ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಪ್ರಮುಖ ಬೇಡಿಕೆ ಈಡೇರದ ಕಾರಣ ಮುಷ್ಕರ ಮುಂದುವರಿಸಿರುವುದಾಗಿ ಸಾರಿಗೆ ನೌಕರರರು ನಿರ್ಧರಿಸಿದ್ದಾರೆ ಎಂದು ಸಾರಿಗೆ ಯೂನಿಯನ್ ಮುಖಂಡ ಚಂದ್ರಶೇಖರ್ ಹೇಳಿದ್ದಾರೆ. ಆದ್ರೆ ಸಂಧಾನ ಸಭೆ ಸಫಲವಾಗಿದೆ ಎಂದು ಸಚಿವ ಲಕ್ಷಣ ಸವದಿ ಹೇಳಿಕೆ ನೀಡಿದ್ದಾರೆ. ಇದರಿಂದ ಗೊಂದಲ ಮೂಡಿದೆ.
ಓದಿ: ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ: ಲಕ್ಷ್ಮಣ ಸವದಿ
'ಸರ್ಕಾರದೊಂದಿಗೆ ನಡೆಸಿದ ಮಾತುಕತೆ ನಡೆಸಿದ ಯಶಸ್ವಿಯಾಗಿಲ್ಲ, ಸಂಧಾನ ವಿಫಲವಾಗಿದೆ. ಪ್ರಮುಖ ಬೇಡಿಕೆ ಈಡೇರಿಸುವರೆಗೂ ಮುಷ್ಕರ ಎಂದಿನಂತೆ ಮುಂದುವರಿಸಲಾಗುವುದು' ಎಂದು ಯೂನಿಯನ್ ಮುಖಂಡ ಚಂದ್ರಶೇಖರ್ ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಸಮಾಧಾನ ತಂದಿಲ್ಲ. ಯಾವುದೇ ಕಾರಣಕ್ಕೂ ಬಸ್ ಸಂಚಾರ ಮಾಡೋದಿಲ್ಲ ಅವರು ಹೇಳಿದರು.