ETV Bharat / city

ಬಿಜೆಪಿ, ಕಾಂಗ್ರೆಸ್ ನಡುವೆ ಪರ್ಸಂಟೇಜ್ ವಾರ್: 'ಪರ್ಸಂಟೇಜ್‌ ಸೀದಾರೂಪಯ್ಯ' ಎಂದು ಟೀಕಿಸಿದ ಬಿಜೆಪಿ - ಬಿಜೆಪಿ, ಕಾಂಗ್ರೆಸ್ ನಡುವೆ ಪರ್ಸಂಟೇಜ್ ವಾರ್

ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲೇ ಅಲ್ಲವೇ ಡಿಕೆಶಿ ಇಂಧನ ಸಚಿವರಾಗಿದ್ದದ್ದು?. ಅವರ ಕಾಲದಲ್ಲೇ ಭ್ರಷ್ಟಾಚಾರ 12% ಗೆ ಏರಿಕೆ ಆಯ್ತು ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣದಿಂದ ತಿಳಿದು ಬಂದಿದೆ. ಇದರಲ್ಲಿ ನಿಮ್ಮ ಪಾಲೆಷ್ಟು ಸೀದಾರೂಪಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

Twitter  war Between bjp and  Congress
ಬೆಂಗಳೂರು
author img

By

Published : Nov 28, 2021, 2:17 PM IST

ಬೆಂಗಳೂರು: ಬಿಜೆಪಿ ಕಾಂಗ್ರೆಸ್ ನಡುವೆ ಇದೀಗ ಪರ್ಸೆಂಟೇಜ್ ವಾರ್ ಶುರುವಾಗಿದೆ. ಟ್ವೀಟ್ ಮೂಲಕ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜಭವನದ ಕದ ತಟ್ಟಿದರೆ ಪರ್ಸಂಟೇಜ್ ರಾಜಕಾರಣದ ಪಿತಾಮಹ ಯಾರು ಎಂದು ಪ್ರಶ್ನಿಸಿ ಕಾಂಗ್ರೆಸ್​​ಗೆ ಬಿಜೆಪಿ ತಿರುಗೇಟು ನೀಡಿದೆ.

  • ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು?

    √ 12% ಡಿಕೆಶಿ
    √ 10% ಸೀದಾರೂಪಯ್ಯ

    ಮೆಂದ ಇಲಾಖೆಗಳು-
    ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ.

    ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು?

    ಎಲ್ಲ ಸೇರಿ 40% !!!#CorruptCongress pic.twitter.com/CxPXSzS1L0

    — BJP Karnataka (@BJP4Karnataka) November 28, 2021 " class="align-text-top noRightClick twitterSection" data=" ">

ಪರ್ಸಂಟೇಜ್‌ ಸೀದಾರೂಪಯ್ಯ ಹ್ಯಾಷ್ ಟ್ಯಾಗ್‌ನೊಂದಿಗೆ ಸರಣಿ ಟೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದೆ. ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು? 12% ಡಿಕೆಶಿ, 10% ಸೀದಾರೂಪಯ್ಯ ಮಂದ ಇಲಾಖೆಗಳು ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಹೆಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು? ಎಲ್ಲ ಸೇರಿ 40% ಎಂದು ಬಿಜೆಪಿ ಟ್ವಿಟ್ ಮೂಲಕ ಕಾಂಗ್ರೆಸ್​​ಗೆ ಟಾಂಗ್ ನೀಡಿದೆ.

  • ಗುತ್ತಿಗೆದಾರರ ಒಕ್ಕೂಟ ಬರೆದ ಪತ್ರವನ್ನು ಆಧರಿಸಿ ತನಿಖೆ ನಡೆಸುವುದಕ್ಕೆ ಸಿಎಂ ಈಗಾಗಲೇ ಆದೇಶ ನೀಡಿದ್ದಾರೆ.

    ತಾವು ಮುಖ್ಯಮಂತ್ರಿಯಾದ ಬಳಿಕ‌ ನಡೆದ 10 ಕೋಟಿ ಮೇಲ್ಪಟ್ಟ ಎಲ್ಲ ಟೆಂಡರ್‌ಗಳ ಪರಿಶೀಲನೆಗೂ ಸೂಚನೆ ನೀಡಿದ್ದಾರೆ.

