ETV Bharat / city

ದೇವಾಲಯಗಳಲ್ಲಿ ಪೂಜೆ‌‌ ಮಾಡುವವರ ಅಂತರಂಗ, ಬಹಿರಂಗ ಶುದ್ಧಿಯಾಗಿರಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ

author img

By

Published : Jan 7, 2021, 2:59 PM IST

Updated : Jan 7, 2021, 3:05 PM IST

ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಕೇಂದ್ರಗಳೂ ಆಗಿವೆ. ದೇವಸ್ಥಾನಗಳು ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಬೇಕಿದೆ. ದೇವಾಲಯದ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು ಒಳ್ಳೆಯ ಕಾರ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Veerendra hegde
ವೀರೇಂದ್ರ ಹೆಗ್ಗಡೆ

ಬೆಂಗಳೂರು: ದೇವಾಲಯದಲ್ಲಿ ಪೂಜೆ‌ ಮಾಡುವವರ ಅಂತರಂಗ ಬಹಿರಂಗ ಶುದ್ಧಿಯಾಗಿರಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ವಿಧಾನಸೌಧದಲ್ಲಿ ಆಯೋಜಿಸಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ತರಬೇತಿ ಹಾಗೂ ದೇವಸ್ಥಾನಗಳ ಪರಂಪರೆಯನ್ನು ಪರಿಚಯಿಸುವ ಗುಡಿ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಪವಿತ್ರತೆಯನ್ನು, ದೇವಾಲಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ ಇದೆ. ದೇವಾಲಯದ ಪರಿಸ್ಥಿತಿಯನ್ನು ಶುದ್ದಿಯಾಗಿಟ್ಟುಕೊಳ್ಳಬೇಕು. ಹೊರಗಿನ ಪರಿಸರ ಹಾಗೂ ದೇವಸ್ಥಾನದಲ್ಲಿ ಶುದ್ಧವಾಗಿರಬೇಕು. ಅಂತರಂಗ ಶುದ್ಧಿಗೆ ತಪಸ್ಸು, ಧ್ಯಾನ ಬೇಕಾಗುತ್ತದೆ. ನಮ್ಮ ಕ್ಷೇತ್ರದ ಪರಿಸರವನ್ನ ವಿಶೇಷವಾಗಿ ಇಟ್ಟುಕೊಳ್ಳಬೇಕು. ಮೂಲ ಸಾನಿಧ್ಯವನ್ನು ನಾವು ರಕ್ಷಣೆ ಮಾಡಬೇಕು ಎಂದು ವಿವರಿಸಿದರು.

ಭೀಕರ ಕಾಯಿಲೆಗಳು ರಾಜ್ಯಕ್ಕೆ ಬಂದಾಗ ಭಗವಂತ ದೊಡ್ಡ ಅನುಗ್ರಹ ಕೊಡಬೇಕು. ಕರ್ನಾಟಕದಲ್ಲಿ ಅನೇಕ ದೇವಾಲಯಗಳ ಜೀರ್ಣೋದ್ಧಾರಗಳಾಗಿವೆ. ನಮ್ಮ ದೇಶದಲ್ಲಿ ಧರ್ಮ ಬಿಟ್ರೆ ಬೇರೆ ಯಾವುದೇ ಶಕ್ತಿ ಇಲ್ಲ. ಸಮಾಜವನ್ನ ಒಗ್ಗೂಡಿಸುವುದು ದೇವಾಲಯಗಳು. ದೇವಾಲಯ ಎಲ್ಲಾ ಚಟುವಟಿಕೆಯ ಕೇಂದ್ರಗಳಾಗಿವೆ. ದೇವಸ್ಥಾನಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಹಾಗೂ ನಮ್ಮೆಲ್ಲರ ಕರ್ತವ್ಯ. ಕೊರೊನಾ ನಾವು ಮಡಿವಂತಿಕೆಯನ್ನು ಪಾಲಿಸಬೇಕು ಎನ್ನುವ ಸಂದೇಶ ನೀಡಿದೆ ಎಂದರು.

ನಾವು ಧರ್ಮ ರಕ್ಷಣೆ ಮಾಡಲೇಬೇಕು:

ನಾವು ಧರ್ಮ ರಕ್ಷಣೆ ಮಾಡಲೇಬೇಕು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕು ಎಂದು ರವಿ ಶಂಕರ್ ಗುರೂಜಿ ತಿಳಿಸಿದರು. ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಕೇಂದ್ರಗಳೂ ಆಗಿವೆ. ದೇವಸ್ಥಾನಗಳು ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಬೇಕಿವೆ. ದೇವಾಲಯದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು ಒಳ್ಳೆಯ ಕಾರ್ಯ. ಅಲ್ಲಿಯ ಅರ್ಚಕರು ಸ್ವಚ್ಛವಾಗಿ ಇರಬೇಕು. ದೇವಾಲಯದ ಸ್ವಚ್ಚತಾ ಕಾರ್ಯಕ್ಕೆ ಒತ್ತು ಕೊಡಬೇಕು. ದೇವರಿಗೆ ಹಾಕುವ ಹೂವುಗಳನ್ನು ಗೊಬ್ಬರಕ್ಕೆ ಬಳಕೆ ಮಾಡುವಂತಾಗಬೇಕು. ಕನ್ನಡದಲ್ಲಿ ಪೂಜೆ ನಡೆಯುವ ಪ್ರಕ್ರಿಯೆ ಒಳ್ಳೆಯದು. ರಾಜ್ಯದ ಹಲವು ದೇವಾಲಯಗಳಲ್ಲಿ ಕನ್ನಡದಲ್ಲಿ ಪೂಜೆ ನಡೆಯುತ್ತಿದೆ. ಭರವಸೆಯಿಂದಲೇ ಪೂಜೆಗೆ ಅರ್ಥ ಬರೋದು ಎಂದರು.

