ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಜಯನಗರ ಸಂಚಾರಿ ಠಾಣೆ ಸೇರಿದಂತೆ ವಿವಿಧ ಠಾಣೆಗಳು ಬಳಸುವ ಅಧಿಕೃತ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಇದೀಗ ಮತ್ತೆ ಮೂರು ಪೊಲೀಸ್ ಸ್ಟೇಷನ್ಗಳ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.
ಈ ಬಾರಿ ಶಿವಾಜಿನಗರ ಹಾಗೂ ಒಲ್ಡ್ ಏರ್ಪೋರ್ಟ್ ಹಾಗೂ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಗಳ ಟ್ವಿಟರ್ ಖಾತೆ ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳ ಸುಪರ್ದಿಯಲ್ಲಿರುವ ಅಕೌಂಟ್ಗಳಿಂದ ಫೋನ್ ಪೇ ಹಾಗೂ ಒಲಾ ಕ್ಯಾಬ್ ಸೇರಿದಂತೆ ವಿವಿಧ ಕಂಪನಿಗಳ ಜಾಹೀರಾತು ಪೋಸ್ಟ್ ಬರುತ್ತಿವೆ ಎನ್ನಲಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.