ಬೆಂಗಳೂರು: ಆರೋಗ್ಯ ಕೇಂದ್ರದಲ್ಲಿ ಕೊರೊನಾ ವರದಿಯನ್ನು ಹಣ ಪಡೆದು ನೆಗೆಟಿವ್ ಎಂದು ನೀಡುತ್ತಿದ್ದ ಇಬ್ಬರು ಸೇವಾ ಸಿಬ್ಬಂದಿಯನ್ನು ಪಾಲಿಕೆ ವಜಾಗೊಳಿಸಿದೆ.
![taffs fired from bbmp](https://etvbharatimages.akamaized.net/etvbharat/prod-images/kn-bng-4-ashaworker-action-bbmp-photo1-7201801_27102020193945_2710f_1603807785_796.jpg)
ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತಿ ಹಾಗೂ ಮಹಾಲಕ್ಷ್ಮಿ, ಲ್ಯಾಬ್ ಟೆಕ್ನಿಷಿಯನ್(ಎನ್.ಯು.ಹೆಚ್.ಎಂ ಸಿಬ್ಬಂದಿ) ಕೋವಿಡ್ -19ರ ಸ್ವಾಬ್ ಪರೀಕ್ಷೆಗಳ ಮಾರ್ಗಸೂಚಿಗಳನ್ನು ಪಾಲಿಸದೇ ಲ್ಯಾಬ್ ನೆಗೆಟಿವ್ ವರದಿ ನೀಡಲು 2500 ರೂ. ಹಣ ಪಡೆದು, ಕೊರೊನಾ ನೆಗೆಟಿವ್ ವರದಿ ನೀಡಿರುವುದು ದೃಢಪಟ್ಟಿದೆ. ಈ ಕಾರಣಕ್ಕೆ ಶಾಂತಿ(ಆಶಾ ಕಾರ್ಯಕರ್ತೆ) ಹಾಗೂ ಮಹಾಲಕ್ಷ್ಮಿ(ಲ್ಯಾಬ್ ಟೆಕ್ನಿಷಿಯನ್)ರವರನ್ನು ಪಾಲಿಕೆಯ ಸೇವೆಯಿಂದ ಇಂದು ವಜಾಗೊಳಿಸಲಾಗಿದೆ.
ಮುಂದುವರೆದಂತೆ, ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದಾಧಿಕಾರಿಯಾದ ಡಾ. ಶೈಲಜಾರನ್ನ ಕರ್ತವ್ಯ ನಿರ್ಲಕ್ಷತನ ಹಿನ್ನೆಲೆಯಲ್ಲಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಂಟಿ ಆಯುಕ್ತರು( ದಕ್ಷಿಣ) ಮಾಹಿತಿ ನೀಡಿದ್ದಾರೆ.