ದೇವಾಲಯ ಶಾಶ್ವತವಾಗಿರಬೇಕು...

ದೇವಾಲಯವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ಉತ್ತಮವಾಗಿ ನಡೆಸಿಕೊಂಡು ಹೋದ್ರೆ ಯಶಸ್ಸು ಸಿಗಲಿದೆ. ದೇವಸ್ಥಾನಗಳಲ್ಲಿ ಬೇಗ ಬೇಗ ಹೋಗಿ, ಬೇಗ ಬೇಗ ಕಳಿಸೋ ಪದ್ಧತಿ ಇದೆ. ಆದ್ರೆ ಬಂದ ಭಕ್ತರನ್ನ ಒಂದಷ್ಟು ಗಳಿಗೆ ಕೂರಲು ಬಿಡಬೇಕು. ದೇವಸ್ಥಾನ ತಪೋ ಭೂಮಿಯಾಗಿರಬೇಕು. ದೇವಸ್ಥಾನದಲ್ಲಿ ಅಭಿಷೇಕ, ತೀರ್ಥವೆಲ್ಲ ಚರಂಡಿಗೆ ಬಿಡಲಾಗ್ತಿದೆ. ಆದ್ರೆ ಅವೆಲ್ಲವನ್ನೂ ಜನರಿಗೆ ಹಂಚುವ ಕೆಲಸವಾಗಬೇಕು. ರಾಜಾಶ್ರಯ ಇದ್ರೆ ಮಾತ್ರ ಧರ್ಮ ಉಳಿಯೋಕೆ ಸಾಧ್ಯ. ಇಲ್ಲದೆ ಇದ್ರೆ ಧರ್ಮ ಉಳಿಯಲು ಸಾಧ್ಯವಿಲ್ಲ. ನಮ್ಮ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಯಾಕ್ ಹೋಗ್ತಾರೆ ಅಂದ್ರೆ ಅಲ್ಲಿ ಆಕರ್ಷಣೆ ಇರುತ್ತದೆ. ನಮ್ಮ ಶಾಸ್ತ್ರದಲ್ಲಿ ಇರುವ ನುಡಿಗಳನ್ನು ಎಲ್ಲಾ ದೇವಸ್ಥಾನಗಳಲ್ಲಿ ಹಾಕಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್

ಮುಜರಾಯಿ ಇಲಾಖೆಯಲ್ಲಿ ಪಾರದರ್ಶಕತೆ ತರುತ್ತೇವೆ:

ಜಿಲ್ಲಾ ಮಟ್ಟದ ದೇವಾಲಯಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರುಗಳ ಕಾರ್ಯಾಗಾರ ಏರ್ಪಡಿಸಲಾಗಿದೆ. ಇಲಾಖೆ ಆಡಳಿತದಲ್ಲಿ ಪಾರದರ್ಶಕತೆ ತರಲು, ಇಲಾಖೆ ಕಡತಗಳು ತ್ವರಿತ ಗತಿಯಲ್ಲಿ ವಿಲೇವಾರಿಯಾಗಲು ಇ- ಆಫೀಸ್ ತಂತ್ರಾಂಶವನ್ನು ಇಂದಿನಿಂದ ಜಾರಿಗೆ ತರಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ತಿಳಿಸಿದರು.

ಪ್ರಮುಖ ದೇವಸ್ಥಾನದಲ್ಲಿ ಆದ್ಯತೆ ಮೇಲೆ ಪೂಜೆ, ಪ್ರತ್ಯೇಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂಗವಿಕಲರಿಗೆ, ವಯೋವೃದ್ದರಿಗೆ ಅವಕಾಶ ಮಾಡಲಾಗುತ್ತದೆ. ರಾಜ್ಯದಿಂದ ತಿರುಮಲ, ಮಂತ್ರಾಲಯ, ಶ್ರೀಶೈಲಂ ಮತ್ತು ವಾರಣಾಸಿಗೆ ತೆರಳುವ ಯಾತ್ರಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೋ ಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ನಮ್ಮ ಭಾವನೆಗಳಿಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಮಹಾತ್ಮ ಗಾಂಧಿಯಿಂದ ಈ ನೆಲದ ರೈತರವರೆಗೂ ಎಲ್ಲರೂ ಗೋಹತ್ಯಾ ನಿಷೇಧ ಜಾರಿ ಆಗಬೇಕು ಎಂದು ಬಯಸಿದ್ದರು ಎಂದರು.

ನಮ್ಮ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 65 ವರ್ಷ ಮೇಲ್ಪಟ್ಟ ಅರ್ಚಕರಿಗೆ ಪಿಂಚಣಿ ಸೌಲಭ್ಯ ನೀಡಲು ಚಿಂತನೆ ನಡೆದಿದೆ ಎಂದರು. ಜೊತೆಗೆ ವಿಮೆ ಸೌಲಭ್ಯ ನೀಡಲು ಯೋಜಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

Last Updated : Jan 7, 2021, 3:05 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.