ETV Bharat / city

ಜರ್ಮನಿಯಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್​​ ಸೋಂಕು - ಜರ್ಮನಿಯಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್​​ ಸೋಂಕು

ಒಮಿಕ್ರಾನ್ ಆತಂಕದ ನಡುವೆಯೇ ಜರ್ಮನಿಯಿಂದ ಇಂದು ಬೆಳಗ್ಗೆ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

Two passengers from Germany Covid positive
ಜರ್ಮನಿಯಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್​​ ಸೋಂಕು
author img

By

Published : Dec 8, 2021, 2:37 PM IST

ದೇವನಹಳ್ಳಿ(ಬೆಂಗಳೂರು): ಜರ್ಮನಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಜರ್ಮನಿಯಿಂದ ಬಂದ ಪ್ರಯಾಣಿಕರ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿದ್ದಾಗ, ಇಬ್ಬರು ಪ್ರಯಾಣಿಕರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. 40 ಮತ್ತು 50 ವರ್ಷದ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.

ಈ ಇಬ್ಬರು ಸೋಂಕಿತರಲ್ಲಿ ಓರ್ವ ಅಧಿಕಾರಿಗಳ ಕಣ್ಣು ತಪ್ಪಿಸಿಕೊಂಡು ನಾಪತ್ತೆಯಾಗಿದ್ದ. ಆತನ ಮೊಬೈಲ್​ ಫೋನ್​​ ಸ್ಚಿಚ್ಡ್​​​​ ಆಫ್​​ ಆಗಿದ್ದು, ಕೆಲಕಾಲ ಏರ್​​ಪೋರ್ಟ್​ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಆತನ ಫೋಟೋದ ಆಧಾರದ ಮೇಲೆ ಏರ್​​ಪೋರ್ಟ್ ನಲ್ಲಿ ಪೊಲೀಸರು ಪತ್ತೆ ಮಾಡಿ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ದೈನಂದಿನ ಕೋವಿಡ್‌ ಸೋಂಕಿತರ ಪ್ರಮಾಣ ಸ್ವಲ್ಪ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.