ETV Bharat / city

ಲ್ಯಾಂಡಿಂಗ್ ವೇಳೆ ರನ್ ವೇನಲ್ಲಿ ಕಾಣಿಸಿಕೊಂಡ ನಾಯಿಗಳು : ಪಲ್ಟಿಯಾದ ಲಘು ವಿಮಾನ - Accident if landing during a busy light flight

ಜಕ್ಕೂರು ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಗಿ ಸ್ವಲ್ಪ ದೂರ ರನ್ ವೇನಲ್ಲಿ ಸಾಗುತ್ತಿದ್ದಾಗ ನಾಯಿಗಳು ಕಾಣಿಸಿಕೊಂಡು ಅವುಗಳನ್ನು ತಪ್ಪಿಸಲು ಹೊದಾಗ ಘಟನೆ ಸಂಭವಿಸಿದೆ..

small jet accident
ಲ್ಯಾಂಡಿಂಗ್ ವೇಳೆ ರನ್ ವೇನಲ್ಲಿ ಕಾಣಿಸಿಕೊಂಡ ನಾಯಿಗಳು : ಪಲ್ಟಿಯಾದ ಲಘು ವಿಮಾನ
author img

By

Published : Apr 18, 2022, 6:10 PM IST

ಬೆಂಗಳೂರು : ತರಬೇತಿಯಲ್ಲಿ ನಿರತ ಲಘು ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ಭಾನುವಾರ ಸಂಜೆ ನಗರದ ಜಕ್ಕೂರು ವಾಯುನೆಲೆಯಲ್ಲಿ ನಡೆದಿದೆ. ಖಾಸಗಿ ಕಂಪನಿಗೆ ಸೇರಿದ ವಿಮಾನದಲ್ಲಿ ತರಬೇತಿ ನಡೆಯುತ್ತಿದ್ದಾಗ ಲ್ಯಾಂಡಿಂಗ್ ಆದ ವಿಮಾನ ಪಲ್ಟಿಯಾದ ಪರಿಣಾಮ ಪೈಲಟ್​ಗಳಾದ ಕ್ಯಾಪ್ಟನ್ ಆಕಾಶ್ ಹಾಗೂ ಚೆರ್ಲಿ ಆ್ಯನ್ ಸ್ಟರ್ನ್ಸ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೈಲಟ್‌ಗಳ ಪ್ರಕಾರ 'ಲ್ಯಾಂಡಿಂಗ್ ಆಗಿ ಸ್ವಲ್ಪ ದೂರ ಸಾಗುತ್ತಿದ್ದಂತೆ ರನ್ ವೇನಲ್ಲಿ ನಾಯಿಗಳು ಕಾಣಿಸಿಕೊಂಡಿದ್ದು, ತಪ್ಪಿಸುವ ಯತ್ನದಲ್ಲಿ ವಿಮಾನ ಪಲ್ಟಿಯಾಗಿದೆ' ಎನ್ನಲಾಗಿದೆ.

Dogs appearing on the runway if landing
ಪಲ್ಟಿಯಾದ ಲಘು ವಿಮಾನ

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಜೊತೆಗಿದ್ದ ಚೆರ್ಲಿ ಆ್ಯನ್ ಸ್ಟರ್ನ್ಸ್ ಎಂಬ ಮಹಿಳಾ ಪೈಲೆಟ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೇ ಚಿಕಿತ್ಸೆಗಾಗಿ ಹತ್ತಿರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಕ್ಕೂರು ವಾಯುನೆಲೆಯ ಭದ್ರತಾ ವ್ಯವಸ್ಥಾಪಕರ ಕ್ಯಾಪ್ಟನ್ ಅಮರನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಬಿಜೆಪಿಯವರು ಕಾನೂನು ಕೈಗೆತ್ತಿಕೊಂಡಿದ್ದಾರೆ : ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.