ETV Bharat / city

ಲಾರಿ ಡ್ರೈವರ್​ಗಳಿಗೆ ಗಾಂಜಾ ಮಾರಾಟ ಯತ್ನ-ಇಬ್ಬರು ಆರೋಪಿಗಳು ಅಂದರ್​! - Marijuana selling to lorry drivers

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಟಾಫೇ ಪ್ಯಾಕ್ಟರಿ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುವ ಸುಳಿವು ಸಿಕ್ಕ ಹಿನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್​​ಪೆಕ್ಟರ್ ಸತೀತ್ ಬಿ ಎಸ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ..

two arrested under Marijuana selling case at doddaballapura
ದೊಡ್ಡಬಳ್ಳಾಪುರ ಗಾಂಜಾ ಮಾರಾಟ ಪ್ರಕರಣದ ಆರೋಪಿಗಳು
author img

By

Published : Jan 22, 2022, 1:14 PM IST

ದೊಡ್ಡಬಳ್ಳಾಪುರ(ಬೆಂಗಳೂರು) : ಶೀಘ್ರ ಹಣ ಸಂಪಾದಿಸಲು ಅಡ್ಡದಾರಿ ಹಿಡಿದ ಇಬ್ಬರು ಗಾಂಜಾ ವ್ಯಸನಿಗಳು ಲಾರಿ ಡ್ರೈವರ್​ಗಳಿಗೆ ಗಾಂಜಾ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಾರೆ. ಆರೋಪಿಗಳಿಂದ 3 ಕೆಜಿ 100 ಗ್ರಾಂ ಒಣಗಿದ ಗಾಂಜಾ ಸೊಪ್ಪುನ್ನು ವಶಕ್ಕೆ ಪಡೆಯಲಾಗಿದೆ.

doddaballapura Marijuana selling case
ವಶಕ್ಕೆ ಪಡೆದ ಗಾಂಜಾ ಸೊಪ್ಪು

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಟಾಫೇ ಪ್ಯಾಕ್ಟರಿ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುವ ಸುಳಿವು ಸಿಕ್ಕ ಹಿನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್​​ಪೆಕ್ಟರ್ ಸತೀತ್ ಬಿ ಎಸ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸುರೇಂದ್ರ (30) ಹಾಗೂ ಪವನ್ ಕುಮಾರ್ (19) ಎಂಬ ಇಬ್ಬರನ್ನು ಬಂಧಿಸಿ, ಆರೋಪಿಗಳಿಂದ 1 ಕೆಜಿ 800 ಗ್ರಾಂ ಮತ್ತು 1 ಕೆಜಿ 300 ಗ್ರಾಂ ತೂಕದ ಎರಡು ಗಾಂಜಾ ಚೀಲಗನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಚಾಮರಾಜನಗರ : ನಿಂತಿದ್ದ ಲಾರಿಯಲ್ಲಿತ್ತು ₹9 ಲಕ್ಷ.. ಮತ್ತೆ ಬಂದು ನೋಡುವಷ್ಟರಲ್ಲಿ..

ಬಂಧಿತ ಆರೋಪಿಗಳು ಸ್ವತಃ ಗಾಂಜಾ ವ್ಯಸನಿಗಳಾಗಿದ್ದಾರೆ. ಬೇಗ ಹಣ ಮಾಡುವ ಕಾರಣಕ್ಕೆ ಗಾಂಜಾ ಮಾರಾಟ ಮಾಡುವ ಯತ್ನಕ್ಕೆ ಕೈ ಹಾಕಿದ್ರು. ಕೈಗಾರಿಕಾ ಪ್ರದೇಶಕ್ಕೆ ಬರುವ ಲಾರಿ ಡ್ರೈವರ್ ಮತ್ತು ಯುವಕರಿಗೆ ಗಾಂಜಾ ಮಾರಾಟ ಮಾಡಲು ಗಾಂಜಾ ತಂದಿದ್ದ ಸಮಯದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.