರಾತ್ರಿ ಸುಮಾರು 10 ಗಂಟೆಗೆ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಮರು ದಿನ ಬೆಳಗ್ಗೆ ನೋಡಿದಾಗ ತಮ್ಮ ದ್ವಿಚಕ್ರ ವಾಹನ ಇರಲಿಲ್ಲ. ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿ ಭರತ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ 7 ಸ್ಕೂಟರ್‌ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಭರತ್ ದೂರದ ಸಂಬಂಧಿ ಗುತ್ತಿಗೆದಾರನಾಗಿದ್ದು, ಈ ಹಿಂದೆ ಅವರ ಬಳಿ ಬಾರ್‌ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ತೊರೆದು ಸ್ಕೂಟರ್‌ ಕಳ್ಳತನಕ್ಕೆ ಕೈ ಹಾಕಿದ್ದ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.