ಆನೇಕಲ್, ಬೆಂಗಳೂರು : ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಲಾರಿ ಮೂರು ಭಾಗಗಳಾಗಿದ್ದು, ರೈಲಿನ ಇಂಜಿನ್ ನಜ್ಜುಗುಜ್ಜಾಗಿದೆ. ಆನೇಕಲ್ ಬಳಿಯ ಆವಲಹಳ್ಳಿ ರೈಲಿನ ಹಳಿಯ ಮೇಲೆ ಈ ಘಟನೆ ನಡೆದಿದೆ. ಆದರೆ, ಯಾವುದೇ ಸಾವು-ನೋವುಗಳಾಗಿಲ್ಲ.
ಸೋಮವಾರ ರಾತ್ರಿ 9ಕ್ಕೆ ಬಂದ ವೇಗದ ಎಕ್ಸ್ಪ್ರೆಸ್ ರೈಲಿಗೆ ಅಡ್ಡವಾಗಿ ಟಿಪ್ಪರ್ ಬಂದಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಟಿಪ್ಪರ್ ಸಾಗಿ ಬಂದ ದಾರಿ ಹಳೆಯದಾಗಿದೆ. ಈ ರಸ್ತೆಯನ್ನು ದಶಕಗಳ ಹಿಂದೆಯೇ ಬಳಸಲು ಬಿಟ್ಟಿದ್ದರು.
ಹುಸ್ಕೂರು ರೈಲಿನ ಹಳಿಯ ಅಂಡರ್ ಪಾಸ್ ದ್ವಿಪಥ ರೈಲ್ವೆ ಕಾಮಗಾರಿ ಚಾಲನೆಯಲ್ಲಿದ್ದು, ಉಳಿದಂತೆ ಇದ್ದ ಕಚ್ಚಾ ರಸ್ತೆ ಮಳೆಗೆ ಹಾಳಾಗಿದೆ. ಹಳೆಯ ಮರೆತ ರಸ್ತೆಯ ಮೂಲಕ ರೈಲ್ವೆ ಹಳಿಯನ್ನು ಟಿಪ್ಪರ್ ಲಾರಿ ದಾಟುತಿದ್ದ ವೇಳೆ ಅಪಘಾತ ಸಂಭವಿಸಿದೆ.
ರೈಲು ಶಬ್ಧ ಮಾಡದೇ ವೇಗವಾಗಿ ಬಂದಿದ್ದನ್ನು ಚಾಲಕ ನೋಡದೆ ಮುನ್ನುಗ್ಗಿದಾಗ ಟಿಪ್ಪರ್ ಮುಂದಿನ ಭಾಗ ರೈಲಿಗೆ ಸಿಲುಕಿದೆ. ಇದೀಗ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಾಗೂ ಕತ್ತಲಿನ ಕಾರಣಕ್ಕೆ ರೈಲು ದುರಸ್ತಿ ಕಾರ್ಯ ಮಂದಗತಿಯಲ್ಲಿ ಸಾಗಲಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರೂ ಧಾವಿಸಿದ್ದಾರೆ.
ಇದನ್ನೂ ಓದಿ: ಪ್ರಚಾರದ ಗೀಳಿಗೆ ಬಿದ್ದು ಗಲಾಟೆ ಮಾಡಿ ವಿಡಿಯೋ ಮಾಡಿದ್ದೆವು : ತಪ್ಪೊಪ್ಪಿಕೊಂಡ ಆರೋಪಿಗಳು