    ನಿಮ್ಮ ಬಗ್ಗೆ ಹೇಳಿ, ಭ್ರಷ್ಟಾಚಾರದ ಪಿಸುಮಾತಿಗೆ ನೀವು ಉತ್ತರದಾಯಿಯಲ್ಲವೇ #ಪರ್ಸಂಟೇಜ್‌ಸೀದಾರೂಪಯ್ಯ !? pic.twitter.com/zovfbDmpFi

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿರುವುದು ಇವರಿಗೆ ಇರಬೇಕಲ್ಲವೇ?. 6 ರಿಂದ 8 % ಇದ್ದ ಲಂಚವನ್ನು 12% ಗೆ ಏರಿಸಿದ್ದೇ ಡಿಕೆಶಿ ಎಂದು ಸಲೀಂ ಬಹಿರಂಗವಾಗಿ ಹೇಳಿದ್ದರ ಬಗ್ಗೆ ಮೊದಲು ಮಾತನಾಡಿ, ಹಾಗಾದರೆ ಭ್ರಷ್ಟಾಚಾರವನ್ನು ಸಾಂಘೀಕರಿಸಿದ್ದೇ ನೀವು ಎಂದಾಯ್ತಲ್ಲವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲೇ ಅಲ್ಲವೇ ಡಿಕೆಶಿ ಇಂಧನ ಸಚಿವರಾಗಿದ್ದದ್ದು? ಅವರ ಕಾಲದಲ್ಲೇ ಭ್ರಷ್ಟಾಚಾರ 12% ಗೆ ಏರಿಕೆ ಆಯ್ತು ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣದಿಂದ ತಿಳಿದು ಬಂದಿದೆ. ಇದರಲ್ಲಿ ನಿಮ್ಮ ಪಾಲೆಷ್ಟು ಸೀದಾರೂಪಯ್ಯ? ಎಂದು ಪ್ರಶ್ನಿಸಿದೆ.

ಗುತ್ತಿಗೆದಾರರ ಒಕ್ಕೂಟ ಬರೆದ ಪತ್ರವನ್ನು ಆಧರಿಸಿ ತನಿಖೆ ನಡೆಸುವುದಕ್ಕೆ ಸಿಎಂ ಈಗಾಗಲೇ ಆದೇಶ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾದ ಬಳಿಕ ನಡೆದ 10 ಕೋಟಿ ಮೇಲ್ಪಟ್ಟ ಎಲ್ಲ ಟೆಂಡರ್‌ಗಳ ಪರಿಶೀಲನೆಗೂ ಸೂಚನೆ ನೀಡಿದ್ದಾರೆ. ನಿಮ್ಮ ಬಗ್ಗೆ ಹೇಳಿ, ಭ್ರಷ್ಟಾಚಾರದ ಪಿಸುಮಾತಿಗೆ ನೀವು ಉತ್ತರದಾಯಿಯಲ್ಲವೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರದ ಪಿಸುಮಾತು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಯಾರು? ಡಿಕೆಶಿ ಆರೋಪಿ ಸ್ಥಾನದಲ್ಲಿದ್ದಾರೆ. ನಿಮ್ಮ ಆಪ್ತ ಉಗ್ರಪ್ಪ ಆರೋಪಿಸಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸಂಟೇಜ್ ಏರಿಕೆಯಾಗಿದೆ. ತನಿಖೆ ಯಾರು ನಡೆಸಬೇಕು ಎಂದು ಸಿದ್ದರಾಮಯ್ಯರನ್ನೇ ಗುರಿಯಾಗಿಸಿ ಸರಣಿ ಪ್ರಶ್ನೆಗಳನ್ನು ಕೇಳಿದೆ.

ಇದನ್ನೂ ಓದಿ: ಇಸ್ರೋ ಖಾಸಗೀಕರಣದ ವಿರುದ್ಧ ಡಿಕೆಶಿ ಕಿಡಿ: ಸರ್ಕಾರಕ್ಕೆ 'ಒಂದು ಪ್ರಶ್ನೆ' ಕೇಳಿದ ಕೈ ನಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.