ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಇಂದು ಒಂದೇ ದಿನ 36 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಸೋಂಕಿತರ ಸಂಖ್ಯೆ 315ಕ್ಕೇರಿದೆ.
ಬೆಂಗಳೂರು ನಗರ 5, ಬೆಳಗಾವಿ 17, ಕಲಬುರಗಿ 3, ಮೈಸೂರು 3, ಗದಗ 1, ವಿಜಯಪುರದಲ್ಲಿ 7 ಮಂದಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರಿನ 66 ವರ್ಷದ 195ನೇ ಸಂಖ್ಯೆ ಸೋಂಕಿತ ವ್ಯಕ್ತಿ ಕೊರೊನಾದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ಮೊದಲು ನಗರದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಪ್ರಿಲ್ 10ರಂದು ವಿಕ್ಟೋರಿಯಾಗೆ ರವಾನಿಸಲಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಪ್ರಥಮ ಸಂಪರ್ಕ ಹೊಂದಿದ್ದ ಪತ್ನಿ, ಪುತ್ರ, ಅಳಿಯ ಹಾಗೂ ಆಟೋ ಚಾಲಕನ ಪರೀಕ್ಷೆ ನಡೆಸಿದ್ದು, ಅವರಿಗೆ ಕೊರೊನಾ ನೆಗಟಿವ್ ವರದಿ ಬಂದಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ:
280ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಂಗಳೂರಿನ 13 ವರ್ಷದ ಬಾಲಕ, ಸೋಂಕಿತ -252ರ ಸಂಪರ್ಕಿತ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
281ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಂಗಳೂರಿನ 65 ವರ್ಷದ ಮಹಿಳೆ, ಸೋಂಕಿತೆಗೆ ತೀವ್ರ ಉಸಿರಾಟದ ಸಮಸ್ಯೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
282ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 42 ವರ್ಷದ ಪುರುಷ, ಸೋಂಕಿತ -225 ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
283ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 51 ವರ್ಷದ ಮಹಿಳೆ, ಸೋಂಕಿತೆ-224ರ ಸಂಪರ್ಕಿತೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
284ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 33 ವರ್ಷದ ಯುವಕ, ಸೋಂಕಿತ -225 ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
285ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 16 ವರ್ಷದ ಬಾಲಕಿ, ಸೋಂಕಿತೆ-224 ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
286ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 65 ವರ್ಷದ ಮಹಿಳೆ, ಸೋಂಕಿತೆ-224ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
287ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 30 ವರ್ಷದ ಮಹಿಳೆ, ಸೋಂಕಿತೆ-224ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
288ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 54 ವರ್ಷದ ಮಹಿಳೆ, ಸೋಂಕಿತೆ-224ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
289ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ ಹಿರೇಬಾಗೇವಾಡಿಯ 58 ವರ್ಷದ ಮಹಿಳೆ, ಸೋಂಕಿತೆ-224ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
290ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ 54 ವರ್ಷದ ಮಹಿಳೆ ಬೆಂಗಳೂರಿನಲ್ಲಿ ದಾಖಲು, ಸಂಪರ್ಕ ಪತ್ತೆ ಕಾರ್ಯ ನಡೆದಿದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
291ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಂಗಳೂರು ನಗರದ 37 ವರ್ಷದ ಯುವಕ, ಸಂಪರ್ಕ ಪತ್ತೆ ಕಾರ್ಯ ನಡೆದಿದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
292ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಂಗಳೂರು ನಗರದ 43 ವರ್ಷದ ಯುವಕ, ಸಂಪರ್ಕ ಪತ್ತೆ ಕಾರ್ಯ ನಡೆದಿದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
293ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 47 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನೆಲೆ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
294ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿ ಜಿಲ್ಲೆ ರಾಯಬಾಗದ 25 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನೆಲೆ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
295ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿಯ 45 ವರ್ಷದ ಮಹಿಳೆ, ದೆಹಲಿಗೆ ಹೋಗಿ ಬಂದ ಹಿನ್ನೆಲೆ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
296ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿ ಜಿಲ್ಲೆ ರಾಯಬಾಗದ 30 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನೆಲೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
297ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿ ಜಿಲ್ಲೆ ರಾಯಬಾಗದ 43 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನೆಲೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
298ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಗೋವಾದ 50 ವರ್ಷದ ನಿವಾಸಿ, ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ ಒಂದು ತಿಂಗಳಿನಿಂದ ವಾಸ, ಸೋಂಕಿತ -245ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
299ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 35 ವರ್ಷದ ವ್ಯಕ್ತಿ, ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ ಒಂದು ತಿಂಗಳಿನಿಂದ ವಾಸ, ಸೋಂಕಿತ-245ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
300ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಮಹಾರಾಷ್ಟ್ರದ 50 ವರ್ಷದ ಮೀರಜ್ ನಿವಾಸಿ, ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ ಒಂದು ತಿಂಗಳಿನಿಂದ ವಾಸ, ಸೋಂಕಿತ -245ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
301ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಬೆಳಗಾವಿ ಜಿಲ್ಲೆ ರಾಯಬಾಗದ 64 ವರ್ಷದ ವ್ಯಕ್ತಿ, ಸೋಂಕಿತ-245 ರ ಸಂಪರ್ಕಿತ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
302ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಕಲಬುರಗಿಯ 23 ವರ್ಷದ ಯುವತಿ, ಸೋಂಕಿತ -274ರ ಸಂಪರ್ಕಿತ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
303ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಮೈಸೂರಿನ 52 ವರ್ಷದ ವ್ಯಕ್ತಿ, ಫಾರ್ಮಾ ಕಂಪನಿ ಉದ್ಯೋಗಿ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
304ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಗದಗದ 59 ವರ್ಷದ ಮಹಿಳೆ, ಸೋಂಕಿತ-166ರ ಸಂಪರ್ಕಿತೆ, ಗದಗದ ಆಸ್ಪತ್ರೆಯಲ್ಲಿ ಚಿಕಿತ್ಸೆ
305ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 12 ವರ್ಷದ ಬಾಲಕ, ಸೋಂಕಿತ-221ರ ಸಂಪರ್ಕಿತ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
306ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 65 ವರ್ಷದ ವ್ಯಕ್ತಿ, ಸೋಂಕಿತ-221ರ ಸಂಪರ್ಕಿತ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
307ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 66 ವರ್ಷದ ವ್ಯಕ್ತಿ, ಸೋಂಕಿತ- 221ರ ಸಂಪರ್ಕಿತ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
308ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 37 ವರ್ಷದ ವ್ಯಕ್ತಿ, ಸೋಂಕಿತ-221ರ ಸಂಪರ್ಕಿತ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
309ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 70 ವರ್ಷದ ಮಹಿಳೆ, ಸೋಂಕಿತ-221ರ ಸಂಪರ್ಕಿತ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
310ನೇ ಸಂಖ್ಯೆಯ ಸೋಂಕಿತ ಮಗು: ವಿಜಯಪುರದ 1.5 ವರ್ಷದ ಹೆಣ್ಣು ಶಿಶು, ಸೋಂಕಿತ-228 ಮತ್ತು 232ರ ಸಂಪರ್ಕ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
311ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಮೈಸೂರಿನ 38 ವರ್ಷದ ವ್ಯಕ್ತಿ, ಫಾರ್ಮಾ ಕಂಪನಿ ಉದ್ಯೋಗಿ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
312ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಮೈಸೂರಿನ 26 ವರ್ಷದ ಯುವತಿ, ಸೋಂಕಿತ-77 ಫಾರ್ಮಾ ಕಂಪನಿ ಉದ್ಯೋಗಿಯ (ಪತ್ನಿ) ಸಂಪರ್ಕಿತೆ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
313ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ವಿಜಯಪುರದ 55 ವರ್ಷದ ಮಹಿಳೆ, ಸೋಂಕಿತ- 221ರ ಸಂಪರ್ಕಿತೆ, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
314ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಕಲಬುರಗಿಯ 32 ವರ್ಷದ ಯುವಕ, ಬೆಂಗಳೂರಿಗೆ ಪ್ರಯಾಣ ಮಾಡಿದ್ದ ಹಿನ್ನೆಲೆ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
315ನೇ ಸಂಖ್ಯೆಯ ಸೋಂಕಿತ ವ್ಯಕ್ತಿ: ಕಲಬುರಗಿಯ 5 ವರ್ಷದ ಗಂಡು ಶಿಶು, ಮಾಹಿತಿ ಸಂಗ್ರಹಿಸಲಾಗುತ್ತಿದೆ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.